ಹಿಂದೂ ಟೂರಿಸಂ ಅಸೋಸಿಯೇಶನ್ ಸಮಾವೇಶದ ಆಮಂತ್ರಣ ಬಿಡುಗಡೆ

Upayuktha
0


ಮಂಗಳೂರು: ದ.ಕ. ಜಿಲ್ಲಾ ಹಿಂದೂ ಟೂರಿಸಂ ಅಸೋಸಿಯೇಶನ್‌ ಇದರ ಸರ್ವ ಸದಸ್ಯರ ಸಮಾವೇಶ ಸಹಿತ ಸಭಾ ಕಾರ್ಯಕ್ರಮವು ಇದೇ ಫೆ. 20ರಂದು ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜರಗಲಿದ್ದು ಅದರ ಆಮಂತ್ರಣ ಪತ್ರಿಕೆಯನ್ನು ಶಾಸಕ ವೇದವ್ಯಾಸ ಕಾಮತ್ ರವರು ಬಿಡುಗಡೆಗೊಳಿಸಿದರು.


ನಂತರ ಮಾತನಾಡಿದ ಶಾಸಕರು, 2018ರಲ್ಲಿ ವಾಟ್ಸ್ ಆ್ಯಪ್ ಗ್ರೂಪ್‌ ಮೂಲಕ ಕೆಲವೇ ಸದಸ್ಯರನ್ನೊಳ ಗೊಂಡು ಆರಂಭವಾದ ಈ ಸಂಘಟನೆ ಆನಂತರ ಸಂಘದ ಸದಸ್ಯರ ಸಮಸ್ಯೆಗಳಿಗೆ ಸ್ಪಂದಿಸುವುದು, ಅನಾರೋಗ್ಯ/ ಅಪಘಾತಗಳ ಸಂದರ್ಭದಲ್ಲಿ ಹಣಕಾಸಿನ ನೆರವು ಸಹಿತ ರಕ್ತದಾನ ಮೊದಲಾದ ಚಟುವಟಿಕೆಗಳನ್ನು ನಡೆಸುತ್ತಾ ಬಂದು ಇದೀಗ ಒಂದು ಸಾವಿರಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿರುವುದು ವಿಶೇಷ. ಲಾಕ್ ಡೌನ್ ಸಂದರ್ಭದಲ್ಲಿ ಈ ತಂಡ ನಿರ್ವಹಿಸಿದ ಕಾರ್ಯವಂತೂ ಶ್ಲಾಘನೀಯವಾದುದು. ಮುಂದಿನ ದಿನಗಳಲ್ಲಿ ಈ ಸಂಘಟನೆಯಿಂದ ಹೆಚ್ಚು ಹೆಚ್ಚು ಸಮಾಜಮುಖಿ ಕಾರ್ಯಗಳಾಗಲಿ ಎಂದು ಆಶಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.


ಅಸೋಸಿಯೇಶನ್‌ ಅಧ್ಯಕ್ಷ ಹೇಮಂತ್. ಎಚ್‌.ಎಂ, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಎಚ್.ಎಂ., ಕೋಶಾಧಿಕಾರಿ ಅಣ್ಣಪ್ಪ ವಿಜಯೇಂದ್ರ, ಹರೀಶ್‌, ಅಶೋಕ್ ಶೆಟ್ಟಿ, ಮ.ನ.ಪಾ ಸದಸ್ಯ ಮನೋಹರ್ ಕದ್ರಿ, ಬಿಜೆಪಿ ಪ್ರಮುಖರಾದ ರಮೇಶ್ ಹೆಗ್ಡೆ, ಪ್ರವೀಣ್ ನಿಡ್ಡೇಲ್, ಮೊದಲಾದವರು ಉಪಸ್ಥಿತರಿದ್ದರು.


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top