ಬಳ್ಳಾರಿ:ಸಮರ್ಥನಂ ಅಂಗವಿಕಲರ ಸಂಸ್ಥೆ ಆಯೋಜಿಸಿರುವ ವಿಕಲಚೇತನರ ಉಚಿತ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮದ ಉದ್ದೇಶದ ಬಗ್ಗೆ ಮೌನೇಶಪ್ಪ ಸಮರ್ಥನಂ ಅಂಗವಿಕಲರ ಸಂಸ್ಥೆಯ ವ್ಯವಸ್ಥಾಪಕರು ಮಾತನಾಡಿ ಬಳ್ಳಾರಿ ಜಿಲ್ಲೆಯಲ್ಲಿ ವಿಶೇಷ ಚೇತನ ಉಳ್ಳವರು ಬಹಳಷ್ಟು ಜನ ಇದ್ದಾರೆ ಅವರಿಗೆ ಸಮರ್ಥನಂ ಅಂಗವಿಕಲರ ಸಂಸ್ಥೆ ಕಡೆಯಿಂದ ಅಗತ್ಯ ಮೌಲ್ಯಮಾಪನ ಶಿಬಿರದಲ್ಲಿ ಕೃತಕ ಅಂಗಗಳು ಕ್ಯಾಲಿಪರ್ಸ್, ವಿಶೇಷ ಚೇರ್ ಗಳು ಮತ್ತು ಅವರಿಗೆ ಬೇಕಾಗಿರುವ ಸಾಮಗ್ರಿಗಳ ಅಳತೆಯನ್ನು ತೆಗೆದುಕೊಳ್ಳಲಾಗಿದೆ.
ಅತಿ ಶೀಘ್ರದಲ್ಲಿ ಅವರಿಗೆ ಅಳತೆ ತಕ್ಕಂತೆ ಉಪಕರಣಗಳನ್ನು ನೀಡಲಾಗುವುದು ಮತ್ತು 60 ಕ್ಕಿಂತ ಹೆಚ್ಚು ವಿಶೇಷ ಚೇತನವುಳ್ಳವರು ಭಾಗವಹಿಸಿ ತಪಾಸಣಗೆ ಒಳಗಾದರು. ಗೋವರ್ಧನ್ ದಾಸ್ ಹೆಲ್ತ್ ಪ್ರಾಜೆಕ್ಟ್ ಮ್ಯಾನೇಜರ್ ಸಮರ್ಥನಂ ಅಂಗವಿಕಲರ ಸಂಸ್ಥೆ ಬೆಂಗಳೂರು ರವರು ಮಾತನಾಡಿ ಈ ಉಪಕರಣಗಳನ್ನು ಪಡೆದುಕೊಂಡು ಉತ್ತಮವಾದ ಜೀವನವನ್ನು ನಡೆಸಬೇಕು ಮತ್ತು ವಿಶೇಷ ಚೇತನ ಉಳ್ಳವರು ಇದ್ದರೆ ತರಬೇತಿಗಾಗಿ ಬಳ್ಳಾರಿ ಶಾಖೆಯನ್ನು ಸಂಪರ್ಕಿಸಬೇಕು ಎಂದು ತಿಳಿಸಿದರು.
ಸಮರ್ಥನಂ ಅಂಗವಿಕಲರ ಸಂಸ್ಥೆಯು 1997 ರಲ್ಲಿ ಸ್ಥಾಪಿತವಾಗಿದ್ದು ರಾಷ್ಟ್ರ ಪ್ರಶಸ್ತಿ ವಿಜೇತ ಸಂಸ್ಥೆಯಾಗಿದೆ. 2030ರ ವೇಳೆಗೆ 10 ಲಕ್ಷ ವಿಕಲಚೇತನರು ಮತ್ತು ಹಿಂದುಳಿದವರ ಜೀವನವನ್ನು ಸ್ಪರ್ಶಿಸುವ ದೃಷ್ಟಿಯನ್ನು ಹೊಂದಿರುವ ಇಂತಹ ಸಂಸ್ಥೆಯನ್ನು ಪರಿಚಯಿಸಲು ನಮಗೆ ತುಂಬಾ ಸಂತೋಷವಾಗುತ್ತಿದೆ ಎಂದರು.
ಸಮರ್ಥನ ಅಂಗವಿಕಲರ ಸಂಸ್ಥೆಯು ಗುಣಮಟ್ಟದ ಶಿಕ್ಷಣ, ವಸತಿ, ಪೌಷ್ಟಿಕ ಆಹಾರ, ವೃತ್ತಿಪರ ತರಬೇತಿ ಮತ್ತು ಉದ್ಯೋಗ ಆಧಾರಿತ ಪುನರ್ವಸತಿಯನ್ನು ಒದಗಿಸುವುದರ ಮೇಲೆ ಕೇಂದ್ರೀಕರಿಸಿದೆ ಹಾಗೂ ವಿಕಲಚೇತನರ ಮತ್ತು ಹಿಂದುಳಿದವರ ಸಬಲೀಕರಣಕ್ಕೆ ಕೆಲಸಮಾಡುತ್ತಿದೆ. ಈ ಕಾರ್ಯಕ್ರಮಯಶಸ್ವಿಯಾಗಲು ಗುರುಪ್ರಸಾದ್ ಹೆಲ್ತ್ ಕೋಆರ್ಡಿನೇಟರ್ ಸಮರ್ಥನಂ ಅಂಗವಿಕಲರ ಸಂಸ್ಥೆ ಹಾಗೂ ಸಮರ್ಥನಂ ಅಂಗವಿಕಲರ ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು ಶ್ರಮಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ