ಮಧೂರು ಬ್ರಹ್ಮಕಲಶ- ಅಮ್ಮಂಗೋಡು ಶ್ರೀ ಶಬರೀನಾಥ ಭಜನಾ ಮಂದಿರ ಪ್ರಾದೇಶಿಕ ಸಮಿತಿ ಸಭೆ

Upayuktha
0


ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವದ ಅಂಗವಾಗಿ ಅಮ್ಮಂಗೋಡು ಶ್ರೀ ಶಬರೀನಾಥ ಭಜನಾ ಮಂದಿರದಲ್ಲಿ ಇತ್ತೀಚೆಗೆ ಅಮ್ಮಂಗೋಡು ಶ್ರೀ ಶಬರೀನಾಥ ಭಜನಾ ಮಂದಿರ ಪ್ರಾದೇಶಿಕ ಸಮಿತಿ ರಚನಾ ಸಭೆ ಶ್ರೀ ಕ್ಷೇತ್ರದಲ್ಲಿ ಜರಗಿತು.


ದಾಮೋದರ ಅಮ್ಮಂಗೋಡ್ ಅಧ್ಯಕ್ಷ ಸ್ಥಾನ ವಹಿಸಿದರು. ರಾಜನ್ ಮುಳಿಯಾರು ಬ್ರಹ್ಮಕಲಶದ ಬಗ್ಗೆ ವಿವರಿಸಿದರು. ಗೋವಿಂದ ಬಳ್ಳಮೂಲೆ ಸಮಿತಿಯ ಕಾರ್ಯಯೋಜನೆಗಳ ಬಗ್ಗೆ ಸಮಗ್ರ ಮಾಹಿತಿಗಳನ್ನಿತ್ತರು. ಸಭೆಯಲ್ಲಿ ಸಮಿತಿಯ ಕಾರ್ಯಕಾರೀ ಸಮಿತಿಯನ್ನು ರೂಪೀಕರಿಸಲಾಯಿತು.


ನಾರಾಯಣ ಗುರುಸ್ವಾಮಿ, ಚಂದು ನಾಯರ್, ಪ್ರಭಾಕರ ಮಾಸ್ಟರ್, ವಾಮನ ಆಚಾರ್ಯ ಗೌರವಾಧ್ಯಕ್ಷರು, ದಾಮೋದರ ಬಿ ಅಧ್ಯಕ್ಷರು, ಕೃಷ್ಣ ಎ, ಬಾಲಕೃಷ್ಣ ಮೇಸ್ತ್ರಿ, ಪವಿತ್ರಿ, ಶಶಿಕುಮಾರ್ ಉಪಾಧ್ಯಕ್ಷರು, ಜನಾರ್ದನನ್ ನಾಯರ್ ಕಾರ್ಯದರ್ಶಿ, ತುಳಸಿಧರನ್, ವಿನಯರಾಜ್, ಪ್ರಕಾಶನ್, ಕೃಷ್ಣರಾಜ್ ಕೆ.ವಿ ಜೊತೆ ಕಾರ್ಯದರ್ಶಿ, ಎನ್.ಪಿ ಉಪೇಂದ್ರ ಕೋಶಾಧಿಕಾರಿಯಾಗಿ ಮತ್ತು ಇತರ ಸದಸ್ಯರುಗಳನ್ನು ಸಮಿತಿಗೆ ಆಯ್ಕೆ ಮಾಡಲಾಯಿತು. 

ಸಮಿತಿಯ ಪ್ರಧಾನ ಸಂಯೋಜಕರಾಗಿ ಕೃಷ್ಣನ್ ಅಮ್ಮಂಗೋಡ್ ಇವರನ್ನು ಆಯ್ಕೆ ಮಾಡಲಾಯಿತು.


ಸಭೆಯಲ್ಲಿ ನಿವೇದನಾ ಪತ್ರ ಮತ್ತು ರಶೀದಿ ಪುಸ್ತಕಗಳನ್ನು ಸಮಿತಿಯವರಿಗೆ ಹಸ್ತಾ೦ತರಿಸಲಾಯಿತು. ಆಯ್ಕೆ ಮಾಡಲಾದ ಪದಾಧಿಕಾರಿಗಳು ಸ್ಥಾನವನ್ನು ಸ್ವೀಕರಿಸಿದ ಬಳಿಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ತುಳಸಿ ಅಮ್ಮಂಗೋಡು ಸ್ವಾಗತಿಸಿ ಜನಾರ್ದನನ್ ಧನ್ಯವಾದವಿತ್ತರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top