ಯಕ್ಷಗಾನದಲ್ಲಿ ಗೀತೆಯ ಮೆರಗು: ಉಡುಪಿಯಲ್ಲಿ ಡಾ. ಪ್ರಭಾಕರ ಜೋಶಿ ಶಿಖರೋಪನ್ಯಾಸ

Upayuktha
0


ಉಡುಪಿ: ಬೃಹತ್ ಗೀತೋತ್ಸವದ ಅಂಗವಾಗಿ ಇಂದು ಯಕ್ಷಗಾನದಲ್ಲಿ ಗೀತೆಯ ಮೆರಗು ಎಂಬ ವಿಷಯದ ಕುರಿತಂತೆ ಬಹುಮುಖ ಪ್ರತಿಭೆಯ ಖ್ಯಾತ ಡಾ. ಎಂ. ಪ್ರಭಾಕರ್ ಜೋಶಿ ಯವರಿಂದ ಶಿಖರೋಪನ್ಯಾಸ ನಡೆಯಿತು.


ಯಕ್ಷಗಾನದಲ್ಲಿ ಭಗವದ್ಗೀತೆಯ ಸಾಧ್ಯತೆಗಳನ್ನು ಧರೆಗಿಳಿಸಿದ ಮಲ್ಪೆ ರಾಮದಾಸ್ ಸಾಮಗರನ್ನು ಸೇರಿದಂತೆ ಮೂರು ಮಹನೀಯರ ಸಾಧನೆಗಳನ್ನು ಅವರು ಸ್ಮರಿಸಿಕೊಂಡರು.


ಈ ವಿಶ್ವ ಗೀತಾ ಪರ್ಯಾಯದಲ್ಲಿ ಭಗವದ್ಗೀತೆಯ ವಿವಿಧ ಆಯಾಮಗಳನ್ನು ತೆರೆದಿಡಲು ಸಂಕಲ್ಪಿಸಿದ ಪೂಜ್ಯ ಪರ್ಯಾಯ ಶ್ರೀಪಾದರ ಉಜ್ವಲ ವಿಚಾರ ಧಾರೆಯನ್ನು ಶ್ಲಾಘಿಸಿ ಕಳೆದ ಪುತ್ತಿಗೆ ಶ್ರೀಗಳ ಪರ್ಯಾಯದಲ್ಲಿ ಭವ್ಯ ಗೀತಾ ಮಂದಿರವನ್ನೇ ಕಲಾ ವೇದಿಕೆಯನ್ನು ಬಳಸಿ ಭಗವದ್ಗೀತಾ ವಿಶ್ವರೂಪ ದರ್ಶನವನ್ನು ತೋರಿಸಿದ ಆ ಅದ್ಭುತವಾದ ಶ್ರೀಗಳ ಕಲ್ಪನೆಯನ್ನು ಸಾಕಾರಗೊಳಿಸಿದ ಖ್ಯಾತ ರಂಗಕರ್ಮಿ ಸಾಹಿತಿ ದಿ. ಉದ್ಯಾವರ ಮಾಧವಾಚಾರ್ಯರ ಅಪೂರ್ವ ಸಾಧನೆಯನ್ನು ರೋಮಾಂಚಿತರಾಗಿ ಸಭೆಗೆ ವಿವರಿಸಿದರು.


ಅಂತೆಯೇ ಉಡುಪಿ ಮಠಗಳಲ್ಲಿ ಪ್ರಾಚೀನ ಕಾಲದಿಂದಲೂ ನಡೆಯುತ್ತಿದ್ದ ಮೇಳಗಳ ಬಗ್ಗೆ ಪ್ರಸ್ತಾವಿಸಿ, ಇದೀಗ ಅದರ ಪುನರುತ್ಥಾನವಾಗಿ ಯಕ್ಷಗಾನದ ಮೇಲೆ ಎಲ್ಲ ಶ್ರೀಗಳು ಸೇರಿ ನೀಡುವ ಪ್ರೋತ್ಸಾಹವನ್ನೂ ನೆನೆದರು.


ಸಭೆಯ ಆದಿಯಲ್ಲಿ ಪೂಜ್ಯ ಪರ್ಯಾಯ ಶ್ರೀಪಾದರು ಜೋಷಿಯವರನ್ನು ಸನ್ಮಾನಿಸಿದರು. ಹಾಗೆಯೇ ಖ್ಯಾತ ಉದ್ಯಮಿ ಕೋಲ್ಕತ್ತಾದ ಕಲ್ವಾನಿ ದಂಪತಿಗಳನ್ನು ಅವರ ಸಾಧನೆಯನ್ನು ಗಮನಿಸಿ ಶ್ರೀಕೃಷ್ಣ ಗೀತಾನುಗ್ರಹ ಪ್ರಶಸ್ತಿಯನ್ನು ನೀಡಿ ಹರಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top