ಈಜು ಸ್ಪರ್ಧೆ: ಫಿಲೋಮಿನಾ ಪ ಪೂ ಕಾಲೇಜಿನ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ

Upayuktha
0

 



ಪುತ್ತೂರು:  ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಷನ್ ಇದರ ಆಯೋಜನೆಯಲ್ಲಿ ಡಿ5 ರಿಂದ 8ರ ವರೆಗೆ ಬೆಂಗಳೂರಿನ ಬಸವನಗುಡಿ ಅಕ್ವೆಟಿಕ್ ಸೆಂಟರ್ ನಲ್ಲಿ ನಡೆದ 23ನೇ ರಾಜ್ಯ ಶಾರ್ಟ್ ಕೋರ್ಸ್ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್' ಸ್ಪರ್ಧೆಯಲ್ಲಿ  ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಮೂರು ವಿದ್ಯಾರ್ಥಿಗಳು  ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.


ಪ್ರಥಮ ವಿಜ್ಞಾನ ವಿಭಾಗದ ಅನ್ವಿತ್ ರೈ ಬರಿಕೆ  50ಮೀ ಫ್ರೀ ಸ್ಟೈಲ್ ಮತ್ತು 4×50ಮೀ  ಫ್ರೀ ಸ್ಟೈಲ್  ರಿಲೇ ಯಲ್ಲಿ ಎರಡು ಬೆಳ್ಳಿ ಹಾಗೂ 50ಮೀ  ಫ್ಲೈ,  100ಮೀ ಫ್ರೀ ಸ್ಟೈಲ್, 25ಮೀ ಫ್ರೀ ಸ್ಟೈಲ್ ಮತ್ತು 4×50ಮೀ ಮೆಡ್ಲೆ ರಿಲೇ ಯಲ್ಲಿ 4 ಕಂಚಿನ ಪದಕವನ್ನು, ದಿಗಂತ್ ವಿ ಎಸ್ ಮತ್ತು ಅರ್ ಅಮನ್ ರಾಜ್  ಇವರು 4×50ಮೀ ಫ್ರೀ ಸ್ಟೈಲ್ ರಿಲೇ ಯಲ್ಲಿ ಒಂದು ಬೆಳ್ಳಿ ಮತ್ತು 4×50ಮೀ ಮೆಡ್ಲೆ ರಿಲೇಯಲ್ಲಿ ಒಂದು ಕಂಚಿನ ಪದಕವನ್ನು ಪಡೆದುಕೊಂಡಿರುತ್ತಾರೆ.


ಅನ್ವಿತ್ ರೈ ಬರಿಕೆ  ಮತ್ತು ಅರ್ ಅಮನ್ ರಾಜ್ ಡಿಸೆಂಬರ್ 27ರಿಂದ 29 ರವರೆಗೆ ಸಿಮ್ಮಿಂಗ್ ಫೆಡರೇಶನ್ ಆಫ್ ಇಂಡಿಯಾ ಇದರ ಆಯೋಜನೆಯಲ್ಲಿ ವಿಜಯವಾಡದಲ್ಲಿ ನಡೆಯಲಿರುವ ಸೌತ್ ಜೋನ್ ಅಕ್ವೆಟಿಕ್ ಚಾಂಪಿಯನ್ ಶಿಪ್ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.  ಇವರುಗಳಿಗೆ ಪರ್ಲಡ್ಕದ ಬಾಲವನದ ಅಕ್ವೆಟಿಕ್ ಕ್ಲಬ್ ನ ಈಜು ತರಬೇತುದಾರರಾದ ಪಾರ್ಥ ವಾರಣಾಸಿ, ನಿರೂಪ ಜಿ ಆರ್, ದೀಕ್ಷಿತ್ ರಾವ್ ಮತ್ತು ರೋಹಿತ್ ಪ್ರಕಾಶ್ ರವರು ತರಬೇತಿ ನೀಡಿರುತ್ತಾರೆ.


ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಏಲಿಯಾಸ್ ಪಿಂಟೋ ಹಾಗೂ ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top