ಮಂಗಳೂರು: ಮನುಷ್ಯನ ಸಂಸ್ಕಾರಯುಕ್ತ ಜೀವನಕ್ಕೆ ಭಾರತೀಯ ಲಲಿತಕಲೆಗಳು ಅತ್ಯಂತ ಸಹಕಾರಿ. ಸಂಸ್ಕಾರದಲ್ಲಿ ಹುಟ್ಟಿದ ವಿಚಾರಗಳ ಆಚರಣೆಯೇ ಸಂಸ್ಕೃತಿ ಮಕ್ಕಳ ಜೀವನದಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಜೀವನದಲ್ಲಿ ರೂಪಿಸಿಕೊಂಡಾಗ ಆ ಮಕ್ಕಳು ದೇಶದ ಒಂದು ಅಸ್ತಿಯಾಗಬಲ್ಲರು ಎಂದು ಶಾರದಾ ವಿದ್ಯಾ ಸಂಸ್ಥೆಯ ಅಧ್ಯಕ್ಷ ಪ್ರೊ. ಎಂ.ಬಿ ಪುರಾಣಿಕ್ ನುಡಿದರು.
ಅವರು ಶಾರದಾ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿರುವ ಬಾಲ ಮತ್ತು ಕಿಶೋರ ಯುಗಳ ನೃತ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪರಿಷತ್ ನೃತ್ಯ ಕಲೆಯ ಬೆಳವಣಿಕೆಗೆ ಹಲವಾರು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ನೃತ್ಯ ಪರಿಷತ್ ಏಕಕಾಲದಲ್ಲಿ ಜಿಲ್ಲೆಯ ಮಂಗಳೂರು ಪುತ್ತೂರು ಮತ್ತು ಉಡುಪಿ ಮೊದಲಾದ ಮೂರು ಕಡೆಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ಅಧ್ಯಕ್ಷ ವಿದ್ವಾನ್ ಯು ಕೆ ಪ್ರವೀಣ್ ಮಾಹಿತಿ ನೀಡಿದರು. ಉಪಾಧ್ಯಕ್ಷರಾದ ವಿದ್ವಾನ್ ಚಂದ್ರಶೇಖರ ನಾವಡ, ವಿದುಷಿ ರಾಜಶ್ರೀ ಉಳ್ಳಾಲ್, ಕೋಶಾಧಿಕಾರಿ ವಿದ್ವಾನ್ ಸುರೇಶ್ ಅತ್ತಾವರ್, ಸಂಘಟನಾ ಕಾರ್ಯದರ್ಶಿ ಶ್ರೀಧರ ಹೊಳ್ಳ, ಸದಸ್ಯರಾದ ವಿದುಷಿ ಶಾರದಾಮಣಿ ಶೇಖರ್, ಸುದರ್ಶನ್ ಹಾಗೂ ನಗರದ ನೃತ್ಯ ಗುರುಗಳು ಉಪಸ್ಥಿತರಿದ್ದರು. ವಿದುಷಿ ಡಾ.ಶ್ರೀವಿದ್ಯಾ ಕಾರ್ಯಕ್ರಮ ನಿರೂಪಿಸಿದರು. ಬಾಲ ಮತ್ತು ಕಿಶೋರ ನೃತ್ಯ ಕಾರ್ಯಕ್ರಮದಲ್ಲಿ 20 ಜನ ಪ್ರಬುದ್ಧ ಮಕ್ಕಳು ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ