ಬಳ್ಳಾರಿ: ನಿಮ್ಮ ನ್ಯಾಯಯುತ ಬೇಡಿಕೆ ಈಡೇರುವವರೆಗೆ ಹೋರಾಟ ಮಾಡಿ. ನಿಮ್ಮ ಬೆಂಬಲಕ್ಕೆ ನಮ್ಮ ಸಹಕಾರ ಇದೆಂದು ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಹೇಳಿದ್ದಾರೆ. ಅವರು ಉದ್ದೇಶಿತ ಕಾರ್ಖಾನೆಗಳನ್ನು ಸ್ಥಾಪಿಸಿ, ಇಲ್ಲವಾದರೆ ನಮ್ಮ ಭೂಮಿ ನಮಗೆ ವಾಪಸ್ಸು ನೀಡಬೇಕು, ಉದ್ಯೋಗ ಪರಿಹಾರ ನೀಡಬೇಕು, ನಮ್ಮ ಭೂಮಿಗೆ ನ್ಯಾಯವಾದ ಭೂ ಬೆಲೆ ನೀಡಬೇಕು.
ಕಳೆದ 785 ದಿನಗಳಿಂದ ತಾಲೂಕಿನ ಕುಡಿತಿನಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್, ಭೂ ಸಂತಸ್ತ್ರ ಹೋರಾಟ ಸಮಿತಿ, ಕನ್ನಡ ಪರ ಸಂಘಟನೆಗಳೊಂದಿಗೆ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಮಾತನಾಡುತ್ತಿದ್ದರು.ನೀವು ನ್ಯಾಯ ಸಿಗುವ ವರಗೆ ಒಗ್ಗಟ್ಟಾಗಿ ಹೋರಾಟ ನಡಸಿ. ಆಳುವ ಸರ್ಕಾರಗಳು ಬಂಡವಾಳದಾರರ ಪರ ಇದ್ದರೆ, ರೈತರು, ಕಾರ್ಮಿಕರ ಪರ ನಿಮ್ಮ ಜೊತೆ ಇದ್ದೂ ಹೋರಾಟ ಕ್ಕೆ ಬೆಂಬಲ ನೀಡುತ್ತಿದ್ದು ರೈತ, ಕಾರ್ಮಿಕ ಸಂಘಟನೆಗಳನ್ನು ಬಳಪಡಿಸಲು ಕರೆ ನೀಡಿದರು.
ಸುಪ್ರೀಂ ಕೋರ್ಟ್ ನಲ್ಲಿ ಸ್ವಾಧೀನ ಪಡಿಸಿಕೊಂಡ ರೈತರ ಒಂದು ಎಕರೆ ಜಮೀನಿಗೆ ಒಂದು ಕೋಟಿ 30 ಲಕ್ಷ ಪರಿಹಾರ ನೀಡಲು ನ್ಯಾಯಾಲಯ ತೀರ್ಪು ನೀಡಿದೆ. ನ್ಯಾಯಾಂಗ ವ್ಯವಸ್ಥೆಯಿಂದ ನಿಮ್ಮ ಹೋರಾಟಕ್ಕೆ ನ್ಯಾಯ ಸಿಗಲಿದೆಂದರು.
ನಂತರ ಮರಿಯಮ್ ದಾವಳೆ ಇಲ್ಲಿಗೆ ಭೇಟಿ ನೀಡಿ, ಮಹಾರಾಷ್ಟ್ರದ ನಾಂಡದೆಡನಲ್ಲಿ ಕೋ ಕ ಕೋಲಾ ಫ್ಯಾಕ್ಟರಿಗಾಗಿ ರೈತರಿಂದ ಭೂಮಿ ವಶಪಡಿಸಿ ಕೊಂಡತ್ತು ಅದರ ವಿರುದ್ಧ ರೈತರು ಹೋರಾಟ ಮಾಡಿರುವದನ್ನು, ಅದರ ಅನುಭವ ಆಧಾರ್ ದಲ್ಲಿ ನೀವು ನಿಮ್ಮ ಹೋರಾಟ ತೀವ್ರ ಗೊಳಿಸಿ, ಆಳುವ ಸರ್ಕಾರಗಳು ರೈತರ, ಕಾರ್ಮಿಕರ ಜನ ಪರವಾದ ನೀತಿ ಗಳು ಜಾರಿ ಮಾಡದೇ ಮೋಸ ಮಾಡುತ್ತಿದ್ದಾರೆ, ರೈತರು ಹೋರಾಟ ದಿಂದ ಮಾತ್ರ ಜಯವಾಗವುದು ಎಂದರು. ಈ ವೇಳೆ ಯು.ಬಸವರಾಜ್, ಎಸ್ ವೈ ಗುರುಶಾಂತ್, ಜಂಗ್ಲಿ ಸಾಬ್, ಶ್ರೀಧರ್, ತಿಪ್ಪೆ ಸ್ವಾಮಿ, ಗಾಳಿ ಬಸವರಾಜ, ಜೆ ಸತ್ಯ ಬಾಬು, ಮೊದಲಾದವರು ಇದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ