"ಹವ್ಯಕ ಕೃಷಿ ರತ್ನ" ಪ್ರಶಸ್ತಿಗೆ ಸೌಮ್ಯ ಪೆರ್ನಾಜೆ ಆಯ್ಕೆ

Upayuktha
0

ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುವ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಪ್ರದಾನ




ಪೆರ್ನಾಜೆ: ಬೆಂಗಳೂರು ಅರಮನೆ ಮೈದಾನದಲ್ಲಿ ಡಿ. 27ರಿಂದ 29 ರವರೆಗೆ ನಡೆಯುವ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ನೀಡಲಾಗುವ "ಹವ್ಯಕ ಕೃಷಿ ರತ್ನ" ಪ್ರಶಸ್ತಿಗೆ ಸೌಮ್ಯ ಪೆರ್ನಾಜೆ  ಆಯ್ಕೆಯಾಗಿರುತ್ತಾರೆ. ಈ ಪ್ರತಿಷ್ಠಿತ ಪ್ರಶಸ್ತಿಯು ಡಿ. 27ರಂದು ವಿಶ್ವ ಹವ್ಯಕ ಸಮ್ಮೇಳನದಲ್ಲಿ ಗಣ್ಯರ ಸಮ್ಮುಖದಲ್ಲಿ ಹವ್ಯಕ ಕೃಷಿ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದೆಂದು ಸಂಚಾಲಕ ಗಣೇಶ್ ಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಪ್ರಶಸ್ತಿಗೆ ಮಹಿಳಾ ಜೇನುಗಡ್ಡಧಾರಿ, ಜೇನು ಕೃಷಿ ವಿಶಿಷ್ಟ ಬರಹಗಳ ಲೇಖಕಿ, ಕಲಾ ಪ್ರಿಯರು ಕಲಾ ಪೋಷಕರಾಗಿ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುವುದು, ಅಲ್ಲದೆ ಸುಂದರ ಕೈಬರಹ, ವೈವಿಧ್ಯಮಯ ತಿಂಡಿಗಳು, ಸ್ವಾದಿಷ್ಟ ರುಚಿಕರ ಅಡುಗೆಯ ಲೇಖಕಿಯಾಗಿರುವುದು ಇವರ ವಿಶೇಷತೆ.


ಕಲಾ ನಿರ್ದೇಶಕ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಕುಮಾರ್ ಪೆರ್ನಾಜೆಯವರ ಪತ್ನಿ. ನಂದನ್ ಕುಮಾರ್, ಚಂದನ್ ಕುಮಾರ್ ಇಬ್ಬರು ಮಕ್ಕಳು.  ಮನಸ್ಸಿನ ನೆಮ್ಮದಿಗಾಗಿ ಆಧುನಿಕ ಬದುಕಿನ ಜಂಜಾಟದಲ್ಲಿ ಅಪಾಯಕಾರಿ ಜೇನು ಗೂಡನ್ನು ನೋಡಿ ಹೇಗೆ ಬದುಕಬಹುದು ಎನ್ನುವ ಸೌಮ್ಯ ಪೆರ್ನಾಜೆ ನಮ್ಮಲ್ಲಿ ಸಹನೆ ತಾಳ್ಮೆ ಇದ್ದರೆ ಒಂದು ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸಸಲು ಸಾಧ್ಯ ಎನ್ನುತ್ತಾರೆ. ಜೇನು ಕುಟುಂಬವನ್ನು ನೋಡಿ ತಿಳಿಯುವುದು ಬಹಳಷ್ಟು ಇದೆ ಎನ್ನುವ ಇವರಿಗೆ ಈಗಾಗಲೇ ಗಡಿನಾಡ ಧ್ವನಿ, "ಮಧುಭೂಷಣ" ರಾಜ್ಯ ಪ್ರಶಸ್ತಿ, ಈಶ್ವರಮಂಗಲದಲ್ಲಿ ನಡೆದ ಗ್ರಾಮ ಗ್ರಾಮ ಸಾಹಿತ್ಯ ಸಂಭ್ರಮ ಮೂರನೇ ಸರಣಿ ಕಾರ್ಯಕ್ರಮದಲ್ಲಿ, ವಿಟ್ಲ "ಸ್ವರ ಸಿಂಚನ" ಸಂಗೀತೋತ್ಸವ 2024ರಲ್ಲೂ ಗೌರವಿಸಲಾಯಿತು. ಇವರು ಪಟಿಕ್ಕಲ್ಲು ರಾಮಚಂದ್ರ ಭಟ್ ಮತ್ತು ದೇವಕಿ ದಂಪತಿಯವರ ಪುತ್ರಿ. ಕೃಷಿ ಕ್ಷೇತ್ರದಲ್ಲಿನ ಅವರ ಸಾಧನೆಯನ್ನು ಗುರುತಿಸಿ ಶ್ರೀ ಅಖಿಲ ಹವ್ಯಕ ಮಹಾಸಭೆಯು ಹವ್ಯಕ ಕೃಷಿ ರತ್ನ ಎಂಬ ಪುರಸ್ಕಾರವನ್ನು ಪ್ರದಾನ ಮಾಡಲಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top