ಶಿವಮೊಗ್ಗ: ಸಹ್ಯಾದ್ರಿ ಉತ್ಸವ-2024ರ ಸ್ಪರ್ಧೆಗಳಲ್ಲಿ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ವಿದ್ಯಾರ್ಥಿಗಳು ಉತ್ತಮ ಪ್ರದರ್ಶನವನ್ನು ನೀಡಿದ್ದು ಹಲವು ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಹಾಗೂ ಕಾಲೇಜಿಗೆ ದ್ವಿತೀಯ ಸಮಗ್ರ ಪ್ರಶಸ್ತಿ ದೊರೆತಿದೆ.
ಕುಮಾರಿ ಪ್ರಜ್ಞಾ ದೀಪ್ತಿ ಶಾಸ್ತ್ರೀಯ ಸಂಗೀತ ಏಕವ್ಯಕ್ತಿ ಸ್ಪರ್ಧೆಯಲ್ಲಿ ಪ್ರಥಮಸ್ಥಾನ, ಪಾಶ್ಚಿಮಾತ್ಯ ಸಂಗೀತದಲ್ಲಿ ಕುಮಾರಿ ಶ್ರಾವ್ಯ ಪ್ರಥಮ ಸ್ಥಾನ, ಸ್ಪೂರ್ತಿ ಸಿದ್ದ ಭಾಷಣದಲ್ಲಿ ಪ್ರಥಮ ಸ್ಥಾನ, ಅಕ್ಷತಾ ಕಾಮತ ಭಿತ್ತಿ ಚಿತ್ರದಲ್ಲಿ ಪ್ರಥಮ ಸ್ಥಾನ, ಕುಮಾರಿ ಸಂಜನಾ ಜೇಡಿಮಣ್ಣಿನ ಆಕೃತಿ ತಯಾರಿಯಲ್ಲಿ ತೃತೀಯ ಸ್ಥಾನ ಇದರೊಂದಿಗೆ ಸಾಮೂಹಿಕ ಸ್ಪರ್ಧೆಯಲ್ಲಿ ಭಾರತೀಯ ಗುಂಪು ಗಾಯನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಹರ್ಷವರ್ಧನ ಮತ್ತು ತಂಡ ಗಳಿಸಿಕೊಂಡಿರುತ್ತಾರೆ ಮತ್ತು ಪಾಶ್ಚಿಮಾತ್ಯ ಸಮೂಹ ಗಾಯನದಲ್ಲಿ ತೃತೀಯ ಸ್ಥಾನವನ್ನು ಶ್ರಾವ್ಯ ಮತ್ತು ತಂಡವು ಗಳಿಸಿಕೊಂಡಿದೆ.
ಇದರೊಂದಿಗೆ 2024 ಸಹ್ಯಾದ್ರಿ ಉತ್ಸವದ ಸಮಗ್ರ ಪ್ರಶಸ್ತಿಯಲ್ಲಿ ದ್ವಿತೀಯ ಸ್ಥಾನ ಗಳಿಸಿ ಕಾಲೇಜಿಗೆ ಮತ್ತು ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಕಾಲೇಜಿನ ಸಾಂಸ್ಕೃತಿಕ ಸಯೋಜಕಿ ಕು. ಹನಿ ಕುರುವರಿ ಹಾಗೂ ವಿದ್ಯಾರ್ಥಿಗಳನ್ನು ಮಾನಸ ಸಂಸ್ಥೆಯ ನಿರ್ದೇಶಕಿ ಡಾ. ರಜನಿ ಎ ಪೈರವರು ಅಭಿನಂದಿಸಿದ್ದಾರೆ. ಅವರೊಂದಿಗೆ ಶೈಕ್ಷಣಿಕ ನಿರ್ದೇಶಕಿ ಡಾ.ಪ್ರೀತಿ ಶಾನಭಾಗ, ಡಾ. ವಾಮನ್ ಶಾನಭಾಗ, ಡಾ ರಾಜೇಂದ್ರ ಚೆನ್ನಿ, ಡಾ.ರಾಮಚಂದ್ರ ಬಾಳಿಗ, ಪ್ರಾಂಶುಪಾಲೆ ಡಾ.ಸಂಧ್ಯಾ ಕಾವೇರಿ ಕೆ ಹಾಗೂ ಕಾಲೇಜಿನ ಸಿಬ್ಬಂದಿಗಳೆಲ್ಲರೂ ವಿದ್ಯಾರ್ಥಿಗಳಿಗೆ ಶುಭಾಶಯವನ್ನು ಕೋರಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ