ಜ.9: ಸಮುದ್ಭವ - ದಶಮಾನೋತ್ಸವ

Chandrashekhara Kulamarva
0




ಬೆಂಗಳೂರು : ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮೀಸಲಾದ ಸಮುದ್ಭವ ಸಂಸ್ಥೆಯ 10ನೇ ವಾರ್ಷಿಕೋತ್ಸವದ ಅಂಗವಾಗಿ ಜನವರಿ 9, ಗುರುವಾರ ಸಂಜೆ 4-00 ಗಂಟೆಗೆ ನಗರದ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಗೀತ, ನೃತ್ಯ ನಾಟಕ ಮತ್ತು ಅತಿಥಿಗಳಿಗೆ ಗೌರವ ಸಮರ್ಪಣೆಯನ್ನು ಹಮ್ಮಿಕೊಂಡಿದೆ.


ಕಾರ್ಯಕ್ರಮಗಳು : ಸಂಜೆ 4-00ಕ್ಕೆ ಸಮುದ್ಭವ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ. ನಂತರ ಮುಖ್ಯ ಅತಿಥಿಗಳಾಗಿ ಆಗಮಿಸುವ ವಿದುಷಿ ವಿ. ರಾಧಾ (ಸಂಗೀತ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಸಹಾಯಕ ನಿರ್ದೇಶಕರು, ರಮಣ ಮಹರ್ಷಿ ಸೆಂಟರ್ ಫಾರ್ ಲರ್ನಿಂಗ್), ಗೌರವ ಅತಿಥಿಗಳಾಗಿ ಆಗಮಿಸುವ ವಿದ್ವಾನ್ ಅನಿಲ್ ಕುಮಾರ್ (ನೃತ್ಯ ಕಲಾವಿದರು ಹಾಗೂ ಶಿಕ್ಷಕರು) ಮತ್ತು ವಿದುಷಿ ಲತಾ ರಮೇಶ್ (ಶಿವಾನುಗ್ರಹ ಲಲಿತ ಕಲಾ ಸಂಸ್ಥೆ) ಇವರುಗಳಿಗೆ ಗೌರವ ಸಮರ್ಪಣೆ.


ನಂತರ ಸಮುದ್ಭವ ಕಲಾವಿದರಿಂದ "ಸಂಗೀತ ಸಮೃದ್ಧಿ" ನೃತ್ಯ ನಾಟಕ ಏರ್ಪಡಿಸಿದೆ ಎಂದು ಸಂಸ್ಥೆಯ ನಿರ್ದೇಶಕರೂ ಹಾಗೂ ಗುರುಗಳೂ ಆದ ವಿದುಷಿ  ಪ್ರಿಯಾ ಗಣೇಶ್ ಮತ್ತು ವಿದುಷಿ ದೀಪಾ ಮೊರಬ್ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

Post a Comment

0 Comments
Post a Comment (0)
To Top