ಪುತ್ತೂರಿನಲ್ಲಿ ಭೀಮ ಸಂಗಮ- ಸಾಮರಸ್ಯದ ಕಾರ್ಯಕ್ರಮ

Upayuktha
0


ಪುತ್ತೂರು: ಭಾರತೀಯ ಜನತಾ ಪಕ್ಷದ ವರಿಷ್ಠರ ಆಶಯದಂತೆ ಸಂವಿಧಾನ ಗೌರವ ಅಭಿಯಾನದ ಅಂಗವಾಗಿ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರ ಮನೆಯಲ್ಲಿ ಭೀಮಸಂಗಮ ಕಾರ್ಯಕ್ರಮ ಜರಗಿತು.


ದಲಿತ ಸಮಾಜದ ಸುಮಾರು 120 ದಂಪತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಿಶೋರ್ ಕುಮಾರ್, ಬಿಜೆಪಿ ನಗರ ಅಧ್ಯಕ್ಷ ಶಿವಕುಮಾರ್ ಭಟ್, ಗ್ರಾಮಾಂತರ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರ್ ಅವರುಗಳು ಎಲ್ಲಾ ದಂಪತಿಗಳ ಕಾಲ್ತೊಳೆದು ಅವರನ್ನು ಬರಮಾಡಿಕೊಂಡರು. ಮುತ್ತೈದೆಯರು ಅವರಿಗೆ ಬಾಗಿನ ಸಮರ್ಪಿಸಿ ಆರತಿ ಬೆಳಗಿದರು. ಸಾಮರಸ್ಯದ ಕುರಿತಾಗಿ ರವೀಂದ್ರ ಪುತ್ತೂರು ಹಾಗೂ ಶಿವಪ್ರಸಾದ ಇವರು ಉಪನ್ಯಾಸವನ್ನು ನಡೆಸಿಕೊಟ್ಟರು. ನಂತರ ಸಹಭೋಜನ ಕಾರ್ಯಕ್ರಮ ನಡೆಯಿತು.  


ಜಾತಿ ಮತಗಳ ಸೀಮೆಯನ್ನು ಮೀರಿ ನಿಂತು ಎಲ್ಲರೂ ಊಟ ಮಾಡಿದರು, ಊಟವನ್ನು ಬಡಿಸಿದರು. ಜಾತಿಯ ಕಾರಣದಿಂದಾಗಿರುವ ಮೇಲರಿಮೆ, ಕೀಳರಿಮೆಗಳು ಇಲ್ಲಿ ಮಾಯವಾಗಿದ್ದವು. ಅಂಬೇಡ್ಕರ್ ಅವರ ಆಶಯದಂತೆ ಹಾಗೂ ಪಕ್ಷದ ವರಿಷ್ಠರ ಕಲ್ಪನೆಯಂತೆ ಒಂದು ಅದ್ಭುತ ಸಾಮರಸ್ಯದ ಕಾರ್ಯಕ್ರಮ ಇಲ್ಲಿ ಮೇಳೈಸಿತು.


ಕಾರ್ಯಕ್ರಮದಲ್ಲಿ ಬಿಜೆಪಿ ನಗರ ಅಧ್ಯಕ್ಷ ಶಿವಕುಮಾರ್ ಭಟ್, ಗ್ರಾಮಾಂತರ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ರವೀಂದ್ರ ಪುತ್ತೂರು,  ಮಹಿಳಾ ಮಂಡಳ ಪ್ರಧಾನ ಕಾರ್ಯದರ್ಶಿ ಜಯಲಕ್ಷ್ಮಿ ಶಗ್ರಿತ್ತಾಯ ಮುಂತಾದ ಪ್ರಮುಖರು ಭಾಗವಹಿಸಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top