ಬಳ್ಳಾರಿ: ನಗರದ ಸತ್ಯಂ ಇಂಟರ್ನ್ಯಾಷನಲ್ ಸ್ಕೂಲ್, ಬಳ್ಳಾರಿ ಇವರ ಸಂಯುಕ್ತಆಶ್ರಯದಲ್ಲಿ ನಡೆದ ಟ್ರೆಡಿಷನಲ್ ಶೋಟೋಕನ್ ಕರಾಟೆ ಅಕಾಡೆಮಿ ಕರ್ನಾಟಕ (ರಿ) ಕರಾಟೆ ಬ್ಲಾಕ್ ಬೆಲ್ಟ್ ಹಾಗೂ ಪ್ರಮಾಣ ಪತ್ರ ಪ್ರಧಾನ ಸಮಾರಂಭವನ್ನು" ಮುಲ್ಲಂಗಿ ನಂದೀಶ್ ಮಹಾಪೌರರು ಮಹಾನಗರ ಪಾಲಿಕೆ ಬಳ್ಳಾರಿ ಇವರು ಉದ್ಘಾಟಿಸಿ ಕರಾಟೆ ಎನ್ನುವುದು ಒಲಂಪಿಕ್ ಕ್ರೀಡೆಗಳಲ್ಲಿ ಅರ್ಹತೆಯನ್ನು ಪಡೆದುಕೊಂಡಿದ್ದು ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕೂಡ ಹೆಸರನ್ನು ಪಡೆದಿದೆ.
ಈ ಕ್ರೀಡೆಯನ್ನು ಕಲಿತು ಎಲ್ಲರೂ ಉತ್ತಮ ಕ್ರೀಡಾಪಟುಗಳಾಗಿ ಭಾರತಕ್ಕೆ ಪದಕವನ್ನು ಗೆಲ್ಲಬೇಕೆಂದು ತಿಳಿಸುತ್ತಾ ಇಲ್ಲಿ ಇರುವ ಮಕ್ಕಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ಇರುವುದು ನಿಜಕ್ಕೂ ಸಂತೋಷದ ಸಂಗತಿ ಮಹಿಳಾ ಸಬಲೀಕರಣದ ದೃಷ್ಟಿಯಿಂದ ಆತ್ಮ ರಕ್ಷಣಾ ದೃಷ್ಟಿಯಿಂದ ಅವರಿಗೆ ಕರಾಟೆ ತರಬೇತಿ ಅವಶ್ಯಕತೆ ಹೆಚ್ಚಿನ ಸಂಖ್ಯೆಯಲ್ಲಿ ಕರಾಟೆಯನ್ನು ತರಬೇತುದಾರರಲ್ಲಿ ಹೋಗಿ ಕಲಿತು ಒಳ್ಳೆಯ ಕರಾಟೆ ಪಟುಗಳಾಗಿ ಹೊರ ಹೊಮ್ಮಬೇಕು ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರೇಖಾ ಚೇರ್ಮನ್ ಸತ್ಯಂ ಶಿಕ್ಷಣ ಸಂಸ್ಥೆ ಬಳ್ಳಾರಿ.. ಮುಖ್ಯ ಅತಿಥಿಗಳಾಗಿ ಸತೀಶ್ ಎನ್ ಪೊಲೀಸ್ ಇನ್ಸ್ಪೆಕ್ಟರ್ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ ,ಜಗದೀಶ್ ಕುಮಾರ್ ಕರೆಸ್ಪಾಂಡೆನ್ಸ್ ಮತ್ತು ಕಾರ್ಯದರ್ಶಿಗಳು ಸತ್ಯಂ ಶಿಕ್ಷಣ ಸಂಸ್ಥೆ ಬಳ್ಳಾರಿ, ಜಿ ಕೆ ಸ್ವಾಮಿ ಉದ್ಯಮಿಗಳು ಸಂಸ್ಥಾಪಕ ಅಧ್ಯಕ್ಷರು ಜಿಕೆ ಫೌಂಡೇಶನ್ ಬಳ್ಳಾರಿ, ಭವನಾ ಪ್ರಸಾದ್.
ಪ್ರಾಂಶುಪಾಲರು ಸತ್ಯಂ ಇಂಟರ್ನ್ಯಾಷನಲ್ ಸ್ಕೂಲ್ ಬಳ್ಳಾರಿ, ಪಿ ಶೇಖರ್ ರಾಜ್ಯಾಧ್ಯಕ್ಷರು ಕರ್ನಾಟಕ ಏಕೀಕರಣ ರಕ್ಷಣಾ ಸೀನ ಸಮಿತಿ ಬಳ್ಳಾರಿ ,ರಾಮಾಂಜನೇಯಲು ಉದ್ಯಮಿಗಳು ಹಾಗೂ ಸಮಾಜಸೇವಕರು ,ಸುರೇಶ್ ಅಧ್ಯಕ್ಷರು ಬಳ್ಳಾರಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘ, ವರ್ದಿನಿ ಮೇಡಂ ಆಡಳಿತ ಅಧಿಕಾರಿಗಳು ಟ್ರಡಿಷನಲ್ ಶೋ ಟೋಕನ್ ಕರಾಟೆ ಅಕಾಡೆಮಿ ಕರ್ನಾಟಕ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ನುಡಿಯನ್ನು ಸೆನ್ಸಾಯಿ ಕಟ್ಟೆಸ್ವಾಮಿ ಕರಾಟೆ, ತರಬೇತಿದಾರರು ಹಾಗೂ ಸಂಸ್ಥಾಪಕ ಅಧ್ಯಕ್ಷರು ನುಡಿದರು. ಅದೇ ರೀತಿಯಾಗಿ ಸೆನ್ಸಾಯಿ ಸುಭಾಷ್ ಚಂದ್ರ ಎಂ ಕರಾಟೆ ತರಬೇತಿದಾರರು ಹಾಗೂ ತಾಂತ್ರಿಕ ನಿರ್ದೇಶಕರು ಬ್ಲಾಕ್ ಬೆಲ್ಟ್ ಪ್ರಶಸ್ತಿ ವಿತರಣಾ ಸಮಾರಂಭವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ 400 ಕ್ಕಿಂತ ಹೆಚ್ಚು ಮಕ್ಕಳಿಗೆ ಬೆಲ್ಟ್ ಮತ್ತು ಪ್ರಶಸ್ತಿ ಪ್ರಧಾನವನ್ನು ಮಾಡಲಾಯಿತು ಕಾರ್ಯಕ್ರಮವನ್ನು ಗವಿಸಿದ್ದೇಶ್ ವಿ ಎಂ ಉಪನ್ಯಾಸಕರು ಹಗರಿಬೊಮ್ಮನಹಳ್ಳಿ ನಿರ್ವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ