ಸವಿ ರುಚಿ: ಅತಿರಸ- ಅತ್ರಾಸ ಕಜ್ಜಾಯ

Upayuktha
0


ನೆಯಲ್ಲಿ ಚಿಕ್ಕ ಚಿಕ್ಕ ವಿಷಯಗಳು ಸಂತೋಷವನ್ನು ನೀಡುತ್ತವೆ. ಆಹಾರದ ಬಗ್ಗೆ ಸ್ವಲ್ಪ ಹೊಗಳಿಕೆ ಸಿಕ್ಕಿದರಂತೂ ಬಹಳ ಖುಷಿ ಪಡುವ ನಮ್ಮವರು.  ಅವರ ಜೊತೆ ಸ್ವಲ್ಪ ಹೆಜ್ಜೆ ಹಾಕಿದರಂತೂ ಸ್ವರ್ಗಕ್ಕೆ ಹೋಗಿ ಬಂದ ಅನುಭವ ಬೇರೆ. ತಿನ್ನೋದರಲ್ಲಿ ಬಾಯಿಯ ಕಂಟ್ರೋಲ್ ಯಾಕೆ? ಇಂತಹ ಸಾತ್ವಿಕ ಆಹಾರ ಸವಿ ಸವಿ ರುಚಿಯ ದಿಢೀರಾಗಿ ತಯಾರಿಸಬಹುದಾದ ಅತಿರಸ.


ಬಾಯಿಯಲ್ಲಿ ನೀರೂರಿಸುವ, ಜನ ಸವಿಯಲು ಅತ್ಯಂತ ರುಚಿಕರವಾದ ತಿಂಡಿ ಇದು. ಬಾಯಿ ಚಪ್ಪರಿಸಿ ಸವಿಯೋದಕ್ಕೆ ಬೆಸ್ಟ್ ಫುಡ್; ಸವಿದು ಮೆಚ್ಚಿಗೆ ಸೂಚಿಸಿದ ಜನ ನಾವು. ಈಗ ರೆಡಿ ಟು ಈಟ್ ಬಿಸಿ ಬಿಸಿ.


ಖಾದ್ಯ ಹಬ್ಬದ ಅಡುಗೆಯಲ್ಲಿ ಈ ವಿಶೇಷವಾದ ಅತಿರಸವನ್ನು ಮಾಡುವುದು ಹೇಗೆ ಎಂದು ನೋಡೋಣ.


ಬೇಕಾಗುವ ಪದಾರ್ಥಗಳು:

ಒಂದು ಕಪ್‌ ಬೆಳ್ತಿಗೆ ಅಕ್ಕಿ ಹಾಕಿ, ಒಂದು ಕಪ್ ಬೆಲ್ಲ, ಕಾಲು ಕಪ್ ತೆಂಗಿನಕಾಯಿ ತು,ರಿ ಒಂದು ದೊಡ್ಡ ಚಮಚ ಗೋಧಿ ಹಿಟ್ಟು, ಕರಿಯಲು ಬೇಕಾದಷ್ಟು ತುಪ್ಪ.


ಮಾಡುವ ವಿಧಾನ:

ಅಕ್ಕಿಯನ್ನು ತೊಳೆದು ಸ್ವಲ್ಪ ಆರಲು ಬಿಡಿ ಎರಡು ಮೂರು ಗಂಟೆ ನಂತರ ಅಕ್ಕಿಯನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿ ನುಣ್ಣಗೆ ಹಿಟ್ಟು ಮಾಡಿಕೊಳ್ಳಿ. ನಂತರ ಬೆಲ್ಲಕ್ಕೆ ಸ್ವಲ್ಪ ನೀರು ಹಾಕಿ ಕುದಿಯಲು ಬಿಡಿ. ಬೆಲ್ಲ ಕರಗಿದ ಮೇಲೆ ಅದನ್ನು ಸೋಸಿ ಪಾಕ ಮಾಡಲು ಇಡಿ. ಅದಕ್ಕೆ ತೆಂಗಿನಕಾಯಿ ತುರಿಯನ್ನು ಹಾಕಿ ಚೆನ್ನಾಗಿ ಕುದಿಸಿ, ಗೋಧಿಹಿಟ್ಟು ಎರಡು ಚಮಚ ತುಪ್ಪ ಹಾಕಿ ಚೆನ್ನಾಗಿ ಕಲಸಿ. ಬಾಣಲೆಯಲ್ಲಿ ತುಪ್ಪ ಕಾಯಲಿಕ್ಕೆ ಇಟ್ಟು ಕೈಗೆ ಸ್ವಲ್ಪ ಬಾಳೆ ಎಲೆಗೂ ತುಪ್ಪ ಹಚ್ಚಿ, ಸ್ವಲ್ಪವೇ ಹಿಟ್ಟು ತಗೊಂಡು ಬಾಳೆ ಎಲೆಯಲ್ಲಿ ತಟ್ಟಿ ತುಪ್ಪದಲ್ಲಿ ಕರೆಯಿರಿ. ಉರಿ ಸಣ್ಣಗೆ ಮಾಡಿಕೊಳ್ಳಿ. ಇದು ಉಬ್ಬಿದಾಗ ಮಗುಚಿ ಹಾಕಿ ಸ್ವಲ್ಪ ಬೇಯಿಸಿ.


ಗೋಲ್ಡನ್ ಕಲರ್ ಬಂದರೆ ಸಾಕು ಕೂಡಲೇ ತಿನ್ನಲು ಗರಿಗರಿಯಾಗಿರುತ್ತದೆ. ಮಡಕೆಯಲ್ಲಿ ಹಾಕಿ ಎರಡು ದಿನ ಬಿಟ್ಟು ತಿಂದರೆ ತುಂಬಾನೇ ರುಚಿಕರವಾಗಿರುತ್ತದೆ. ಹಬ್ಬ ಹರಿದಿನಗಳಲ್ಲಿ ನವರಾತ್ರಿ ಹಬ್ಬಕ್ಕೆ ಈ ಸವಿ ತಿಂಡಿಯನ್ನು ಮಾಡುತ್ತಾರೆ.


ಕೆಲವೊಮ್ಮೆ ಪಾಕ ಸರಿಯಾಗದಿದ್ದರೆ ಎಣ್ಣೆಗೆ ಹಾಕುವಾಗ ಒಡೆಯುತ್ತದೆ. ಪಟಪಟ ಶಬ್ದ ಬಂದು ಎಣ್ಣೆ ಸಿಡಿಯುತ್ತದೆ.


ಮಡಕೆಯಲ್ಲಿ ಹಾಕಿ ಇಟ್ಟರೆ ತಿನ್ನಲು ತುಂಬಾನೇ ರುಚಿ ಕರವಾಗಿರುತ್ತದೆ. ಪ್ರತಿದಿನ ಮನೆಯಲ್ಲಿ ರುಚಿಕರ ಆಹಾರ ಸೇವಿಸುವುದೇ ಒಂದು ರೀತಿಯ ಮಜಾ. ಅದರಲ್ಲೂ ರುಚಿಗೆ ತಿನ್ನಲು ರುಚಿಯಾದ ಕಜ್ಜಾಯ ಫೆಂಟಾಸ್ಟಿಕ್ ವಂಡರ್ಫುಲ್ ಆರೋಗ್ಯಕರ ಫುಡ್, ನಾವು ತಿನ್ನುವ ಆಹಾರ ಕೇವಲ ಹೊಟ್ಟೆಯನ್ನು ತುಂಬಿಸುವುದಕ್ಕೆ ಮಾತ್ರವಲ್ಲದೆ ನಾಲಗೆಗೆ ರುಚಿಯಾದ ಮತ್ತು ದೇಹಕ್ಕೆ ಹಿತ ಹಿತವಾದ ವೈವಿಧ್ಯಮಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಯಾರಿಗಾದರೂ ಇಷ್ಟವಾಗಲಿ ಎಂದು ಮನೆಯವರು ಮಾಡುವುದಲ್ಲ, ತಮ್ಮ ಮನ ಸಂತೋಷಕ್ಕಾಗಿ ಮಾಡುತ್ತಾರೆ, ಇದನ್ನು ತಿಂದವರು ಖಂಡಿತ ಇಷ್ಟಪಡುತ್ತಾರೆ.




- ಸೌಮ್ಯ ಪೆರ್ನಾಜೆ

ಪೆರ್ನಾಜೆ ಮನೆ

ಪೆರ್ನಾಜೆ ಅಂಚೆ ಪುತ್ತೂರು ತಾಲೂಕು ದ.ಕ 574223.

ಮೊ: 9480240643


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top