ಸತ್ಯಶಾಂತ ಪ್ರತಿಷ್ಠಾನದಿಂದ ಕಿರು ಕಥಾ ಸ್ಫರ್ಧೆ, ಬಹುಮಾನ ವಿತರಣೆ

Upayuktha
0




ಪುತ್ತೂರು: ಸತ್ಯ ಶಾಂತ ಶ್ರೀನಿವಾಸ ಮುರ ಬನಾರಿಯಲ್ಲಿ ಬುಧವಾರ (ಡಿ.25) ರಾಜ್ಯ ಮಟ್ಟದ ಕಿರುಕಥಾ ಸ್ಪರ್ಧಾ ಬಹುಮಾನ 

ವಿತರಣೆ, ಸಾಹಿತ್ಯ, ಸಾಂಸ್ಕೃತಿಕ, ಗಾನ ಲಹರಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು ಬಹಳ ಅದ್ದೂರಿಯಾಗಿ ನಡೆಯಿತು.


ಬೆಳಗ್ಗೆ 9 ಕ್ಕೆ ಗಿಡಕ್ಕೆ ನೀರನ್ನೆರೆಯುವ ಮೂಲಕ ಕವಿಗೋಷ್ಠಿಗೆ ಚಾಲನೆ ನೀಡಲಾಯಿತು. ಗುಣಾಜೆ ರಾಮಚಂದ್ರ ಭಟ್, ಸುರೇಶ್ ನೆಗಳಗುಳಿ ಹಾಗೂ ಗಣೇಶ ಪ್ರಸಾದ್ ಪಾಂಡೇಲು ಇವರುಗಳ ಸುದೀರ್ಘ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿಯನ್ನು ನಡೆಸಲಾಯಿತು.


ಶ್ಯಾಮ ಸುದರ್ಶನ್ ಭಟ್ ಹೊಸಮೂಲೆ ಕಾರ್ಯಕ್ರಮ ಉದ್ಘಾಟಿಸಿದರು. ಸತ್ಯ ಶಾಂತ ಪ್ರತಿಷ್ಠಾನವು ಸಾಹಿತ್ಯ ಸಾಂಸ್ಕೃತಿಕ ವಿಷಯದಲ್ಲಿ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡುತ್ತಾ ಬಂದಿದೆ. ಶಾಂತಾ ಕುಂಟಿನಿ ಇವರು ಅನೇಕರಿಗೆ ವೇದಿಕೆ ಹಾಗೂ ಅವಕಾಶ ಅದೇ ರೀತಿ ಪ್ರಶಸ್ತಿ ನೀಡುವುದರ ಮೂಲಕ ಸಾಹಿತ್ಯ ಸೇವೆಯನ್ನು ಮಾಡುತ್ತಿದ್ದಾರೆ ಎಂದು ನುಡಿದರು.


ದ.ಕ ಜಿಲ್ಲಾ ಕ.ಸಾ.ಪ ದ ಗೌರವ ಕೋಶಾಧ್ಯಕ್ಷ ಐತ್ತಪ್ಪ ನಾಯ್ಕ್ ಇವರು, ಶಾಂತಾ ಕುಂಟಿನಿ ನನ್ನ ಶಿಷ್ಯೆ. ಸತ್ಯ ಶಾಂತ ಪ್ರತಿಷ್ಠಾನ ಸಂಸ್ಥೆ ಕಟ್ಟಿ ಉತ್ತಮವಾದ ಕೆಲಸ ಕಾರ್ಯಗಳನ್ನು ಮಾಡುವುದರ ಮುಖೇನ ನನ್ನ ಶಿಷ್ಯೆಯಾಗಿ ಕೀರ್ತಿ ತಂದಿದ್ದಾಳೆ. ಎಂದು ಮನಸಾರೆ ಹರಸಿದರು.


ಕ.ಸಾ.ಪ ಪುತ್ತೂರು ತಾಲೂಕಿನ ಅಧ್ಯಕ್ಷ ಉಮೇಶ್ ನಾಯಕ್ ಇವರು ಸತ್ಯ ಶಾಂತ ಪ್ರತಿಷ್ಠಾನಕ್ಕೂ ಶಾಂತಕ್ಕನಿಗೂ, ಈ ಸಂಸ್ಥೆಯ ಮೂಲಕ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸ್ವತಂತ್ರವಾಗಿ ಕಾರ್ಯಕ್ರಮ ನಿರ್ವಹಿಸುವ ಹಕ್ಕಿದೆ ಎಂದು ನುಡಿದರು.


ನಂತರ ಹಿರಿಯ ಸಾಹಿತಿ ವಿ.ಬಿ ಅರ್ತಿಕಜೆ ಹಾಗೂ ಮಧುಪ್ರಪಂಚದ ಸಂಪಾದಕ ನಾರಾಯಣ ರೈ ಕುಕ್ಕುವಳ್ಳಿ ಇವರು ಸೇರಿ ಪ್ರಶಸ್ತಿ ಪುರಸ್ಕ್ರತ ಅನಿಲ್ ಹಾಂದಿ (ಸತ್ಯ ಶಾಂತ ಪ್ರತಿಷ್ಠಾನ ಗೌರವ ಕಲಾ ಸಾಧಕ), ಬಿ ರಾಜೀವ ಗೌಡ ಇವರಿಗೆ (ಕ್ರಿಯಾ ಶೀಲ ಸಾಧಕ), ದಿನೇಶ್ ಮಂಗಳೂರು ಇವರಿಗೆ (ಗಾನ ಮಾಂತ್ರಿಕ) ಹಾಗೂ ರವಿ ಪಾಂಬಾರು ಇವರ ಸಾಧನೆಯನ್ನು ಗುರುತಿಸಿ (ಕ್ರಿಯಾ ಶೀಲ ಸಾಧಕ) ಹಾಗೂ ಕು. ಶ್ರೇಯಾ ಕಡಬ ಬಹುಮುಖ ಪ್ರತಿಭೆಗೆ (ಕಲಾ ಸಾಧಕಿ) ಹಾಗೂ ಶ್ರೀಮತಿ ಕೃಷ್ಣವೇಣಿ ಇವರಿಗೆ ಕಲಾ ಪ್ರೇರಣಾ ಪ್ರಶಸ್ತಿ ಪ್ರದಾನ ಹಾಗೂ ಕಿರುಕಥಾ ಸ್ಪರ್ಧಾ ವಿಜೇತರಿಗೆ ಬಹುಮಾನ ಸ್ಮರಣಿಕೆ ಪ್ರಶಸ್ತಿ ಪತ್ರ ಪ್ರಥಮ 500 ರೂ. ಹಾಗೂ ದ್ವಿತೀಯ 350 ಹಾಗೂ ತೃತೀಯ 225 ರೂ ಹಾಗೂ ಕವನ ವಾಚಿಸಿದ 40 ಕವಿಗಳಿಗೆ ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಿದರು.


ಸತ್ಯಕಾಮ ಕುಂಟಿನಿ ಇವರ ಪ್ರಾರ್ಥನಾ ಶ್ಲೋಕವನ್ನು ಹಾಡಿದರು. ಮಂಗಳೂರು ಎಸ್‌ಡಿಎಂ ಲಾ ಕಾಲೇಜು ವಿದ್ಯಾರ್ಥಿ ಸತ್ಯಾತ್ಮ ಭಟ್ ಕುಂಟಿನಿ ಸ್ವಾಗತಿಸಿದರು. ಸತ್ಯ ಶಾಂತ ಪ್ರತಿಷ್ಠಾನದ ಅಧ್ಯಕ್ಷೆ ಶ್ರೀಮತಿ ಶಾಂತಾ ಕುಂಟಿನಿ ಶಕುಂತಲಾ ಇವರು ಪ್ರಸ್ತಾವನೆ ಗೈದರು. ಅಬ್ದುಲ್ ಹಮೀದ್ ಗೋಳ್ತಮಜಲು ಇವರು ನಿರೂಪಣೆಗೈದರು.


ಕೋಶಾಧ್ಯಕ್ಷ ಜಯರಾಮ ಯು ಇವರು ಪ್ರಶಸ್ತಿ ಪತ್ರ ಪ್ರಸ್ತಾವನೆಗೈದರು. ಉಪಾಧ್ಯಕ್ಷ ಉದಯ್ ಶಂಕರ್ ಇವರು ಧನ್ಯವಾದ ಸಮರ್ಪಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ಹಾಡು ಹಾಗೂ ನೃತ್ಯ ಪ್ರಸ್ತುತಿಗಳು ನೆರವೇರಿದವು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top