ಉಡುಪಿ: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಉಡುಪಿ ಅಂಬಲಪಾಡಿ ಭವಾನಿ ಸಭಾಂಗಣದಲ್ಲಿ ಪುರಂದರ ದಾಸರ ಆರಾಧನಾ ಮಹೋತ್ಸವ ಸಹಿತ ಕವಿಗೋಷ್ಠಿಯನ್ನು ಏರ್ಪಡಿಸಲಾಯಿತು.
ಹಿರಿಯ ಚಿಂತಕ ವಿಶ್ವನಾಥ ಶೆಣೈ ಅಧ್ಯಕ್ಷತೆಯಲ್ಲಿ ಅಂಬಲಪಾಡಿ ಜನಾdFನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ. ನಿ.ಬಿ. ವಿಜಯ ಬಲ್ಲಾಳರು ಉದ್ಘಾಟಿಸಿ ದಾಸರ ನುಡಿಗಳು ಲೋಕಕ್ಕೇ ಆದರ್ಶ ಎಂದರು. ಮುಖ್ಯ ಅತಿಥಿಗಳಾಗಿ ನೆಂಪು ನರಸಿಂಹ ಭಟ್ಟರವರು ಮಾತನಾಡಿದರು.
ತದ ನಂತರದ ಉಪಾನ್ಯಾಸ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದ ಮಂಗಳೂರಿನ ಮಂಗಳಾ ಆಸ್ಪತ್ರೆಯ ಮೂಲವ್ಯಾಧಿ ಕ್ಷಾರ ತಜ್ಞ ಹಾಗೂ ಕಣಚೂರು ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ ಸುರೇಶ ನೆಗಳಗುಳಿಯವರು, ಪುರಂದರರು ವಿಠಲನಿಗೆ ಶರಣಾಗಿ ಪುರಂದರ ದಾಸರಾದರು. ಚುಟುಕಿನಲ್ಲಿ ಹೇಳುತ್ತಾ ಹೋದ ಅವರ ವಾಕ್ಯಗಳೇ ಲೋಕಕ್ಕೆ ಹಿತವಾದ ಸಾಹಿತ್ಯವೇ ಆಯಿತು ಎಂದರು. ಪುರಂದರ ದಾಸ ಹಾಗೂ ಚುಟುಕು ಸಾಹಿತ್ಯವನ್ನು ಬೆಸೆಯುವ ಮುಕ್ತಕ ಹಾಗೂ ಗಜಲ್ ನ್ನು ವಾಚಿಸಿದರು
ವಿದ್ವಾನ್ ರಘುಪತಿ ಭಟ್ ಸಸಿಹಿತ್ಲು ಅವರು ಪುರಂದರದಾಸರ ತತ್ವಗಳ ಬಗ್ಗೆ ಉಪನ್ಯಾಸ ಉಡುಪಿ ಅಂಬಲ್ಪಾಡಿ ದೇವಸ್ಥಾನದಲ್ಲಿ ಮಂಗಳವಾರ (ಜ.29) ಉಪನ್ಯಾಸ ನೀಡಿದರು. ಅವರನ್ನು ಮತ್ತು ಸಭಾಧ್ಯಕ್ಷ ನೆಗಳಗುಳಿ ಹಾಗೂ ಮುಖ್ಯ ಅತಿಥಿ ಕಚುಸಾಪ ಮಹಿಳಾ ಸಂಘಟಕಿ ಪುತ್ತೂರು ಶಾಂತಾರನ್ನು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಸನ್ಮಾನಿಸಿದರು.
ನಂತರ ನಡೆದ ಕಾರ್ಕಳದ ಸಾವಿತ್ರಿ ಮನೋಹರ ಅಧ್ಯಕ್ಷತೆಯ ಕವಿಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ ಜಯಾನಂದ ಪೆರಾಜೆಯವರ ಆಶಯ ನುಡಿ ಸಹಿತ ರಾಜ್ಯದ ಕವಿಗಳಾದ ಬಳ್ಳಾರಿಯ ಚೇತನ್, ಅಶ್ವಿನಿ ಕಡ್ತಲ, ದ.ಕ. ಜಿಲ್ಲಾಧ್ಯಕ್ಷ ಜಯಾನಂದ ಪೆರಾಜೆ, ಉಡುಪಿ ಜಿಲ್ಲಾಧ್ಯಕ್ಷ ಜಿ.ಯು. ನಾಯಕ, ಉಪಾಧ್ಯಕ್ಷ ರಾಜು ಎನ್ ಆಚಾರ್ಯ, ಬಳಂಜ ರವೀಂದ್ರ ಶೆಟ್ಟಿ, ಉಡುಪಿ ಸೋಮಶೇಖರ ಶೆಟ್ಟಿ ಮುಂತಾದವರು ಕವನ ವಾಚನ ಮಾಡಿದರು.
ಕೇರಳ ರಾಜ್ಯ ಅಧ್ಯಕ್ಷೆ ಡಾ. ವಾಣಿಶ್ರೀ ಕಾಸರಗೋಡು, ಕಾರ್ಯದರ್ಶಿ ಗುರುರಾಜ್ ಕಾಸರಗೋಡು ಇವರ ಗಡಿನಾಡು ಕನ್ನಡ ಸಾಂಸ್ಕೃತಿಕ ಸಂಘ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೆಳೆದವು. ಕಾರ್ಯಕ್ರಮದಲ್ಲಿ ಕಚು.ಸಾ.ಪ ಸದಸ್ಯರ ಸಹಿತ, ಶ್ರೀಮತಿ ಸಾವಿತ್ರಿ ಮೊದಲಾದವರು ಉಪಸ್ಥಿತರಿದ್ದರು. ಶ್ರೀಮತಿ ಪ್ರೇಮಾ ಬಿರಾದಾರ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ