ಜೈ ಭಾರತಿ ತರುಣ ವೃಂದದ ವಜ್ರ ಮಹೋತ್ಸವಕ್ಕೆ ಚಾಲನೆ

Chandrashekhara Kulamarva
0


ಮಂಗಳೂರು: ನಗರದ ಹೊಯ್ಗೆಬೈಲ್‌ನ ಜೈ ಭಾರತಿ ತರುಣ ವೃಂದದ ವಜ್ರ ಮಹೋತ್ಸವ ಸಂಭ್ರಮಾಚರಣೆಯ ಉದ್ಘಾಟನೆ ಹಾಗೂ ಲಾಂಛನ ಅನಾವರಣ ಕಾರ್ಯಕ್ರಮ ಭಾನುವಾರ ಕುಲಶೇಖರ ಬಳಿಯ ರಿಯಾ ಫೌಂಡೇಶನ್ ವಿಶೇಷ ಮಕ್ಕಳ ಕೇಂದ್ರದಲ್ಲಿ ನಡೆಯಿತು.


ವಜ್ರಮಹೋತ್ಸವ ಲಾಂಛನ ಅನಾವರಣಗೊಳಿಸಿದ ವಕೀಲ ರಾಘವೇಂದ್ರ ರಾವ್ ಮಾತನಾಡಿ ‘ಮಾನವೀಯ ಸೇವೆಯಲ್ಲಿ ತೊಡಗಿಸಿಕೊಳ್ಳುವ ಯುವ ಸಮುದಾಯ  ಸಮಾಜದ ಆಸ್ತಿ. ಕಳೆದ 60 ವರ್ಷದಿಂದ ಇಂತಹ ಸೇವೆ ನೀಡಿರುವ ಜೈ ಭಾರತಿ ತರುಣ ವೃಂದ ಮಾದರಿ ಯುವ ಸಂಘಟನೆಯಾಗಿದೆ' ಎಂದರು.


ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಮಾತನಾಡಿ ‘ಯುವ ಸಮುದಾಯಕ್ಕೆ ಸೇವೆಯಲ್ಲಿ ತೊಡಗಿಸಿಕೊಳ್ಳಲು ಸದಾ ಪ್ರೇರಣೆ ನೀಡಿರುವ  ಜೈ ಭಾರತಿ ತರುಣ ವೃಂದ ಸ್ಥಳೀಯ ಯುವಕರ ಒಗ್ಗಟ್ಟಿನ ಪ್ರತೀಕವಾಗಿ ಬೆಳೆದಿರುವುದು ಸಮಾಜಕ್ಕೆ ಮಾದರಿಯಾಗಿದೆ' ಎಂದರು.


ರಿಯಾ ಫೌಂಡೇಶನ್ ವಿಶೇಷ ಮಕ್ಕಳ ಕೇಂದ್ರದ ಮೇಲ್ವಿಚಾರಕಿ ರಶ್ಮಿತಾ ಮುಖ್ಯ ಅತಿಥಿಯಾಗಿದ್ದರು. ಜೈ ಭಾರತಿ ತರುಣ ವೃಂದದ

ಅಧ್ಯಕ್ಷ ವಿಕ್ರಮ್ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಕೇಶವ ಕರ್ಕೇರ, ಕಾರ್ಯದರ್ಶಿ ಜಿತೇಂದ್ರ, ಕೋಶಾಧಿಕಾರಿ ಸುನಿಲ್ ಕುಮಾರ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.


ಉಪಾಧ್ಯಕ್ಷ ಸತೀಶ್ ಪೂಜಾರಿ ಅಶೋಕನಗರ ಸ್ವಾಗತಿಸಿದರು. ಮಾಜಿ ಕಾರ್ಯದರ್ಶಿ ಸತೀಶ್ ಶೆಟ್ಟಿ ಕೊಡಿಯಾಲ್‌ಬೈಲ್ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭ ಜೈ ಭಾರತಿ ತರುಣ ವೃಂದದಿಂದ ವಿಶೇಷ ಮಕ್ಕಳ ಕೇಂದ್ರಕ್ಕೆ ದಿನಸಿ ಸಾಮಾಗ್ರಿ ನೀಡಲಾಯಿತು. ಕೇಂದ್ರದ ನಿವಾಸಿಗಳೊಂದಿಗೆ ಸಹಭೋಜನ ಏರ್ಪಡಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top