ಬಳ್ಳಾರಿ ಎಪಿಎಂಸಿ ತರಕಾರಿ ಮಾರುಕಟ್ಟೆಗೆ ಉಪಲೋಕಾಯುಕ್ತ ಬಿ.ವೀರಪ್ಪ ಅನಿರೀಕ್ಷಿತ ಭೇಟಿ

Upayuktha
0

ರಿಟೈಲ್ ವರ್ತಕರನ್ನು ಭಾನುವಾರ ಸಂತೆ ಗೋದಾಮಿಗೆ ಸ್ಥಳಾಂತರಕ್ಕೆ ಸಹಕರಿಸಿ ಹೋಲ್‌ಸೇಲ್ ಪ್ರಾಮಾಣಿಕ ವರ್ತಕರಿಗೆ ನಿವೇಶನ ಹಂಚಲು ಪ್ರಾಮಾಣಿಕ ಪ್ರಯತ್ನ-ನಂಜುಂಡಸ್ವಾಮಿ.


ಬಳ್ಳಾರಿ: ಎಪಿಎಂಸಿಯ ತರಕಾರಿ ಮಾರುಕಟ್ಟೆಗೆ ಅನಿರೀಕ್ಷಿತ ಭೇಟಿ ನಡೆಸಿದ ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರಿಟೈಲ್ ಮತ್ತು ಹೋಲ್‌ಸೇಲ್ ವರ್ತಕರು ಒಂದೇ ಜಾಗದಲ್ಲಿ ಅಕ್ಕಪಕ್ಕ ಕುಳಿತು ನೆಲದ ಮೇಲೆ ವ್ಯಾಪಾರ ಮಾಡುವುದನ್ನು ಗಮನಿಸಿ ರಿಟೈಲ್ ವರ್ತಕರನ್ನು ಕೂಡಲೇ ಭಾನುವಾರ ಸಂತೆಯ ಗೋದಾಮಿಗೆ ಸ್ಥಳಾಂತರಿಸಬೇಕೆಂದು ಕೃಷಿ ಉತ್ಪನ್ನ ಮಾರುಕಟ್ಟೆಯ ಕಾರ್ಯಧರ್ಶಿಗಳಾದ ನಂಜುಂಡಸ್ವಾಮಿಯವರಿಗೆ ಖಡಕ್ ಆದೇಶ ಜಾರಿ ಮಾಡಿದ್ದರು.


ಆದಕಾರಣ ಕಾರ್ಯಧರ್ಶಿಯವರು ಹೋಲ್‌ವರ್ತಕರ ಸಭೆಯನ್ನು ಕರೆದು ಉಪಲೋಕಾಯುಕ್ತರ ಆದೇಶದ ಮೇರೆಗೆ ರಿಟೈಲ್ ವ್ಯಾಪಾರಸ್ಥರನ್ನು ಭಾನುವಾರ ಸಂತೆಯ ಗೋದಾಮಿನಲ್ಲಿ ಕೂರಿಸಬೇಕೆಂದು, ಇದಕ್ಕೆ ತಮ್ಮ ಸಹಕಾರ ಬೇಕೆಂದು ಕೋರಿದರು. ಇದಕ್ಕೆ ಸಾನುಕೂಲವಾಗಿ ವರ್ತಕರು ನಿಮ್ಮೊಂದಿಗೆ ನಾವುಕೂಡ ಇರಲಿದ್ದೇವೆ, ನಿಮಗೆ ನಮ್ಮ ಸಂಪೂರ್ಣ ಸಹಕಾರ ಇರುತ್ತದೆ ಎಂದು ಒಪ್ಪಿಕೊಂಡರು.


ನಿವೇಶನ ಮಂಜೂರು-ಹೋಲ್‌ಸೇಲ್ ವರ್ತಕರು ಮಾತನಾಡುತ್ತಾ  ನಿಮಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತೇವೆ ಎಂದು 2006-07 ರಲ್ಲಿ ರಾತ್ರೋ ರಾತ್ರಿ ತೇರುಬೀದಿಯ ದೊಡ್ಡ ಮಾರುಕಟ್ಟೆಯಿಂದ ಎಪಿಎಂಸಿಗೆ ನಮ್ಮನ್ನು ಸ್ಥಳಾಂತರಿಸಲಾಯ್ತು, ಆದರೇ 18 ವರ್ಷಗಳು ಕಳೆದರೂ ಈ ವರಗೆ ನಾವು ಸೌಲಭ್ಯಗಳಿಂದ ವಂಚಿತರಾಗಿದ್ದೇವೆ, ನಮಗೇ ಇಲ್ಲಿ ಯಾವುದೇ ಸೌಲಭ್ಯವಿಲ್ಲ.


ರೈತರು ಬಂದರೇ ವಿಶ್ರಾಂತಿ ತೆಗೆದುಕೊಳ್ಳಲು ಜಾಗವಿಲ್ಲ, ರೈತರು ತಂದ ಮಾಲಿಗೆ ಭದ್ರತೆ ಇಲ್ಲ,  ದನಕರುಗಳ ಕಾಟ, ಗೂಳಿಗಳ ಕಾಟ, ಕುರಿ ಮೇಕೆಗಳ ಕಾಟ, ಗೂಳಿಗಳು ಒಂದಕ್ಕೊಂದು ಗುದ್ದಾಡುತ್ತಾ ಜನರನ್ನು ಇರಿದುಕೊಂಡು ಹೋಗಿ ಬಹಳಷ್ಟು ಜನರು ಮಂಚಕ್ಕೆ ಬಿದ್ದು ಬಳಲುತಿದ್ದಾರೆ, ಇನ್ನೂ ಕೆಲ ಜನ ಮರಣಹೊಂದಿದ್ದಾರೆ, ಇಂತಹಾ ಘಟನೆಗಳು ಮರುಕಳಿಸಬಾರದೆಂದು, ಹಾಗಾಗಿ ನಮಗೆ ನೀವು ಕೊಟ್ಟ ಮಾತಿನಂತೆ ನಿವೇಶನ ಮಂಜೂರು ಮಾಡಬೇಕೆಂದು, ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಕಾರ್ಯಧರ್ಶಿ ನಂಜುಂಡಸ್ವಾಮಿಯವರಲ್ಲಿ ಮನವಿ ಮಾಡಿಕೊಂಡರು.


ಕಾರ್ಯಧರ್ಶಿ ನಂಜುಂಡಸ್ವಾಮಿಯವರು ವರ್ತಕರ ಬೇಡಿಕೆಗಳಿಗೆ ಸ್ಪಂದಿಸುತ್ತಾ ಶೀಘ್ರದಲ್ಲೇ ನಿಮ್ಮ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದು, ಮಾರುಕಟ್ಟೆಯಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡುವಂತೆ ತಿಳಿಸಿದರು. ಈ ಸಂಧರ್ಭದಲ್ಲಿ ಎಲ್ಲಾ ಹೋಲ್‌ಸೇಲ್ ತರಕಾರಿ ವರ್ತಕರು, ಕಚೇರಿಯ ಸಿಬ್ಬಂದಿ ಉಪಸ್ಥಿತರಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top