ಜನಪರ ಆಡಳಿತದಲ್ಲಿ ಪ್ರಕ್ರಿಯಾತ್ಮಕ ಸುಧಾರಣೆಗಳು ಬಹುಮುಖ್ಯ: ಸಂಜೀವ್ ಸನ್ಯಾಲ್

Upayuktha
0

  • ಮಂಗಳೂರು ಲಿಟ್‌ ಫೆಸ್ಟ್‌ 7ನೇ ಆವೃತ್ತಿ ಮೊದಲ ದಿನದ ಅಧಿವೇಶನ
  • ಪ್ರಧಾನಿ ಮೋದಿ ಅವರ ಆರ್ಥಿಕ ಸಲಹೆಗಾರ ಸಂಜೀವ್ ಸನ್ಯಾಲ್ ಪ್ರಸ್ತುತಪಡಿಸಿದ ವಿಚಾರಗಳು:




ಮಂಗಳೂರು: ಇತ್ತೀಚೆಗೆ ಕೆಲವು ಪ್ರಮುಖ ಸುಧಾರಣೆಗಳು ನಡೆಯುತ್ತಿರುವುದನ್ನು ನೀವು ಕೇಳಿದ್ದೀರಿ. ಕೆಲವು ವರ್ಷಗಳಿಂದಲೇ ಇಂತಹ ಸುಧಾರಣೆಗಳನ್ನು ನಾವು ಕೈಗೊಳ್ಳುತ್ತಿದ್ದೇವೆ. ಜಿಎಸ್‌ಟಿ ಜಾರಿ, ಬ್ಯಾಂಕ್‌ರಪ್ಟ್‌ಸಿ ಕಾಯ್ದೆ ಜಾರಿ (ದಿವಾಳಿ ಕಾಯ್ದೆ), ಇವೆಲ್ಲ ರಚನಾತ್ಮಕ ಸುಧಾರಣೆಗಳು. ಪ್ರೋಸೆಸ್ ರಿಫಾರ್ಮ್ಸ್‌ ಎಂದರೆ ಪ್ರಕ್ರಿಯಾತ್ಮಕ ಸುಧಾರಣೆ. ಬೋಲ್ಟ್‌ ಅಂಡ್ ನಟ್ಸ್ ಬದಲಾಯಿಸಿದರೆ ಅದು ರಚನಾತ್ಮಕ ಬದಲಾವಣೆ ಆಗುತ್ತದೆ. ಸರಕಾರದಲ್ಲಿ ಪ್ರಕ್ರಿಯಾತ್ಮಕ ಸುಧಾರಣೆಗಳು ವಿವಿಧ ಹಂತಗಳಲ್ಲಿ ನಡೆಯುತ್ತಿವೆ ಎಂದು ಸನ್ಯಾಲ್ ವಿವರಿಸಿದರು.


ಈ ಪ್ರಕ್ರಿಯಾತ್ಮಕ ಸುಧಾರಣೆಯ ಅಗತ್ಯವೇನು? ಹೇಗಿದೆಯೋ ಹಾಗೆ- ಪ್ರೊಸೆಸ್ ಮ್ಯಾಪಿಂಗ್ ಮಾಡುವುದು; ನಿರ್ದಿಷ್ಟ ಸಮಸ್ಯೆಗಳನ್ನು ತಿಳಿಯಲು ಪ್ರೋಸೆಸ್ ಅನಾಲಿಸಿಸ್ (ಪ್ರಕ್ರಿಯಾತ್ಮಕ ವಿಶ್ಲೇಷಣೆ); ಪ್ರಕ್ರಿಯೆಯಲ್ಲಿ ಸುಧಾರಣೆ; ನೂತನ ಪ್ರಕ್ರಿಯೆಯ ಮೇಲೆ ನಿಕಟ ನಿಗಾ ಇರಿಸುವುದು; ದೋಷಪೂರಿತ ಪಟ್ಟಿಯ ಮರುಪರಿಶೀಲನೆ ಈ ಹಂತಗಳಲ್ಲಿ ಸೇರಿದೆ ಎಂದು ಅವರು ತಿಳಿಸಿದರು.


ಉದಾಹರಣೆಗಳನ್ನು ನೀಡುವುದಾದರೆ; ರಾಷ್ಟ್ರೀಯ ಮಹತ್ವದ ಸ್ಮಾರಕಗಳು (ಎಂಎನ್‌ಐ)- ಪಟ್ಟಿ- ಇದು ಬ್ರಿಟಿಷ್ ಸರಕಾರ ಆರಂಭಿಸಿದ ಪಟ್ಟಿ. ಇದನ್ನು ಈ ವರೆಗೆ ಯಾರೂ ಮರುಪರಿಶೀಲನೆ ಮಾಡಲಿಲ್ಲ. ಮೋದಿ ಸರಕಾರ ಆ ಕಾರ್ಯಕ್ಕೆ ಕೈಹಾಕಿತು. ಇಂತಹ ಪಟ್ಟಿಗೆ ಸೇರಿದ ಸ್ಮಾರಕದ 100 ಮೀಟರ್ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವೆಂದು ಗುರುತಿಸಲಾಗಿರುತ್ತದೆ. ಅಲ್ಲಿ ಯಾವುದೇ ನಿರ್ಮಾಣ ಚಟುವಟಿಕೆ ನಡೆಯುವಂತಿಲ್ಲ. ಅದರ ನಂತರದ 200 ಮೀಟರ್ ಪ್ರದೇಶವನ್ನು ನಿಯಂತ್ರಿತ ಪ್ರದೇಶ ಎಂದು ಗುರುತಿಸಲಾಗಿರುತ್ತದೆ.


ಮರುಪರಿಶೀಲನೆ ಆರಂಭಿಸಿದ ಬಳಿಕ ಇಂತಹ ಪಟ್ಟಿಯಲ್ಲಿ ಸೇರ್ಪಡೆಯಾದ ಹಲವಾರು ಸ್ಮಾರಕಗಳು ವಾಸ್ತವದಲ್ಲಿ ಇರಲೇ ಇಲ್ಲ ಎಂಬುದು ಗೊತ್ತಾಯಿತು. ಉದಾಹರಣೆಗೆ 75 ಬ್ರಿಟಿಷ್ ಅಧಿಕಾರಿಗಳ ಸಮಾಧಿಗಳು, ಫ್ರೆಂಚರು ಡಚ್ಚರಿಗೆ ಸೇರಿದ  ಗೋರಿಗಳು 109 ಮಿನಾರ್‍‌ಗಳು ಇತ್ಯಾದಿ. ಭಾರತದಲ್ಲಿ ಇಂದು ಒಟ್ಟು 3695 ಇಂತಹ ಎಂಎನ್‌ಐಗಳನ್ನು ಪ್ರಾಚ್ಯವಸ್ತು ಇಲಾಖೆ ಅಡಿಯಲ್ಲಿ ಸಂರಕ್ಷಿಸಲಾಗಿದೆ. ಅವುಗಳ ಪೈಕಿ 2584 ಎಂಎನ್‌ಐಗಳನ್ನು ಸಾಮೂಹಿಕವಾಗಿ ವಸಾಹತುಶಾಹಿ ಯುಗದ ಪಟ್ಟಿಗೆ ವರ್ಗಾಯಿಸಲಾಯಿತು.



ಜಾನ್ ನಿಕೋಲ್ಸನ್‌ ಬ್ರಿಟಿಷ್ ಅಧಿಕಾರಿ. ಆತ ಬಹುದೊಡ್ಡ ಹತ್ಯಾಕಾಂಡ ನಡೆಸಿದ್ದ. ಆದರೆ ಆತ ಬ್ರಿಟಿಷರ ಪಾಲಿಗೆ ಹೀರೋ ಆಗಿದ್ದ. ಆತನ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕವಾಗಿ ಬ್ರಿಟಿಷರು ಮಾಡಿದ್ದರು. ಭಾರತ ಸರಕಾರ ಜುಲೈ 2024ನಲ್ಲಿ ಆತನ ಪ್ರತಿಮೆಯನ್ನು ಕಿತ್ತು ಬ್ರಿಟನ್‌ಗೆ ಕಳುಹಿಸಿಕೊಟ್ಟಿತು. 


1. ಆಡಳಿತಾತ್ಮಕ ಸರಿಪಡಿಸುವಿಕೆ (ಅಡ್ಮಿನಿಸ್ಟ್ರೇಟಿವ್ ಸ್ಟ್ರೀಮ್‌ಲೈನಿಂಗ್)


ಸ್ವಯಂಪ್ರೇರಿತವಾಗಿ ಕಂಪನಿಗಳ ಮುಚ್ಚುವಿಕೆ. ದೇಶದಲ್ಲಿ ಇತ್ತೀಚಿನ ವರೆಗೂ ಹೀಗೊಂದು ಕಾರ್ಯ ಅತ್ಯಂತ ಕಷ್ಟಕರವಾಗಿತ್ತು. ಅದಕ್ಕೆ ಕಾರ್ಮಿಕ ಇಲಾಖೆ, ತೆರಿಗೆ ಇಲಾಖೆ- ಹೀಗೆ ನೂರೆಂಟು ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕಿತ್ತು. ಅದೆಲ್ಲ ಪ್ರಕ್ರಿಯೆಗಳೇ ಬಹು ಜನರಿಗೆ ತಿಳಿದಿರಲಿಲ್ಲ. ಕಂಒನಿಗಳ ರಿಜಿಸ್ಟ್ರಾರ್ ಹತ್ತಿರ ಹೋಗಿ ಮನವಿ ಮಾಡಬೇಕಿತ್ತು. ಅವರ ಸೂಚನೆಯಂತೆ ಜಾಹೀರಾತು ನೀಡಬೇಕಿತ್ತು. ನಂತರ ಅಧಿಕಾರಿಗಳ ರೇಟ್ ಕಾರ್ಡ್‌ನಂತೆ ಲಂಚ ನೀಡಬೇಕಿತ್ತು.


ಈ ಎಲ್ಲ ಅಪದ್ಧಗಳನ್ನು ಗಮನಿಸಿದ ಬಳಿಕ ಸರಕಾರ ಸಿಪೇಸ್ (C PACE) ವೆಬ್‌ಸೈಟನ್ನು ಆರಂಭಿಸಿತು. ಅದರಲ್ಲಿ ಸೂಚಿಸಿದ ಪ್ರಕ್ರಿಯೆಗಳನ್ನು ಸರಳವಾಗಿ ಭರ್ತಿ ಮಾಡುವ ಮೂಲಕ ಕಂಪನಿ ಮುಚ್ಚುಗಡೆ ಕಾರ್ಯ ಸುಲಲಿತಗೊಳಿಸಲಾಯಿತು.


21 ದಿನಗಳ ಬಳಿಕ ಯಾರೂ ಆಕ್ಷೇಪ ವ್ಯಕ್ತಪಡಿಸದಿದ್ದರೆ ತಾನಾಗಿಯೇ ಎನ್‌ಓಸಿ ರಚಿಸಿ ರಿಜಿಸ್ಟ್ರಾರ್ ಆಫ್ ಕಂಪನಿಗೆ ಕಳುಹಿಸುತ್ತದೆ.


ಕಂಪನಿಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚಲು ಈ ಮೊದಲು 499 ದಿನಗಳು ಬೇಕಾಗಿದ್ದವು. ಆದರೆ ಈಗ ಪ್ರಕ್ರಿಯಾತ್ಮಕ ಸುಧಾರಣೆ ಜಾರಿಗೊಳಿಸಿದ ನಂತರ ಕೇವಲ 90 ದಿನಗಳಲ್ಲಿ ಇಡೀ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಇದು ಜಗತ್ತಿನಲ್ಲೇ ಅತಿ ವೇಗದ ಪ್ರಕ್ರಿಯೆಯಯಾಗಿದೆ.


2. ನಿಯಂತ್ರಣ ವಿಧಾನಗಳಲ್ಲಿ ಬದಲಾವಣೆ:

ಐಟಿ-ಬಿಪಿಓ ವಲಯದಲ್ಲಿ ಮಾಡಲಾದ ಸುಧಾರಣೆಗಳು ಇಡೀ ವಲಯಕ್ಕೆ ವರವಾಗಿ ಪರಿಣಮಿಸಿತು. ಮಾರ್ಚ್ 2020ಯಲ್ಲಿ ಲಾಕ್‌ಡೌನ್ ಮಾಡಿದಾಗ ಓಎಸ್‌ಪಿ ರೆಗ್ಯುಲೇಶನ್ ಅಮಾನತು ಮಾಡುವುದಾಗಿ ಟೆಲಿಕಾಂ ಸಚಿವಾಲಯ ಹೇಳಿತು. ಆಗಷ್ಟೇ ಈ ಗೊಂದಲಗಳು ಸರಕಾರದ ಗಮನಕ್ಕೆ ಬಂತು. ನಿರ್ಬಂಧ ಸಡಿಲಿಸಿದಾಗ 92% ಬಿಪಿಓ ಕಂಪನಿಗಳಿಗೆ ಇದರಿಂದ ಅನುಕೂಲವಾಯಿತು.


3. ಶಾಸನಾತ್ಮಕ ಬದಲಾವಣೆಗಳು

ವ್ಯವಸ್ಥೆಯ ಗುಲಾಮರಾಗಿ ಇರುವಂತಹ ಪರಿಸ್ಥಿತಿ ಇತ್ತು. ಇದನ್ನು ಬದಲಾಯಿಸಲು ಮೋದಿ ಸರಕಾರ ದೃಢ ನಿರ್ಧಾರ ಮಾಡಿತು.


4. ಸರಕಾರದ ಸಾಮರ್ಥ್ಯವನ್ನು ಹೆಚ್ಚಿಸುವುದು.

ಐಪಿಆರ್ (ಪೇಟೆಂಟ್) ನೋಂದಣಿ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಮಾಡಲಾಯಿತು. ಇದರಿಂದ 2023-24ರಲ್ಲಿ ಭಾರತದಲ್ಲಿ 1 ಲಕ್ಷಕ್ಕೂ ಅಧಿಕ ಪೇಟೆಂಟ್‌ಗಳನ್ನು ನೋಂದಣಿ ಮಾಡಲಾಯಿತು. ಇದು ಈ ವರೆಗಿನ ಇತಿಹಾಸದಲ್ಲೇ ಅತಿದೊಡ್ಡ ಸಂಖ್ಯೆಯಾಗಿದೆ. ಹಳೆಯ ಬಾಕಿಗಳನ್ನೂ ಕ್ಲಿಯರ್ ಮಾಡಲಾಯಿತು. ಆದರೂ ನಾವು ಇತರ ಮುಂದುವರಿದ ದೇಶಗಳಿಗೆ ಹೋಲಿಸಿದರೆ ಹಿಂದುಳಿದಿದ್ದೇವೆ.


5. ಸರಕಾರ ಕಡ್ಡಾಯಗೊಳಿಸಿದ ಅಗತ್ಯಗಳನ್ನು ತೆಗೆದುಹಾಕುವುದು:

ಕಾನೂನು ಕ್ರಮ ಕೈಗೊಳ್ಳುವುದಕ್ಕೆ ಮುನ್ನಕಡ್ಡಾಯ ಪಾಲನೆಯಾಗಬೇಕಾದ ಅಗತ್ಯಗಳನ್ನು ಕಡಿಮೆ ಮಾಡುವುದು. ಭಾರತ ಸರಕಾರ 840ಗೂ ಅಧಿಕ ಸ್ವಾಯತ್ತ ಸಂಸ್ಥೆಗಳನ್ನು ಹೊಂದಿದೆ. 


6. ಕಾಲಬಾಹಿರವಾದ ಸರಕಾರ ಏಜೆನ್ಸಿಗಳ ವಿಲೀನ/ ಮುಚ್ಚುವಿಕೆ/ ಪುನಾರಚನೆ.

ಉದಾಹರಣೆಗೆ, ಆಲ್‌ ಇಂಡಿಯಾ ಹ್ಯಾಂಡಿಕ್ರಾಫ್ಟ್‌ ಬೋರ್ಡ್, ಟ್ಯಾರಿಫ್ ಕಮಿಷನ್‌, ಆಲ್ ಇಂಡಿಯಾ ಹ್ಯಾಂಡ್‌ಲೂಮ್ ಬೋರ್ಡ್, ವರ್ಕ್‌ಶಾಪ್‌ಗಳ ಆಧುನೀಕರಣಕ್ಕಿರುವ ಕೇಂದ್ರೀ ಸಂಸ್ಥೆ, ರಾಷ್ಟ್ರೀಯ ಮಹಿಳಾ ಕೋಶ- ಇವುಗಳ ಪೈಕಿ ಕೆಲವು ಅಷ್ಟೆ. ಈ ಎಲ್ಲ ಸಂಸ್ಥೆಗಳು ನಿವೃತ್ತರ ಪುನರ್ವಸತಿಗಾಗಿ ಸ್ಥಾಪಿಸಲಾದ ಸರಕಾರಿ ಏಜೆನ್ಸಿಗಳಾಗಿದ್ದವು.


ಜಿಎಸ್‌ಟಿ, ಡಿಜಿಟಲ್ ಇಂಡಿಯಾದಂತಹ ಉಪಕ್ರಮಗಳನ್ನು ಜಾರಿಗೊಳಿಸಿದ ಬಳಿಕ ದೇಶವು ಅಭಿವೃದ್ಧಿಯ ನಾಗಾಲೋಟದಲ್ಲಿ ಸಾಗುತ್ತಿರುವುದನ್ನು ಯಾರೂ ಅಲ್ಲಗಳೆಯಲಾಗದು.


ಸಂವಾದವನ್ನು ಬಂಗಾರಡ್ಕ ವಿಶ್ವೇಶ್ವರ ಭಟ್ ನಡೆಸಿಕೊಟ್ಟರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top