ಕಂಬಾರು ದೇವಳ ಬ್ರಹ್ಮಕಲಶೋತ್ಸವಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಹಾಯಧನ

Upayuktha
0


ಧರ್ಮತ್ತಡ್ಕ: ಜೀರ್ಣೋದ್ಧಾರಗೊಳ್ಳುತ್ತಿರುವ ಮಂಜೇಶ್ವರ ತಾಲೂಕಿನ ಕಂಬಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮಂಡಳಿಯವರ ಮನವಿಯನ್ನು ಪುರಸ್ಕರಿಸಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ। ವೀರೇಂದ್ರ ಹೆಗ್ಗಡೆಯವರು ಭಾನುವಾರ (ಜ.5) 5 ಲಕ್ಷ ರೂ.ಗಳ ಸಹಾಯಧನ ನೀಡಿ ಶುಭ ಹಾರೈಸಿದರು.


ಶ್ರೀಮಂಜುನಾಥನ ಅನುಗ್ರಹದಿಂದ ನೀವು ಕೈಗೊಂಡ ಎಲ್ಲಾ ಕೆಲಸಗಳೂ ನಿರ್ವಿಘ್ನವಾಗಿ ನಡೆಯಲಿ, ಜನವರಿ 28 ರಿಂದ ಆರಂಭವಾಗುವ ಬ್ರಹ್ಮಕಲಶೋತ್ಸವ ನಿರಾತಂಕವಾಗಿ ನಡೆದು ಕುಡಾಲು, ಬಾಡೂರು ಗ್ರಾಮಗಳ ಹಾಗೂ ಸಮಸ್ತ ಭಕ್ತಜನತೆಗೆ ಶ್ರೇಯಸ್ಸಾಗಲಿ ಎಂದರು.


ಪೂಜ್ಯ ಹೆಗ್ಗಡೆಯವರನ್ನು ಭೇಟಿ ಮಾಡಿದ ಇಂದಿನ ತಂಡದಲ್ಲಿ ಮೊಕ್ತೇಸರರಾದ ನೆರಿಯ ಹೆಗಡೆ ಲಕ್ಷ್ಮೀನಾರಾಯಣ ಭಟ್, ಕುಡಾಲುಗುತ್ತು ದಿವಾಕರ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿಯ ಸದಸ್ಯರಾದ ಕೇಶವ ಪ್ರಸಾದ ಎಡಕ್ಕಾನ, ರಾಜಾರಾಮ ಶೆಟ್ಟಿ ಕುಡಾಲು, ಸುದೇಶ್  ಕುಡಾಲು  ಇದ್ದರು. ಈ ಸಂದರ್ಭದಲ್ಲಿ ಹೆಗ್ಗಡೆಯವರ ಕಛೇರಿ ಸಹಾಯಕರಾದ ಮಹಾವೀರ ಅವರು ಪೂರ್ಣ ಸಹಕಾರವನ್ನಿತ್ತರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top