ಪಣಜಿ: ಉತ್ತರ ಕರ್ನಾಟಕ ಭಾಗದಿಂದ ಗೋವಾಕ್ಕೆ ಕರ್ನಾಟಕ ಸಾರಿಗೆಯ ಹಲವು ಬಸ್ಸುಗಳು ಬಂದ್ ಆಗಿದ್ದು, ಈ ಬಸ್‌ಗಳ ಪುನರಾರಂಭಕ್ಕೆ ಹಲವು ಬಾರಿ ಒತ್ತಾಯಿಸಿದರೂ ಅದು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಹಲವು ಭಾಗಗಳಿಗೆ ಗೋವಾ ಕದಂಬ ಸಾರಿಗೆ ಬಸ್‌ಗಳ ಓಡಾಟ ಆರಂಭಿಸುವಂತೆ ಕದಂಬ ಮಹಾಮಂಡಳದ ನಿರ್ದೇಶಕರಿಗೆ ಮನವಿ ಮಾಡಿರುವುದಾಗಿ ಅಖಿಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರ್ ರೆಡ್ಡಿ ಮಾಹಿತಿ ನೀಡಿದರು.
ಗೋವಾ ರಾಜಧಾನಿ ಪಣಜಿಯಿಂದ ಮಾಪ್ಸಾ-ಬಿಚೋಲಿ-ಬೆಳಗಾವಿ-ಬಾಗಲಕೋಟ್, ಪಣಜಿ-ಬಿಚೋಲಿ-ಹುಬ್ಬಳ್ಳಿ, ಪಣಜಿ-ಬಿಚೋಲಿ-ವಿಜಯಪುರ ಈ ಮಾರ್ಗಕ್ಕೆ ಪ್ರಮುಖವಾಗಿ ಹೆಚ್ಚಿನ ಬಸ್ಸುಗಳ ಓಡಾಟ ಆರಂಭಿಸುವಂತೆ ಮನವಿ ಮಾಡಲಾಗಿದೆ. ಈ ಮಾರ್ಗಕ್ಕೆ ಕರ್ನಾಟಕ ಸಾರಿಗೆಯ ಹಲವು ಬಸ್ ಗಳ ಓಡಾಟ ಬಂದ್ ಆಗಿರುವುದರಿಂದ ಗೋವಾ-ಕರ್ನಾಟಕ ಭಾಗಗಳಿಗೆ ಓಡಾಟಕ್ಕೆ ಕನ್ನಡಿಗರಿಗೆ ಹೆಚ್ಚಿನ ಅನಾನುಕೂಲ ಉಂಟಾಗಿದೆ. ಇದರಿಂದಾಗಿ ಗೋವಾ ಕದಂಬ ಸಾರಿಗೆಯ ಹೆಚ್ಚಿನ ಬಸ್ಸುಗಳ ಓಡಾಟ ಆರಂಭಿಸುವಂತೆ ಮನವಿ ಮಾಡಿರುವುದಾಗಿ ಹನುಮಂತಪ್ಪ ಶಿರೂರ್ ರೆಡ್ಡಿ ನುಡಿದರು.
ಈ ಸಂದರ್ಭದಲ್ಲಿ ಕರ್ಮಭೂಮಿ ಕನ್ನಡ ಸಂಘದ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಹೊಸ್ಮನಿ, ಬಸವರಾಜ್ ಅಬ್ಬಿಗೇರಿ, ಸಂಗಪ್ಪ ಕುರಿ, ಭಗವಾನ್ ಹರಮಲ್ಕರ್ ಮತ್ತಿತರರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ