ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನ: ಕುಂಭ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Upayuktha
0


ಮಂಗಳೂರು: ಕುಲಶೇಖರದ ಶ್ರೀ ವೀರನಾರಾಯಣ ದೇವಸ್ಥಾನದ ನೂತನ ಆಡಳಿತ ಮಂಡಳಿಯ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಶ್ರೀ ವೀರನಾರಾಯಣ ದೇವರಿಗೆ ಮತ್ತು ಶ್ರೀ ಮಹಾಗಣಪತಿ ದೇವರಿಗೆ ನೂತನವಾಗಿ ಆಯ್ಕೆಗೊಂಡ ಮಂಡಳಿಯ ಸದಸ್ಯರಿಂದ ರಂಗಪೂಜೆ ನಡೆಯಿತು. ಇದೇ ಸಂದರ್ಭದಲ್ಲಿ ಫೆಬ್ರವರಿ 11 ರಿಂದ 15 ರವರೆಗೆ ನಡೆಯುವ ಕುಂಭ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

 

ಈ ಸಂದರ್ಭದಲ್ಲಿ ಕ್ಷೇತ್ರದ ತಂತ್ರಿಗಳಾದ ಶ್ರೀಹರಿ ಉಪಾಧ್ಯಾಯ, ಕ್ಷೇತ್ರದ ಅರ್ಚಕ ವೃಂದ, ಆಡಳಿತ ಮೊಕ್ತೇಸರ ಕೆ ಸುಂದರ್ ಕುಲಾಲ್ ಶಕ್ತಿನಗರ, ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ದಾಮೋದರ ಎ, ಸೇವಾ ಟ್ರಸ್ಟ್‌ ಅಧ್ಯಕ್ಷ ಪ್ರೇಮಾನಂದ ಕುಲಾಲ್ ಕೋಡಿಕಲ್, ನಿಕಟಪೂರ್ವ ಆಡಳಿತ ಮೊಕೇಸರ ಪುರುಷೋತ್ತಮ್ ಕುಲಾಲ್ ಕಲ್ಬಾವಿ, ಸೇವಾ ಸಮಿತಿ ಕಾರ್ಯದರ್ಶಿ ಧೀರಜ್ ಶಕ್ತಿನಗರ, ಮಾತೃ ಮಂಡಳಿಯ ಅಧ್ಯಕ್ಷೆ ಪಾರ್ವತಿಶೇಖರ್ ಶಕ್ತಿನಗರ, ಶ್ರೀ ದೇವಿ ದೇವಸ್ಥಾನದ ಅಧ್ಯಕ್ಷ ಸದಾಶಿವ ಅತ್ತಾವರ, ಜಿಲ್ಲಾ ಸಂಘದ ಕಾರ್ಯದರ್ಶಿ ಕುಶಾಲಪ್ಪ, ಕ್ಷೇತ್ರದ ಟ್ರಸ್ಟಿಗಳಾದ ಗಿರಿಧರ್ ಜೈ ಮೂಲ್ಯ, ದಯಾನಂದ್ ಪಿ ಎಸ್ ಕುತ್ತಾರು, ಮೋಹನ್‌ದಾಸ್ ಅಳಪೆ, ರಾಜೇಶ್ ಕುಲಾಲ್ ಶಕ್ತಿನಗರ, ಸದಾನಂದ ಬಂಗೇರ ಕೆ ಮುಡಿಪು, ಆನಂದ ಪಿ ಉರ್ವ, ವಾಸುದೇವ ಮೂಲ್ಯ ಉಳಾಯಿಬೆಟ್ಟು ಮತ್ತು ರಮೇಶ್ ಎಂ ಬಾಳ, ಮಹಿಳಾ ವಿಭಾಗದ ಉಪಾಧ್ಯಕ್ಷೆ ನಾಗವೇಣಿ ಮಾಧವ, ಅಶ್ವಿನಿ ಕಿಶೋರ್, ಸುಕನ್ಯಾ ಪ್ರಜ್ವಲ್, ಸೌಮ್ಯ ಕಿಶೋರ್, ಮೋಹಿನಿ ನೀರುಮಾರ್ಗ, ಭವಾನಿ ಶಂಕರ್ ಮರೋಳಿ, ಗೋಪಾಲ ಬಂಗೇರ, ಸುರೇಶ್ ಕುಲಾಲ್ ಮುಂಬೈ, ನಾಗೇಶ್ ಕದ್ರಿ, ಗಣೇಶ್ ಉರ್ವ, ರಮೇಶ್ ಮೂಲ್ಯ, ಶೇಖರ್ ಶಕ್ತಿನಗರ, ಪ್ರಜ್ವಲ್ ಶಕ್ತಿನಗರ, ಧನುಷ್ ಶಕ್ತಿನಗರ, ಮೋನಪ್ಪ ನೀರುಮಾರ್ಗ, ಮೋಹನ್ ನೀರುಮಾರ್ಗ, ರತ್ನಾಕರ್ ನೀರುಮಾರ್ಗ, ವಿಶ್ವನಾಥ ಟಿ. ವಾಮಂಜೂರು ಮತ್ತು ಹಲವಾರು ಭಕ್ತಾದಿಗಳು ಭಾಗವಹಿಸಿದ್ದರು.


ಶ್ರೀ ವೀರನಾರಾಯಣ ದೇವಸ್ಥಾನದ ಸೇವಾ ಸಮಿತಿಗೆ ಆಯ್ಕೆ: ಅಧ್ಯಕ್ಷರಾಗಿ ಕಿರಣ್ ಅಟ್ಲೂರು, ಕಾರ್ಯದರ್ಶಿ ಧೀರಜ್ ಕುಲಾಲ್, ಉಪಾಧ್ಯಕ್ಷ ಮೋನಪ್ಪ ಕುಲಾಲ್, ದಿನೇಶ್ ಕುಲಾಲ್ ಆಕಾಶಭವನ, ಜೊತೆ ಕಾರ್ಯದರ್ಶಿ ಧನುಶ್ ರಾಜ್, ಯಶರಾಜ್, ಸಂಘಟನಾ ಕಾರ್ಯದರ್ಶಿ ಸದಾನಂದ ಬೀಕರ್ಣಕಟ್ಟೆ ರತ್ನಾಕರ್, ಪದ್ಮನಾಭ ಮುಲ್ಲಕಾಡ್ ನಾಗೇಶ್ ಅದ್ಯಪಾಡಿ, ಹೇಮಂತ್ ಕುಲಾಲ್, ಕೋಶಾಧಿಕಾರಿ ಚರಣ್ ಕುಲಾಲ್ ಮತ್ತು ಸುಮಾರು 100 ಜನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.


ಇದೇ ಸಂದರ್ಭ ಹಲವಾರು ಹಿರಿಯ ಸದಸ್ಯರ ಸಮ್ಮುಖದಲ್ಲಿ ನಿಕಟಪೂರ್ವ ಅಧ್ಯಕ್ಷ ಕೆ ಸುಂದರ್ ಕುಲಾಲ್ ಮತ್ತು ನಿಕಟಪೂರ್ವ ಕಾರ್ಯದರ್ಶಿ ಜನಾರ್ದನ ಸಾಲಿಯಾನ್‌ರವರಿಂದ ಅಧಿಕಾರ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಗಿರಿಧರ್ ಜೆ ಮೂಲ್ಯ, ನಾಗೇಶ್ ಕದ್ರಿ, ರಾಜೇಶ್ ಶಕ್ತಿನಗರ, ಗೌರವ ಸಲಹೆಗಾರರಾಗಿ ಸದಾಶಿವ ಬಿಜೈ ಮತ್ತಿತರರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top