ಇನೋಳಿ ಸೋಮನಾಥೇಶ್ವರ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಕಾರ್ಯಕ್ರಮ
ಮಂಗಳೂರು: ಮಂಗಳೂರು ಸಮೀಪದ ಇನೋಳಿಯ ಪ್ರೊ. ಮುಬೀನಾ ಪರವೀನ್ ತಾಜ್ ಅವರ ಆರಾಧನಾ ತಂಡದ ವತಿಯಿಂದ ಇನೊಳಿ ಸೋಮನಾಥೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ 48 ದಿನಗಳ ಸಂಧ್ಯಾ ಭಜನೆಯಲ್ಲಿ ಸಕ್ರಿಯವಾಗಿ ಭಜನಾ ಕಾರ್ಯಕ್ರಮವನ್ನು ನಡೆಸಲಾಯಿತು.
ಪ್ರೊ ಮುಬೀನಾ ಪರವೀನ್ ತಾಜ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದ ನಂತರ ಈ ತಂಡವು ಕುಮಾರಿ ಶಮಾ ಪರವೀನ್ ತಾಜ್, ವಿದ್ಯಾ ನವೀನ್ ಕುಂಬಳೆ, ಶಿವಶಂಕರ್ ಗೇರುಕಟ್ಟೆ, ಶ್ರೀಮತಿ ಸೌಮ್ಯಾರಾವ್ ಉಜಿರೆ ಅವರನ್ನು ಒಳಗೊಂಡಂತೆ ಸುಶ್ರಾವ್ಯವಾದ ಸಂಗೀತ ಸಹಿತ ಭಜನಾ ಸಂಜೆಯನ್ನು ನಡೆಸಿಕೊಟ್ಟರು. ರವಿರಾಜ್ ಒಡಿಯೂರ್ ಅವರು ಹಾರ್ಮೋನಿಯಂನಲ್ಲಿ, ಗೌರೀಪ್ರಸಾದ್ ಗುರುವಾಯನ ಕೆರೆಯವರು ತಬ್ಲಾದಲ್ಲಿ ಸಹಕರಿಸಿದ್ದರು.
ಶ್ರೀಮತಿ ಮಮತಾ ಚಂದ್ರಹಾಸ ಪೂಂಜಾ ಹಾಗೂ ಶ್ರೀಮತಿ ಗೀತಾ ಅವರು ಭಜನಾ ತಂಡವನ್ನು ಗೌರವಿಸಿದರು.
ದೇವಸ್ಥಾನದ ಆಡಳಿತ ಮೊಕ್ತೇಸರರಾದ ಚಂದ್ರಹಾಸ ಪೂಂಜಾ, ಉಗ್ಗಪ್ಪ ಪೂಜಾರಿ ಪಾವೂರ್ ಭಂಡಾರ ಮನೆ, ಶ್ರೀಮತಿ ಮತ್ತು ಶ್ರೀ ನಾರಾಯಣ ಶೆಟ್ಟಿ ದೇವರ ಗುಡ್ಡೆ, ಗೋಪಾಲ ಶೆಟ್ಟಿ ಇನೋಳಿ ಬರ್ಲಾ, ವಾಸುದೇವ ನಾಯ್ಕ್ ಇನೋಳಿ ಕಾಡುಬೆಟ್ಟು, ಪ್ರಭಾಕರ ನಾಯ್ಕ ಕೊಪ್ಪಳ, ಶ್ರೀನಿವಾಸ ಪೂಜಾರಿ ಮಾವೂರ್, ರವಿ ರೈ ಪಜೀರ್, ರವಿಶಂಕರ್ ಶೆಟ್ಟಿ, ಕಿಲ್ಲೂರ್,ಲಕ್ಷ್ಮಣ್ ಸನಿಲ್ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ