ಬೆಂಗಳೂರು : ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್. ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ದಿನಾಂಕ 1-3-2025 ರಿಂದ 6-3-2025ರ ವರೆಗೆ 'ಕಲಿಯುಗ ಕಾಮಧೇನು' ರಾಘವೇಂದ್ರ ಸ್ವಾಮಿಗಳವರ "404ನೇ ಪಟ್ಟಾಭಿಷೇಕೋತ್ಸವ" ಮತ್ತು "430ನೇ ಜನ್ಮದಿನೋತ್ಸವ" ಸಮಾರಂಭಗಳು ಜರುಗಲಿದೆ.
ಮಾರ್ಚ್ 1, ಶನಿವಾರ : ಗುರುಗಳ ಪಟ್ಟಾಭಿಷೇಕದ ಪ್ರಯುಕ್ತ ಬೆಳಗ್ಗೆ 8-00ಕ್ಕೆ ಬಾಳಗಾರು ಮಠದ ಮೂಲ ಮಹಾ ಸಂಸ್ಥಾನದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಅಕ್ಷೋಭ್ಯ ರಾಮತೀರ್ಥ ಶ್ರೀಪಾದಂಗಳವರ ಅಮೃತ ಹಸ್ತದಿಂದ ರಾಘವೇಂದ್ರ ಸ್ವಾಮಿಗಳವರ ಬೃಂದಾವನಕ್ಕೆ ಅಷ್ಟೋತ್ತರ ಸಹಿತ ಸಹಸ್ರ ಕಳಶ ಕ್ಷೀರಾಭಿಷೇಕ.
ಬೆಳಗ್ಗೆ 9-00ಕ್ಕೆ ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕೋತ್ಸವದ ಅಂಗವಾಗಿ "ಸ್ವರ್ಣ ಸಿಂಹಾಸನ"ದಲ್ಲಿ ರಾಘವೇಂದ್ರ ಸ್ವಾಮಿಗಳ ಪಾದುಕೆಯನ್ನು ಇರಿಸಿ, "ಪುಷ್ಪವೃಷ್ಠಿ"ಯನ್ನು ಶ್ರೀಗಳ ಅಮೃತ ಹಸ್ತದಿಂದ ನೆರವೇರಲಿದ್ದು, ಕಾರ್ಯಕ್ರಮ ಉದ್ಘಾಟನೆ ಆಗಲಿದೆ. ಹಾಗೂ ಸಂಜೆ 7-00ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೃದ್ಯಾ ಅಕಾಡೆಮಿಯ ವಿದ್ಯಾರ್ಥಿಗಳಿಂದ "ಭರತನಾಟ್ಯ ಪ್ರದರ್ಶನ" ನಿರ್ದೇಶನ : ವಿದುಷಿ ರೂಪಶ್ರೀ ಕೆ.ಎಸ್.
ಮಾರ್ಚ್ 6, ಗುರುವಾರ : ರಾಯರ ವರ್ಧಂತ್ಯೋತ್ಸವದ ಪ್ರಯುಕ್ತ ಬೆಳಗ್ಗೆ 8-00ಕ್ಕೆ ರಾಘವೇಂದ್ರ ಸ್ವಾಮಿಗಳವರ ಬೃಂದಾವನಕ್ಕೆ "ಲಕ್ಷ ಪುಷ್ಪಾರ್ಚನೆ". ಸಂಜೆ 7-00ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚಾಂದಿನಿ ಗರ್ತಿಕೆರೆ ಮತ್ತು ಸಂಗಡಿಗರಿಂದ "ದಾಸವಾಣಿ".
ಭಜನೆ ಮತ್ತು ಉಪನ್ಯಾಸ : ಮಾರ್ಚ್ 1 ರಿಂದ 6ರ ವರೆಗೆ ಪ್ರತಿದಿನ ಸಂಜೆ 5 ರಿಂದ 6 ವಿವಿಧ ಭಜನಾ ಮಂಡಳಿ "ಹರಿ ಭಜನೆ" ನಂತರ ವಿದ್ವಾನ್ ವೆಂಕಟ ನರಸಿಂಹಾಚಾರ್ಯ ರಾಜಪುರೋಹಿತ ಇವರಿಂದ "ಗುರು ರಾಘವೇಂದ್ರ ವೈಭವ" (ಶ್ರೀ ರಾಯರ ಚರಿತ್ರೆ) ವಿಷಯವಾಗಿ ಧಾರ್ಮಿಕ ಪ್ರವಚನ ಏರ್ಪಡಿಸಲಾಗಿದ್ದು ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಾಯರ ಕೃಪೆಗೆ ಪಾತ್ರರಾಗಬೇಕೆಂದು ನಂದಕಿಶೋರ್ ಆಚಾರ್ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ-08022443962 9945429129-8660349906.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ