ಪುಂಜಾಲಕಟ್ಟೆ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮೂಡುಪಡುಕೋಡಿ ಇಲ್ಲಿ ನಡೆಯಿತು. ಇರ್ವತ್ತೂರು ಪಂಚಾಯತ್‌ನ ಅಧ್ಯಕ್ಷೆ ಮಾಲತಿ ಮೂಡಾಯಿಮಠ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆಯ ಪ್ರಾಂಶುಪಾಲ ಪ್ರೊ. ಮಾಧವ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾಜಿ ಸಚಿವ ಬಿ. ರಮಾನಾಥ ರೈ ಅವರು ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾರ್ಥಿಗಳಿಗೆ ಶುಭ ಹಾರೈಸುತ್ತ ಶಿಬಿರಾರ್ಥಿಗಳ ಜವಾಬ್ದಾರಿಗಳನ್ನು ನೆನಪಿಸಿದರು. ವಿದ್ಯಾರ್ಥಿ ದೆಸೆಯಲ್ಲೇ ಶಿಸ್ತನ್ನು ಅಳವಡಿಸಿಕೊಂಡರೆ ಜೀವನ ಯಶಸ್ಸಿನ ಕಡೆಗೆ ಸಾಗಲು ದಾರಿದೀಪವಾಗುತ್ತದೆ, ಜೊತೆಗೆ ರಾಷ್ಟ್ರೀಯ ಮನೋಭಾವನೆಯಿಂದ ನಿಸ್ವಾರ್ಥ ಚಿಂತನೆ ನಿರ್ಮಾಣ ಸಾಧ್ಯ ಎಂದರು.
ಕಾಲೇಜಿನ ರಕ್ಷಕ- ಶಿಕ್ಷಕ ಸಂಘದ ಅಧ್ಯಕ್ಷ ಶಾಮರಾವ್ ಯು.ಜಿ. ಶುಭ ಹಾರೈಸಿದರು. ಶಿಬಿರಾಧಿಕಾರಿ ಡಾ. ಗೀತ ಎಂ.ಎಲ್ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪದ್ಮಶೇಖರ ಜೈನ್, ಎಸ್‌ಡಿಎಂಸಿ ಅಧ್ಯಕ್ಷೆ ಶಾಲಿನಿ ಯತೀಶ ಸೇವಾ, ಗ್ರಾಮ ಪಂಚಾಯತ್ ಸದಸ್ಯ ದಯಾನಂದ ಮತ್ತು ವಿಜಯ, ಶಾಲೆಯ ಉಪ ಮುಖ್ಯ ಶಿಕ್ಷಕಿ ಶಾಹೇದ ಬಾನು, ಎಲ್ಲಾ ಎಸ್‌ಡಿಎಂಸಿ ಸದಸ್ಯರು, ಯೋಜನಾಧಿಕಾರಿ ಪ್ರೊ. ಸಂತೋಷ್ ಪ್ರಭು ಹಾಗೂ ಪ್ರೊ. ಕೀರ್ತಿರಾಜ್, ಘಟಕ ನಾಯಕರಾದ ವಿಜಯ್, ಮಾನಸ, ದರ್ಶನ್ ಉಪಸ್ಥಿತರಿದ್ದರು. ಶ್ರೀಲಕ್ಷ್ಮಿ ಸ್ವಾಗತಿಸಿ, ಶಿಬಿರಾರ್ಥಿ ವರ್ಷಿಣಿ ವಂದಿಸಿ, ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ