ಕೃತಿ ಪರಿಚಯ: ಪ್ರಾರ್ಥನೆ, ಧ್ಯಾನ, ಯೋಗ ದೈವತ್ವದ ಸಂಕೇತವೆನ್ನುವ 'ಯೋಗ ಸೌರಭ'

Upayuktha
0


ಶ್ರೀಯುತ ಹೆಚ್.ಸಿ ಧನಂಜಯ್ ಮೂಲಕ ಶಿಕ್ಷಕರು ಪ್ರವೃತ್ತಿಯಲ್ಲಿ ಉತ್ತಮ ಬರಹಗಾರರು. ಇವರು ಪ್ರೇಮಲೀಲಾ, ಮಕ್ಕಳ ಸೌರಭ, ಪೂರ್ತಿ ಸೌರಭ ಸೇರಿದ ಹಾಗೆ ನಾಲ್ಕೈದು ಕೃತಿಗಳನ್ನು ರಚಿಸಿದ್ದಾರೆ. ಮಂಡ್ಯ ಜಿಲ್ಲೆ ಮತ್ತು ರಾಜ್ಯದ ಮೂಲೆ ಮೂಲೆಯಲ್ಲಿ ನಡೆಯುವ ಕವಿಗೋಷ್ಠಿಗಳಲ್ಲೂ ಕೂಡ ಭಾಗವಹಿಸುವುದರ ಮೂಲಕ ಮೆಚ್ಚಿಗೆ ಸ್ಥಾನವನ್ನು ಪಡೆದಿದ್ದಾರೆ. ಇವರಿಗೆ ಕನ್ನಡ ವಿಕಾಸರತ್ನ ಪ್ರಶಸ್ತಿ ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿ ಸೇರಿದ ಹಾಗೆ ಅನೇಕ ಪ್ರಶಸ್ತಿಗಳು ದೊರಕಿವೆ. ಇವರು ಬರೆದ ನೂತನ ಕೃತಿಯೇ ಯೋಗ ಸೌರಭ. ಇದರ ಸಂಕ್ಷಿಪ್ತ ಪರಿಚಯ ಇಲ್ಲಿದೆ:


=======


ತಂಜಲಿ ಮುನಿಯ ಅಷ್ಟಾಂಗ ಯೋಗ ಕೃತಿಗಿಂತ ಪೂರ್ವದಲ್ಲಿ ಯೋಗದ ಬಗ್ಗೆ ಇದ್ದಕಲ್ಪನೆ ಹಾಗೂ ವಿವರಣೆಯನ್ನು ತಮ್ಮ ಕೃತಿಯಲ್ಲಿ ಲೇಖಕರು ದಾಖಲಿಸಿ ಯೋಗ ಪದದ ಅರ್ಥ ಅದರ ವಿಭಾಗಗಳ ಬಗ್ಗೆ ತಿಳಿಸಿರುವುದು ತುಂಬಾ ಔಚಿತ್ಯ ಪೂರ್ಣವಾಗಿದೆ. ಯಾವ ಯಾವ ವಯಸ್ಸಿನವರು ಎಂದರೆ ಮೂರು ವರ್ಷದಿಂದ ನೂರು ವರ್ಷ ದಾಟಿದವರು ಯೋಗ ಮಾಡಬಹುದೆಂದು ಲೇಖಕರು ಈ ಕೃತಿಯಲ್ಲಿ ತಿಳಿಸಿದ್ದಾರೆ.


ಯೋಗದ ಉಪಯೋಗ ಹಾಗೂ ಆಸನಗಳನ್ನು ಮಾಡುವ ವಿಧಾನಗಳನ್ನು ತಿಳಿಸಿ ದಿನಕ್ಕೊಮ್ಮೆ ಅಥವಾ ದಿನಕ್ಕೆ ಎರಡು ಸಾರಿ ಯೋಗ ಮಾಡಬಹುದೆಂದು ತಿಳಿಸಿದ್ದಾರೆ. ಗಾಳಿ, ಬೆಳಕು ಇರುವ ಕಡೆ ಸಮತಟ್ಟಾದ ನೆಲದ ಮೇಲೆ ಯೋಗ ಜಮಖಾನವನ್ನು ಬಳಸಿ ಯೋಗ ಮಾಡಲು ತಿಳಿಸಿದ್ದಾರೆ. ಈಗ ಮಧುಮೇಹ ಬಹಳಷ್ಟು ಜನರಿಗೆ ಇರುವ ಬಗ್ಗೆ ತಿಳಿಸಿ ಆ ಕಾಯಿಲೆಯನ್ನು ಯೋಗ, ಧ್ಯಾನ ಪ್ರಾರ್ಥನೆ ಮಾಡುವುದರೊಂದಿಗೆ ಹಾಗೂ ಜೀವನಶೈಲಿ ಬದಲಾವಣೆ ಮಾಡಿಕೊಳ್ಳುವುದರಿಂದ ಹೋಗಲಾಡಿಸಬಹುದೆಂದು ತಿಳಿಸಿದ್ದಾರೆ. ಆನಂತರ ಪ್ರಾಣಾಯಾಮದ ಪ್ರಯೋಜನದ ಬಗ್ಗೆ ವಿವರಣೆ ಇಲ್ಲಿದೆ. ಹೃದಯವು ಎಷ್ಟು ಅಮೂಲ್ಯವಾದದ್ದು ಅದನ್ನು ಯಾವ ರೀತಿ ಜೋಪಾನ ಮಾಡಬೇಕು ಎಂಬುದರ ಬಗ್ಗೆ ವಿವರಿಸಿದ್ದಾರೆ. ಯಾವ ಯಾವ ಆಹಾರವೂ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ ಎಂಬುದನ್ನು ತಿಳಿಸಿ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ವಾಸಿ ಮಾಡಿಕೊಳ್ಳಲು ಸಲಹೆ ನೀಡಿದ್ದಾರೆ.


ಅತಿಯಾಗಿ ಕಾಫಿ ಟೀ ಕುಡಿಯುವುದು ಬ್ರಾಂದಿ, ವಿಸ್ಕಿಯ ವ್ಯಸನ ಮದ್ಯಪಾನ ಧೂಮಪಾನ ಮಾಡುವುದರಿಂದ ಗುಟ್ಕಾ ಜಗಿಯುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಿವರಿಸಿದ್ದಾರೆ. ನೀರು ಬಹಳ ಅಮೂಲ್ಯವಾದದ್ದು. ನೀರನ್ನು ಯಾವಾಗ ಎಷ್ಟು ಕುಡಿಯಬೇಕು ಎಂಬುದರ ಬಗ್ಗೆ ವಿವರಣೆ ನೀಡಿದ್ದಾರೆ.


ಕ್ಯಾನ್ಸ‌ರ್ ರೋಗವು ಅಶುದ್ಧ ಆಹಾರ ಸೇವನೆ, ಅಶುದ್ಧ ಗಾಳಿ ಸೇವನೆಯಿಂದ ಬರುವ ಬಗ್ಗೆ ಕೆಲ ಮಹಿಳೆಯರು ಅತಿಯಾಗಿ ಸೌಂದರ್ಯವರ್ಧಕ ಪ್ರಸಾದನ ಬಳಸುವ ಬಗ್ಗೆ ತಿಳಿಸಿದ್ದಾರೆ. ಮಾನಸಿಕ ಖಿನ್ನತೆ ಮಧುಮೇಹ ರಕ್ತದ ಒತ್ತಡ ಪಿತ್ತಜನಕಾಂಗದ ಬಲಹೀನತೆಗೆ ಎಡೆ ಮಾಡಿಕೊಡುವ ಬಗ್ಗೆ ತಿಳಿಸಿ ಯಾವ-ಯಾವ ಆಸನ ಮಾಡುವುದರಿಂದ ಅದ್ಭುತ ರೋಗ ನಿವಾರಣೆ ಮಾಡಿಕೊಳ್ಳಬಹುದೆಂದು ಅದರ ಬಗ್ಗೆ ವಿವರಣೆ ನೀಡಿದ್ದಾರೆ. ಸಮತೋಲನ ಆಹಾರ ಸೇವನೆಯಿಂದ ರೋಗಮುಕ್ತಿಯಾಗುವ ಬಗ್ಗೆ ತಿಳಿಸಿದ್ದಾರೆ. ಅಸ್ತಮ ಕಾಯಿಲೆ ಇರುವವರು ಶೀತಕಾರಕ ಆಹಾರ ಸೇವನೆ ಮಾಡದೆ ಪ್ರಾಣಾಯಾಮ ವನ್ನು ನಿಯಮಿತವಾಗಿ ಪ್ರತಿದಿನ ಮಾಡುವುದರಿಂದ ವಾಸಿ ಮಾಡಿಕೊಳ್ಳುವ ಬಗ್ಗೆ ತಿಳಿಸಿದ್ದಾರೆ. ಅರಿಶಿನ ಕಾಮಾಲೆ ರೋಗದ ಬಗ್ಗೆ ತಿಳಿಸಿ ರೋಗ ಇರುವವರು ಆಹಾರದಲ್ಲಿ ಪಥ್ಯವಿದ್ದು ನಿಯಮಿತವಾದ ಪ್ರಾಣಾಯಾಮ ಮಾಡುವುದರಿಂದ ರೋಗವ ತೀವ್ರತೆಯನ್ನು ತಡೆಗಟ್ಟಬಹುದು ಎಂದು ತಿಳಿಸಿದ್ದಾರೆ.


ಮೂತ್ರಪಿಂಡದ ಮಹತ್ವ ಅದು ಕೆಲಸ ಮಾಡುವ ರೀತಿಯಲ್ಲಿ ತಿಳಿಸಿ ಒಂದು ವೇಳೆ ಮೂತ್ರಪಿಂಡವು ಕೆಲಸ ಮಾಡದೆ ಇದ್ದರೆ ದೇಹದಲ್ಲಿ ರಕ್ತಶೋಧನೆ ಕಾರ್ಯ ಕುಂಠಿತವಾಗುತ್ತದೆ. ಮೂತ್ರಕೋಶದಲ್ಲಿ ವಿಷ ಪದಾರ್ಥಗಳು ಉಳಿದು ತೊಂದರೆ ಉಂಟಾಗುವ ಬಗ್ಗೆ ಮಾಹಿತಿ ಸಂಪೂರ್ಣವಾಗಿದೆ. ಪ್ರಾಣಾಯಾಮ ಮಾಡುವುದರಿಂದ ಕಿಡ್ನಿಯ ತೊಂದರೆಯನ್ನು ನಿವಾರಣೆ ಮಾಡಿಕೊಳ್ಳುವ ಬಗ್ಗೆ ವಿವರಿಸಿದ್ದಾರೆ. ತಲೆನೋವು ಮೈಗ್ರೇನ್ ಏಕೆ ಬರುತ್ತದೆ ಅದನ್ನು ನಿವಾರಣೆ ಮಾಡಿಕೊಳ್ಳಲು ಪದ್ಮಾಸನ, ಭುಜಂಗಾಸನ, ಸರ್ವಾಂಗಾಸನ ಮಾಡುವುದನ್ನು ತಿಳಿಸಿದ್ದಾರೆ. ಕರುಳಿನ ಹುಣ್ಣು (ಅಲ್ಸರ್) ಆಮ್ಲಕಾರಿ ಆಹಾರ ಹುಳಿ ಕ್ಷಾರವನ್ನು ಹೊಂದಿರುವ ಪಾನೀಯ ಸೇವಿಸುವುದರಿಂದ ಕರುಳು ದುರ್ಬಲವಾಗಿ ಆಮ್ಲ ಹೆಚ್ಚಾಗಿ ನಿರಂತರ ಹುಳಿತೇಗು ಬರುತ್ತದೆ. ಕರುಳಿನ ಹುಣ್ಣಿನ ಅಲ್ಲರ್ ಉಂಟಾಗುತ್ತದೆ. ಒತ್ತಡದ ಬದುಕು, ಯಾಂತ್ರಿಕ ಜೀವನ, ಪಾನ್ ಮಸಾಲ, ಆಲ್ಕೋಹಾಲ್ ಸೇವನೆಯಿಂದ ಗ್ಯಾಸ್ಟಿಕ್ ಬರುವ ಬಗ್ಗೆ ತಿಳಿಸಿದ್ದಾರೆ.


ಗ್ಯಾಸ್ಟಿಕ್ ನಿವಾರಣೆಗೆ ಯಾವ ಯಾವ ಆಹಾರ ಸೇವನೆ ಮಾಡಬೇಕು ಯಾವ ಯಾವ ಆಸನ ಮಾಡಿದರೆ ಹೋಗಲಾಡಿಸಬಹುದು ಎಂದು ತಿಳಿಸಿದ್ದಾರೆ. ನಿದ್ರಾಹೀನತೆ ಈ ಕಾಯಿಲೆಯಿಂದ ಮುಕ್ತರಾಗಲು ಪ್ರತಿದಿನ ಕನಿಷ್ಠ 8 ಗಂಟೆಗಳವರೆಗೆ ನಿದ್ದೆ ಮಾಡಬೇಕೆಂದು ಕೆಲವು ಆಸನಗಳು, ಮುದ್ರೆಗಳು, ಮುಖ್ಯವಾಗಿ ಶವಾಸನ ಮಾಡುವುದರಿಂದ ನಿದ್ರಾಹೀನತೆ ಕಾಯಿಲೆ ನಿವಾರಣೆ ಮಾಡಿಕೊಳ್ಳುವ ಬಗ್ಗೆ ತಿಳಿಸಿದ್ದಾರೆ. ಮಲಬದ್ಧತೆಗೆ ಕಾರಣ ಅದರ ನಿವಾರಣೆಗೆ ಬೇಕಾದ ಆಹಾರ ಪದ್ಧತಿ ಹಾಗೂ ಮಾಡಬೇಕಾದ ಆಸನಗಳ ಬಗ್ಗೆ ತಿಳಿಸಿದ್ದಾರೆ. ಮೂಲವ್ಯಾಧಿ, ಮಂಡಿ ನೋವುಗಳಿಗೆ ಕಾರಣ ಹಾಗೂ ನಿವಾರಣೆ ಬಗ್ಗೆ ಯಾವ ಯಾವ ಆಸನ ಮಾಡಬೇಕೆಂದು ತಿಳಿಸಿದ್ದಾರೆ.


ಬೆನ್ನು ನೋವು ಯಾರ್ಯಾರಿಗೆ ಬರುತ್ತದೆ, ಅದರ ನಿವಾರಣೆಗೆ ಯಾವ ಯಾವ ಆಸನಗಳನ್ನು ಅಭ್ಯಾಸ ಮಾಡಬೇಕೆಂದು ತಿಳಿಸಿದ್ದಾರೆ. ಯೋಗಾಸನದಿಂದ ಪರಿಹಾರಗಳನ್ನು ತಿಳಿಸಿಕೊಟ್ಟಿದ್ದಾರೆ. ಈ ಕೃತಿಯಲ್ಲಿ ಯೋಗ ಕಲಿತರೆ ಆಗುವ ಪ್ರಯೋಜನಗಳು ಹಾಗೂ ಯೋಗ ಅಭ್ಯಾಸ ಮಾಡುವವರ ಅನುಭವವನ್ನು ಒಂದು ಕಡೆ ಕಲೆ ಹಾಕಿ ಅದನ್ನು ದಾಖಲಿಸುವುದರಿಂದ ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ. ಒಟ್ಟಾರೆ ಈ ಕೃತಿಯು ಯೋಗ ಪದದ ಅರ್ಥ ಆಸನಗಳು ಹಾಗೂ ಪ್ರಾಣಾಯಾಮವನ್ನು ಮಾಡುವ ವಿಧಾನ ಮಧುಮೇಹ, ಅರ್ಬುದ ರೋಗ, ಮಾನಸಿಕ ಖಿನ್ನತೆ, ಅಸ್ತಮಾ ಕಾಯಿಲೆ (ಜಾಂಡಿಸ್) ಕಿಡ್ನಿ ಕಾಯಿಲೆ, ಮೈಗ್ರೇನ್, ಅಲ್ಸರ್, ಬಲಹೀನತೆ, ಮೂಲವ್ಯಾಧಿ, ಮಂಡಿ ನೋವು ಸ್ಕೂಲಕಾಯ ಮುಂತಾದ ಕಾಯಿಲೆಗಳಿಂದ ದೂರವಿರಲು ಯಾವ ಯಾವ ಆಸನ ಮಾಡಬೇಕು ಎಂಬುದರ ಬಗ್ಗೆ ವಿಸೃತವಾಗಿ ವಿವರಣೆ ನೀಡುವುದರಿಂದ ಈ ಕೃತಿ ಉಪಯುಕ್ತ ವೆನಿಸಿದೆ.


ಧನಂಜಯರವರು ರಚಿಸಿರುವ ಯೋಗ ಸೌರಭ ಕೃತಿಯು ಯೋಗಭ್ಯಾಸ ಮಾಡುವವರಿಗೆ ಪ್ರಾರಂಭಿಕ ಹಂತದಲ್ಲಿ ಯೋಗ ಕಲಿಯುವವರಿಗೆ ತುಂಬಾ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ. ಸದೃಢ ದೇಹದಲ್ಲಿ ಸದೃಢ ಮನಸ್ಸಿರುತ್ತದೆ. ಯೋಗ-ರೋಗ ನಿವಾರಕವಾದುದು ಎಂಬುದನ್ನು ಯೋಗ ಸೌರಭ ಕೃತಿಯು ಸಾಬೀತು ಪಡಿಸಿದೆ.


ಒಟ್ಟಾರೆ ಹೆಚ್.ಸಿ. ಧನಂಜಯರವರ ಈ ಕೃತಿ ಅರ್ಥಪೂರ್ಣವಾಗಿ ಮೂಡಿಬಂದಿದೆ. ಇಲ್ಲಿ ಆಸನ, ಪ್ರಾಣಾಯಾಮ, ಧ್ಯಾನಗಳಿಗೆ ಮಹತ್ವ ನೀಡಿ ಪತಂಜಲಿ ನಿಯಮ ವಿಚಾರಗಳನ್ನು ಯೋಗ ಮುದ್ರೆಗಳ ಬಗ್ಗೆ ತಿಳಿಸದೇ ಇರುವುದು ಈ ಕೃತಿಯಲ್ಲಿ ಕಂಡುಬರುವ ಕೊರತೆ ಎನಿಸಿದೆ. ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಇನ್ನೂ ಹೆಚ್ಚು ಹೆಚ್ಚು ಕೃತಿಗಳು ಹೊರಬರಲಿ ಎಂದು ಆಶಿಸೋಣ.


ವಿಶ್ವಾಸ್ ಡಿ. ಗೌಡ, ಸಕಲೇಶಪುರ 

9743636831


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top