ಬೆಂಗಳೂರು: ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ 'ಕಲಿಯುಗ ಕಾಮಧೇನು' ಶ್ರೀ ರಾಘವೇಂದ್ರ ಗುರುಸಾರ್ವಭೌಮರ 404ನೇ ಪಟ್ಟಾಭಿಷೇಕ ಮತ್ತು 430ನೇ ವರ್ಧಂತಿ ಮಹೋತ್ಸವ ಪ್ರಯುಕ್ತ ಮಾರ್ಚ್ 1 ರಿಂದ 6ರ ವರೆಗೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಫೆಬ್ರವರಿ 28, ಮಾರ್ಚ್ 1 ಮತ್ತು 2ರಂದು ಋಗ್ವೇದ ಸಂಹಿತೆ ಹೋಮ ಜರುಗಲಿದ್ದು, ಈ ಹೋಮದ ಪೂರ್ಣಾಹುತಿಯು ಮಾರ್ಚ್ 3ರಂದು ಶ್ರೀಮನ್ ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನ ಮಾಧವತೀರ್ಥ ಮೂಲಮಠದ ತಂಬಿಹಳ್ಳಿ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದಂಗಳವರಿಂದ ಅಮೃತ ಹಸ್ತದಿಂದ ಹೋಮದ ಪೂರ್ಣಾಹುತಿ ನಡೆಯಲಿದ್ದು, ಆ ದಿನವೇ ಶ್ರೀಗಳಿಂದ ಸಂಸ್ಥಾನ ಪೂಜೆ ಮತ್ತು ಭಿಕ್ಷೆ ನಡೆಯಲಿದೆ.
ಪ್ರವಚನ ಮಾಲಿಕೆ : (ಪ್ರತಿದಿನ ಸಂಜೆ 6-30ಕ್ಕೆ). ಮಾರ್ಚ್ 1-ಬ್ರಹ್ಮಣ್ಯಾಚಾರ್, ಮಾರ್ಚ್ 2-ವೇಣುಗೋಪಾಲಾಚಾರ್ ಅಗ್ನಿಹೋತ್ರಿ, ಮಾರ್ಚ್ 3-ಮರುತಾಚಾರ್, ಮಾರ್ಚ್ 4-ಚಂದ್ರಶೇಖರಾಚಾರ್, ಮಾರ್ಚ್ 5-ಕಲ್ಯಾ ಶ್ರೀಕಾಂತಾಚಾರ್ ಮತ್ತು ಮಾರ್ಚ್ 6-ಆಯನೂರು ಮಧುಸೂದನಾಚಾರ್ ಇವರುಗಳು ರಾಯರ ಜೀವನ ಚರಿತ್ರೆ ಬಗ್ಗೆ, ರಾಯರ ಮಹಿಮೆಗಳ ಬಗ್ಗೆ ಉಪನ್ಯಾಸ ನೀಡಲಿದ್ದಾರೆ ಎಂದು ಶ್ರೀಮಠದ ಗೌರವ ಕಾರ್ಯದರ್ಶಿ ನರಹರಿ ರಾವ್ ತಿಳಿಸಿದ್ದಾರೆ.
ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಮಲ್ಲೇಶ್ವರಂ, ಬೆಂಗಳೂರು-560003.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ