ಮೊನ್ನೆ ಹೆಂಡತಿಯ ಜೊತೆಗೆ ಪಟ್ಟಣದ ರಥಬೀದಿಯಲ್ಲಿ ಜಾತ್ರಾ ವಿಶೇಷದ ರಾಮೇಶ್ವರನ ದರ್ಶನಕ್ಕೆ ಹೆಜ್ಜೆ ಹಾಕುವಾಗ ಎಲ್ಲೆಲ್ಲೂ ಹದಿ ವಯಸ್ಸಿನ ಹುಡುಗ ಹುಡುಗಿಯರೇ ಕಂಡರು. ಇಷ್ಟೆಲ್ಲಾ ಹೆಣ್ಣು ಹುಡುಗಿಯರು ಇದ್ದರೂ ನಮ್ಮ ಯುವಕರಿಗೆ ಮದುವೆ ಆಗುತ್ತಿಲ್ಲ..!!
ಯಾಕೆ ಹೀಗೆ...???
ಮೊದ ಮೊದಲು ಹಳ್ಳಿ ಮನೆಯ ಹುಡುಗರಿಗೆ ಮದುವೆ ನಿರಾಕರಣೆ ಆಗ್ತಿತ್ತು. ನಂತರ ವರ್ಷಗಳಲ್ಲಿ ಚಿಕ್ಕ ಪುಟ್ಟ ನೌಕರಿ ಮಾಡುವ ಹುಡುಗರಿಗೆ ಮದುವೆ ನಿರಾಕರಣೆಯಾಯಿತು. ಈಗ ಪಟ್ಟಣದ ಚಿಕ್ಕ ಪ್ಯಾಕೇಜ್ ಸಂಬಳದ ಹುಡುಗರಿಗೆ ಮದುವೆ ಮರೀಚಿಕೆಯಾಗುತ್ತಿದೆ!
ನನ್ನ ಸಮೀಪ ಬಂಧು ಹುಡುಗ ನೋಡಲು ಅತ್ಯಂತ ಸ್ಪರದ್ರೂಪಿ, ಒಳ್ಳೆಯ ಹುಡುಗ, ವಿದ್ಯಾವಂತ. ವರ್ಕ್ ಫ್ರಂ ಹೋಂ. ಆಗಾಗ್ಗೆ ಬೆಂಗಳೂರಿಗೆ ಹೋಗಿ ಬರ್ತಿರ್ತಾನೆ. ಅಪ್ಪ ಅಮ್ಮನಿಗೆ ಒಬ್ಬನೇ ಮಗ ಒಳ್ಳೆಯ ಕುಟುಂಬ. ಆದರೆ ಅವನನ್ನು ಯಾವ ಹುಡುಗಿಯರೂ ಒಪ್ಪುತ್ತಿಲ್ಲ. ಸ್ವ ಗೋತ್ರ, ಏಕ ನಕ್ಷತ್ರ ಇನ್ನೇನೋ ಸಬೂಬು ಹೇಳಿ ಹುಡುಗಿ ಕಡೆಯವರು ಕೈ ಕೊಡುತ್ತಿದ್ದಾರೆ.
ಆದರೆ ಒಳಗಿನ ಕಾರಣ ಅವನ ಮದ್ಯಮ ಪ್ರಮಾಣದ ಪ್ಯಾಕೇಜ್..! ಈಗ ಮದುವೆ ಆಗಲು ದೊಡ್ಡ ಪ್ಯಾಕೇಜ್ ಇರಲೇಬೇಕು. ಉಳಿದಿದ್ದೆಲ್ಲಾ ಗೌಣ.
ಹುಡುಗರು ಮೊಬೈಲ್ ಕ್ರಿಕೆಟ್ ರೈಡಿಂಗ್ ಬಿಟ್ಟು ಚೆನ್ನಾಗಿ ಓದಿ ಉತ್ತಮ ಕಂಪನಿಯ ಕೆಲಸ ಹುಡುಕಿ ದೊಡ್ಡ ಪ್ಯಾಕೇಜ್ ಪಡೆದರೆ ಮದುವೆ. ಇಲ್ಲದಿದ್ದರೆ ಖಂಡಿತವಾಗಿಯೂ ಮದುವೆ ಆಗೋಲ್ಲ. ಆದರೆ ಇಲ್ಲೊಂದು ಸಮಸ್ಯೆ ಎದುರಾಗಿದೆ.
ಚೆನ್ನಾಗಿ ಓದುವ ಹೆಣ್ಣು ಹುಡುಗಿಯರು ಮೊದಲು ಡಿಗ್ರಿ, ನಂತರ ಮಾಸ್ಟರ್ ಡಿಗ್ರಿ ತದನಂತರ ಪಿಹೆಚ್ ಡಿ ನಂತರ ಕೆಲಸ. ಒಂದಷ್ಟು ವರ್ಷ ಫ್ರೀ ಇರಬೇಕು. ಮದುವೆ ಬಂಧ ಬೇಡ. ಇದರ ಜೊತೆಗೆ ಪೋಷಕರು ಹುಡುಗಿ ವೇವು ಲೆಂಥು ಹೈಟು ವೈಟು, ಪ್ಯಾಕೇಜ್ ಆಸ್ತಿ ಅಂತಸ್ತಿನ ಲೆಕ್ಕಾಚಾರ, ಜಾತಕ ನಕ್ಷತ್ರ, ಗುಣಗಳ ಹೊಂದಾಣಿಕೆಯ Scrutiny ನೆಡದು ಮದುವೆ ದಿನಂಕ ಘೋಷಣೆ ಆಗುವಾಗ ಹುಡುಗಿ ಏಜು ಮೂವತ್ತೆರಡು ವರ್ಷ ದಾಟಿರುತ್ತದೆ. ಮೂವತ್ತಂತೂ ದಾಟಿಯೇ ತೀರಿರುತ್ತದೆ.
ಮದುವೆ ನಂತರ ಹನಿಮೂನ್ ಅದು ಇದು ಅಂತ ಇನ್ನೊಂದೆರೆಡು ವರ್ಷ ನೋಡ ನೋಡುತ್ತಲೇ ಕಳೆದು ಹೋಗುತ್ತದೆ...!!
ಈ ಝಂಕ್ ಫುಡ್ಡು, ಬಿಳಿ ವಿಷ ಸಕ್ಕರೆ- ಉಪ್ಪು, ಪೆಟ್ರೋಲಿಯಂ ಉಪ ಉತ್ಪನ್ನದ ಅಡಿಗೆ ಎಣ್ಣೆ, ರಾಸಾಯನಿಕ ಬೆರೆತ ಹಣ್ಣು ತರಕಾರಿ, ಉಸಿರೆಳದರೆ ಶ್ವಾಸಕೋಶದ ತುತ್ತತುದಿಯ ತನಕವೂ ಹೋಗುವ ಅಪಾಯಕಾರಿ ಸೀಸ...!! ಇದರ ಜೊತೆಯಲ್ಲಿ ಮೊಬೈಲ್ ತರಂಗಗಳ ಸಹವಾಸ... ಲ್ಯಾಪ್‌ಟಾಪ್ ತೊಡೆಯೇರಿ ಹೃದಯದ ತನಕ ಹಾನಿ ಮಾಡುವ ಅಪಾಯಕಾರಿ ವಿಕಿರಣಗಳು!
ನಮ್ಮ ಹೆಣ್ಣು ಮಕ್ಕಳ ಪೋಷಕರು ತಮ್ಮ ಹದಿ ವಯಸ್ಸಿನ ಹೆಣ್ಣು ಮಕ್ಕಳ ಋತುಚಕ್ರದ ಬಗ್ಗೆ ಎಷ್ಟು ಗಮನಿಸಿರುತ್ತಾರೋ ಗೊತ್ತಿಲ್ಲ...!!
ಈಗೀಗ ಬಹುತೇಕ ಎಲ್ಲ ಹೆಣ್ಣು ಮಕ್ಕಳು ಎಸ್‌ಎಸ್‌ಎಲ್‌ಸಿ ನಂತರ ಅಂದರೆ ಹದಿನಾರನೇ ವಯಸ್ಸಿನ ನಂತರ ಹೆಚ್ಚಿನ ವಿಧ್ಯಾಭ್ಯಾಸಕ್ಕೆ ಮನೆ ಬಿಟ್ಟು ಹಾಸ್ಟೆಲ್- ಪಿಜಿ ಸೇರುತ್ತವೆ.
ಟೇನೇಜ್‌ನಿಂದ ಪ್ರೌಢರಾಗಿ ನೌಕರಿ ಸೇರಿ ಸ್ವಂತ ದುಡಿಮೆ ಮಾಡುವ ಹೊತ್ತಿಗೆ ಪರಿಪೂರ್ಣ ಸ್ವತಂತ್ರರಾಗುತ್ತಾರೆ. ಹುಡುಗರೋ ಹುಡುಗಿಯರೋ ಕನಿಷ್ಠ ಇಪ್ಪತ್ತು ವರ್ಷದ ತನಕವಾದರೂ ಪೋಷಕರ ಜೊತೆಗೆ ಇದ್ದರೆ ಉತ್ತಮ. ಈ ಹದಿನೈದರಿಂದ ಇಪ್ಪತ್ತು ವರ್ಷಗಳ ವಯಸ್ಸು ಹುಚ್ಚು ಕೋಡಿ ವಯಸ್ಸೇ ಸರಿ.
ಈ ವಯಸ್ಸಿನಲ್ಲಿ ಗಂಡು ಮಕ್ಕಳಾದರೂ ಅಷ್ಟು ಸಮಸ್ಯೆ ಆಗೋಲ್ಲ. ಹೆಣ್ಣು ಮಕ್ಕಳ ತಿಂಗಳ ತಿಂಗಳ ಋತುಬಂಧ ಅತ್ಯಂತ ಮುಖ್ಯ ಸಂಗತಿಯಾಗಿರುತ್ತದೆ. ಹೆಚ್ಚಿನ ವಿಧ್ಯಾಭ್ಯಾಸಕ್ಕಾಗಿ ಯಾವುದೋ ದೂರದೂರಿನಲ್ಲಿರುವ ಹೆಣ್ಣು ಮಕ್ಕಳು ತಿಂಗಳ ಸಂಕಟ ಹೇಗೆ ನಿರ್ವಹಣೆ ಮಾಡ್ತಾರೋ ದೇವರೇ ಬಲ್ಲ...!! ಈ ತಿಂಗಳ ಋತುಬಂಧದ ನೋವು ಇತರೆ ಕಾರಣಕ್ಕೆ ಹಿಂದೆಲ್ಲಾ ಮನೆ ಮದ್ದು ಮಾಡಿ ನಿರ್ವಹಣೆ ಮಾಡುತ್ತಿದ್ದರು. ಈಗ ಗೂಗಲ್ ಅಜ್ಜಿ ಸಲಹೆ ಮೆಡಿಕಲ್ ಷಾಪ್ ಡಾಕ್ಟರ ಮಾತ್ರೆ ಪರಿಹಾರವಾಗುತ್ತಿದೆ.
ಇದರ ದುಷ್ಪರಿಣಾಮ ಗೊತ್ತಾಗೋದು ಮದುವೆ ಆದ ಮೇಲೆಯೇ! ಇತ್ತೀಚಿನ ವರ್ಷಗಳಲ್ಲಿ ಮಕ್ಕಳಿಲ್ಲದ ಯುವ ದಂಪತಿಗಳ ಸಂಖ್ಯೆ ಗಂಭೀರ ಸ್ವರೂಪದಲ್ಲಿ ಕಾಣಿಸುತ್ತಿದೆ. ಇದರಲ್ಲಿ ಹೆಣ್ಣು ಮಕ್ಕಳು ತಡವಾಗಿ ಮದುವೆ ಮಾಡಿಕೊಳ್ಳುವುದು ಅತಿ ಮುಖ್ಯ ಸಂಗತಿ. ಈಗ್ಗೆ ಇಪ್ಪತ್ತೈದು ಮೂವತ್ತು ವರ್ಷಗಳ ಹಿಂದಿನ ತನಕವೂ ಹೆಣ್ಣು ಮಕ್ಕಳ ಸಂತಾನೋತ್ಪತ್ತಿ ನಲವತ್ತು ವರ್ಷಗಳ ತನಕವೂ ಇತ್ತು. ಆದರೆ ಅದೀಗ ವಾತಾವರಣ ಚೇಂಜ್ ಆದಂತೆ ಮೂವತ್ತು ಮೂವತ್ತೆರಡು ವರ್ಷಗಳಿಗೆ ನಿಂತಿದೆ...!!
ನಮ್ಮ ಬಹುತೇಕ ಹೆಣ್ಣು ಮಕ್ಕಳು ಮತ್ತು ಪೋಷಕರು ಮೂವತ್ತೆರಡು ದಾಟಿದರೂ ಹುಡುಗನ ಸ್ಟೆಟಸ್ ಮತ್ತು ಪ್ಯಾಕೇಜ್ ಬಗ್ಗೆ ಯೇ ಚಿಂತೆ ಮಾಡುತ್ತಿದ್ದಾರೆ.
ಮೂವತ್ತೆರಡು ವರ್ಷಗಳ ಮದುವೆ ಮಾಡಿಕೊಂಡು ಮತ್ತೆ ದಾಂಪತ್ಯದಲ್ಲಿ ಅಜೆಸ್ಟ್ ಆಗಿ ನಂತರ ಮೂವತ್ತನಾಲ್ಕು ಮೂವತ್ತೈದು ವರ್ಷಗಳ ಮೇಲೆ ಮಕ್ಕಳು ಮಾಡಿಕೊಳ್ಳಲು ಚಿಂತನೆ ಮಾಡಿ ಪ್ರಯತ್ನ ಮಾಡುವಾಗ ಮಕ್ಕಳೇ ಆಗೋಲ್ಲ...!! ಮೂವತ್ತೆರಡು ವರ್ಷಗಳ ನಂತರ ಈ ಕಾಲದ ಹೆಣ್ಣು ಮಕ್ಕಳು ಸಂತಾನ ಪಡೆದು ಕೊಳ್ಳುವುದು ಬಲು ಕಷ್ಟ...!! ಆಗ ಕೋಟಿ ಕೋಟಿ ಹಣ ಇದ್ದರೂ ತಮ್ಮ ಗರ್ಭಾಶಯದಲ್ಲಿ ತಮ್ಮದೇ ಮಗು ಹೊತ್ತು ಹೆರಲು ಅಸಾಧ್ಯ...!!!
ಇವತ್ತು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಹೆರಿಗೆ ಆಸ್ಪತ್ರೆಯಷ್ಟೇ Re production center ಯಾನೆ ಐ ವಿ ಎಫ್ ಯಾನೆ ಪ್ರಣಾಳ ಶಿಶು ಕೇಂದ್ರ ಗಳಿವೆ.
ಒಮ್ಮೆ ಈ ಕೇಂದ್ರ ಗಳ ಒಳಹೊಕ್ಕು ನೋಡಿದರೆ ಜನಸಂಖ್ಯಾ ಸ್ಪೋಟ ವಾದ ದೇಶದ ಸಂತಾನ ಹೀನರ ಸಂಖ್ಯೆ ನೋಡಿ ಅಚ್ಚರಿ ಆಘಾತವಾಗುತ್ತದೆ.
ಈ ಸಂತಾನಹೀನ ದಂಪತಿಗಳ ಸಂಖ್ಯೆ ವರ್ಷ ವರ್ಷವೂ ಏರುತ್ತಿದೆ. ಬಹಳಷ್ಟು ಯುವ ಪೀಳಿಗೆಗೆ ಲೇಟ್ ಮ್ಯಾರೇಜ್ ಆದ್ರೆ ಐವಿಎಫ್ ಮೂಲಕ ಮಕ್ಕಳು ಮಾಡಕೋ ಬೌದು ಎಂಬ ಬರವಸೆ ಇರುತ್ತದೆ . ಆದರೆ ಐವಿಎಫ್ ಸೆಕ್ಸಸ್ ರೇಟ್ ಇಪ್ಪತ್ತು ಮೂವತ್ತು ಪರ್ಸೆಂಟ್ ಮಾತ್ರ!! ಆ ಮೂವತ್ತು ಪರ್ಸೆಂಟ್ ಸಂತಾನ ಹೀನರ ಚಿಕ್ಕ ಪುಟ್ಟ ಸಮಸ್ಯೆ ಇದ್ದೂ ಐವಿಎಫ್ ನಲ್ಲಿ ಮಕ್ಕಳಾಗಿರುತ್ತದೆ ಅಷ್ಟೇ. ಇಂತಹ ತಂತ್ರಜ್ಞಾನದ ಬಗ್ಗೆ ಲೇಟ್ ಮದುವೆ ಯವರ ಬ್ರಮೆ ಹೋಗಲಾಡಿಸಿಕೊಂಡು ಮದುವೆ ಚುರುಕಾಗಿ ಮಾಡಿಕೊಳ್ಳುವು ದೊಳಿತು.
ಮದುವೆಗೆ ಇಪ್ಪತ್ತಾರರಿಂದ ಮೂವತ್ತು ವರ್ಷ ಸುವರ್ಣ ಕಾಲ. ಈ ವಯಸ್ಸಿನಲ್ಲಿ ಮನಸು ಭಾವನಾತ್ಮಕ ವಾಗಿರುತ್ತದೆ. ದೇಹಕ್ಕೆ ಕಸುವು ಇರುತ್ತದೆ.
ಈ ವಯಸ್ಸಿನಲ್ಲಿ ಮದುವೆ ಮಾಡಿಕೊಂಡು ಸಂಸಾರ ಬಂಧಬ ಗಟ್ಟಿ ಮಾಡಿಕೊಳ್ಳುವುದು ಉತ್ತಮ. ನಮ್ಮ ಪೋಷಕರು ಮತ್ತು ಲೇಟ್ ಮದುವೆ ವಧು ವರರು ಅದರಲ್ಲೂ ವಿಶೇಷವಾಗಿ ವಧು ಮತ್ತು ವಧುವಿನ ಪೋಷಕರು ಮೂವತ್ತೆರಡು ದಾಟುವುದ ರೊಳಗೆ ಮದುವೆ ಮಾಡಿಕೊಳ್ಳುವುದು/ ಮದುವೆ ಮಾಡುವುದೊಳಿತು.
ಮೂವತ್ತೆರಡು ದಾಟಿದ ಮೇಲೆ ಸಾಮಾನ್ಯವಾಗಿ ಎಲ್ರೂ ಹೆಚ್ಚು practicality ಆಗುತ್ತಾರೆ. ಪ್ರೀತಿ ಕಡಿಮೆಯಾಗಿ ವ್ಯವಹಾರ ಜಾಸ್ತಿಯಾಗಿ ಗಂಡ ಹೆಂಡಿರ ಮದ್ಯ ಸಾಮರಸ್ಯ ಕಡಿಮೆ ಯಾಗಿ ಸಂಸಾರ ಡೈವರ್ಸ್ ನಲ್ಲಿ ಅವಸಾನ ವಾಗುತ್ತದೆ. ರೂಪ,ಹಣ , ದೈಹಿಕ ಶಕ್ತಿ ಮನುಷ್ಯನ ಸಾಮರ್ಥ್ಯ ಆಗಬೇಕೇ ವಿನಃ "ಅಹಂಕಾರದ ವಿಚಾರ ಆಗಬಾರದು"...!!
ವಯಸ್ಸು ದಾಟಿದ ಮೇಲೆ ಇಂತವೆಲ್ಲಾ ಎಫೆಕ್ಟ್ ಮನುಷ್ಯನ ಜೀವನದ ಮೇಲೆ ಮಾಡುತ್ತದೆ. ವಿವಾಹಪೇಕ್ಷಿತ ಹುಡುಗಿಗಿಂತ ಹುಡುಗನ ವಿಧ್ಯಾಭ್ಯಾಸ ಕಮ್ಮಿ, ಸಂಬಳ ಕಮ್ಮಿ, ಹುದ್ದೆ ಕಮ್ಮಿ ಇತರ ಅಂಶಗಳಿಗಿಂತ ಹುಡುಗನ ಗುಣ ನಡೆತೆ ಕುಟುಂಬದ ಹಿನ್ನೆಲೆ ಇತರ ವಿಚಾರಗಳನ್ನು ಹುಡುಗಿ ಮತ್ತು ಹುಡುಗಿ ಯ ಪೋಷಕರು ತೆಗದುಕೊಂಡು ಬೇಗ ಮದುವೆ ಮಾಡಿ ಕೊಳ್ಳುವುದು ಉತ್ತಮ.
ಏಜು ಬಾರಾಗುವುದರ ಮೊದಲು ನಮ್ಮ ಹೆಣ್ಣು ಮಕ್ಕಳು ಮದುವೆ ಮಾಡಿಕೊಳ್ಳಲಿ. ಕುಟುಂಬ ವ್ಯವಸ್ಥೆ ಅತಿ ಮುಖ್ಯ ಅಂಗ ಸಂತಾನೋತ್ಪತ್ತಿ. ಕಲುಷಿತ ವಾತಾವರಣ ವಿಷ ಪೂರಿತ ಆಹಾರ, ವಿಕಿರಣಯುಕ್ತ ವಾಯುವಿನ ಮಧ್ಯೆ ತಡ ಮದುವೆ ಸಲ್ಲ.
ಜಗತ್ತಿನ ಎಲ್ಲಾ ಸಾಧಕರು ತಮ್ಮ ಸಾಧನೆ ಮಾಡಿದ್ದು ತಮ್ಮ ನಲವತ್ತೈದನೇ ವಯಸ್ಸಿನ ನಂತರವೇ. ಹೆಚ್ಚಿನ ಓದು, ಪಿ.ಹೆಚ್‌ಡಿ, ದೊಡ್ಡ ಕೆಲಸ, ಸಿಇಒ, ವಿದೇಶಿ ನೌಕರಿ, ಸ್ವೇಚ್ಛೆಯ ಸ್ವಾತಂತ್ರ್ಯ, ಐಷಾರಾಮಿ ಮನೆ ಕಾರು ಇದೆಲ್ಲಾ ಮದುವೆ ಮಾಡಿಕೊಂಡು ಮಕ್ಕಳು ಮಾಡಿಕೊಂಡು ಮಾಡಿಕೊಳ್ಳಿ.
ಯುವ ಮಿತ್ರರೇ, ಪೋಷಕರೇ, ಮತ್ತೊಮ್ಮೆ ನಿಮಗೊಂದು ಕಿವಿ ಮಾತು. ತಡ ಮದುವೆ ಬಹುತೇಕ ವಿಫಲ ದಾಂಪತ್ಯವಾಗುತ್ತದೆ. ಇಂತಹ ಬಹುತೇಕ ತಡ ಮದುವೆಯಲ್ಲಿ "ಸ್ವಾಭಾವಿಕವಾಗಿ ಮಕ್ಕಳಾಗುವ ಸಾಧ್ಯತೆ" ತೊಂಬತ್ತು ಪ್ರತಿಶತ ಇಲ್ಲ...!!
ಇದಿಷ್ಟು ಮನಸಿಗೆ ಗಾಢವಾಗಿ ಕಾಡಲು ನ್ಯಾಪ್‌ಕಿನ್ ಪೇಪರ್ ನಲ್ಲಿ ಮುಖವುಜ್ಜಿ ಬಿಸಾಡಿದ ಪೇಪರ್ ಚೂರಿನಂತೆ ಪೇಟೆಯಲ್ಲಿ ಕಂಡ ಬೀಡಾಡಿಗಳ ಸಿಂಬಳ ಸುರುಕ ಗೊರಸಲು ಮಕ್ಕಳುಗಳು.
ಇಂತಹ ಬಡವರಿಗೆ ಇಚ್ಚಿಸಿದಷ್ಟೂ ಮಕ್ಕಳು...!!
ಆದರೆ ನಮ್ಮ ಮೇಲ್ ಮಧ್ಯಮ ವರ್ಗ ಮತ್ತು ಶ್ರೀಮಂತ ವಿವಾಹತರಿಗೆ ಕೋಟಿ ಕೋಟಿ ಹಣ ಖರ್ಚು ಮಾಡಿದರೂ ಮಕ್ಕಳ ಭಾಗ್ಯವಿಲ್ಲ. ಮದುವೆ ಆಗಿ ಸಹಜವಾಗಿ ಮಕ್ಕಳಾಗದಿದ್ದಾಗ ಮಕ್ಕಳು ನಮಗೆ ದೇವರು ಕೊಟ್ಟ ಅದ್ಭುತವಾದ ಅಮೂಲ್ಯ ವರ ಎನ್ನಿಸುತ್ತದೆ.
ದಯವಿಟ್ಟು ಬೇಗ ಮದುವೆಯಾಗಿ ಮತ್ತು ಬೇಗ ಮಕ್ಕಳ ಮದುವೆ ಮಾಡಿ. ಬೇಗ ಬೇಗ ಅಜ್ಜ ಅಜ್ಜರಾಗಿ ನಿಮ್ಮ ಮಕ್ಕಳು ತಾಯ ತಂದೆಯರಾಗಿ ಕುಟುಂಬ ವ್ಯವಸ್ಥೆ ಯ ರಿಲೇ ಕೋಲು ಮುಂದಿನ ಪೀಳಿಗೆಗೆ ನೀಡಲಿ.
ಕಲ್ಯಾಣಮಸ್ತು.
-ಪ್ರಬಂಧ ಅಂಬುತೀರ್ಥ
9481801869
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ