ಸುಮಧುರ ಶಾರೀರದ ಅನುಭವಿ ಭಾಗವತ

Upayuktha
0





ಡುಪಿ ಜಿಲ್ಲೆಯ ಗೋಪಾಡಿ ದಿ.ಕೂಸ ಸುವರ್ಣ ಹಾಗೂ ಗುಲಾಬಿ ದಂಪತಿಯರ ಸುಪುತ್ರನಾಗಿ 18.10.1971 ರಂದು ಉಮೇಶ ಸುವರ್ಣ ಗೋಪಾಡಿ ಅವರ ಜನನ. ಮನೆಯವರು ಎಲ್ಲರೂ ಯಕ್ಷಗಾನ ಕಲಾಸಕ್ತರೇ, ಕಾಳಿಂಗ ನಾವಡರ ಭಾಗವತಿಕೆಯ ಧ್ವನಿ ಸುರುಳಿಯ ಪ್ರಭಾವದಿಂದದಲೂ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು.


ಯಕ್ಷಗಾನದ ಗುರುಗಳು:-

ಯಕ್ಷಗಾನದ ಹೆಜ್ಜೆ ತಾಳಗಳ ಅಭ್ಯಾಸ ದಿವಂಗತ ಐರೋಡಿ ರಾಮ ಗಾಣಿಗರಿಂದ,

ಭಾಗವತಿಕೆಯ ಅಭ್ಯಾಸ ಶ್ರೀ ಕೆ.ಪಿ. ಹೆಗಡೆ ಗೋಳಗೋಡು (ಹಂಗಾರಕಟ್ಟೆ ಯಕ್ಷಗಾನ ಕೇಂದ್ರ).


ಶ್ರೀ ಬ್ರಹ್ಮಲಿಂಗೇಶ್ವರ ದಶಾವತಾರ ಯಕ್ಷಗಾನ ಮೇಳ ಮಾರಣಕಟ್ಟೆ (28 ವರ್ಷಗಳು)

ಶ್ರೀ ಚೌಡಮ್ಮ ದೇವಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಸಿಗಂದೂರು (3 ವರ್ಷಗಳು) ಮೇಳದಲ್ಲಿ ತಿರುಗಾಟ ಮಾಡಿ ಯಕ್ಷ ರಂಗದಲ್ಲಿ ಒಟ್ಟು 32 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.


ನೆಚ್ಚಿನ ಪ್ರಸಂಗಗಳು:-

ಭೀಷ್ಮ ವಿಜಯ, ಭೀಷ್ಮ ಪರ್ವ, ಕರ್ಣಾರ್ಜುನ, ಕೃಷ್ಣಾರ್ಜುನ, ದಮಯಂತಿ ಪುನರ್ ಸ್ವಯಂವರ, ಗದಾ ಪರ್ವ, ರಾಮಾಶ್ವಮೇಧ, ಪಾಂಡವಾಶ್ವಮೇಧ.


ನೆಚ್ಚಿನ ಭಾಗವತರು:-

ದಿವಂಗತ ಕಾಳಿಂಗ ನಾವಡರು, ಸುಬ್ರಹ್ಮಣ್ಯ ಧಾರೇಶ್ವರ, ಮರಿಯಪ್ಪ ಆಚಾರ್ಯರು, ಮರವಂತೆ ನರಸಿಂಹ ದಾಸರು, ವಿದ್ವಾನ್ ಗಣಪತಿ ಭಟ್, ಕೆ. ಪಿ ಹೆಗಡೆ ಗೋಳಗೋಡು.


ನೆಚ್ಚಿನ ರಾಗಗಳು:-

ನಾಟಿ, ಮೋಹನ, ಕಲ್ಯಾಣಿ, ಹಿಂದೋಳ, ಕೇದಾರಗೌಳ, ಸಾವೇರಿ.


ನೆಚ್ಚಿನ ಚೆಂಡೆ ಹಾಗೂ ಮದ್ದಳೆ ವಾದಕರು:-

ಹಳ್ಳಾಡಿ ಜನಾರ್ದನ ಆಚಾರ್ಯ, ಗಜಾನನ ಭಂಡಾರಿ, ಬಾಲಕೃಷ್ಣ ಗಾಣಿಗ, ರಾಮದಾಸ ಮರವಂತೆ.


 ಕಲಿತ ಕೇಂದ್ರದ ಶೈಲಿಗೂ ಪ್ರಸ್ತುತ ಈಗ ಕಾರ್ಯ ನಿರ್ವಹಿಸುವ ಕೇಂದ್ರಕ್ಕೂ ಇರುವ ಭಾಗವತಿಕೆ ಶೈಲಿಗೂ ಶೈಕ್ಷಣಿಕವಾಗಿ ಯಾವ ಯಾವ ವ್ಯತ್ಯಾಸ ಇದೆ ಹಾಗೂ ಯಾವ ರೀತಿಯಲ್ಲಿ ನಿಭಾಯಿಸುತ್ತಿದ್ದರು:-

ಅವರು ಕಲಿತ ಕೇಂದ್ರದ ಶೈಲಿಗೂ ಈಗ  ಕೆಲಸ ಮಾಡುತ್ತಿರುವ ಕೇಂದ್ರದ ಶೈಲಿಗೂ ಬಹಳ ವ್ಯತ್ಯಾಸವೇನು ಇರುವುದಿಲ್ಲ. ಸಣ್ಣ ಪುಟ್ಟ ಬದಲಾವಣೆಗಳಿರಬಹುದು. ಅದು ದೊಡ್ಡ ವಿಷಯವೇನಲ್ಲ. ಯಾಕೆಂದರೆ ಆಸಕ್ತರಿಗೆ ಯಕ್ಷಗಾನವೇ ಮುಖ್ಯ ವಿನಃ ಕೇಂದ್ರ ಅಲ್ಲ ಎನ್ನುವುದು ಅವರ ಭಾವನೆ.


ಗೊಂಬೆ ಆಟದಲ್ಲಿ ಮಾಡಿದ ಭಾಗವತಿಕೆಯ ಅನುಭವ:-

ಸುಮಾರು 20 ವರ್ಷಗಳಿಂದಲೂ ಉಪ್ಪಿನಕುದ್ರು ಯಕ್ಷಗಾನ ಮಂಡಳಿಯ ಭಾಗವತಿಕೆಯಲ್ಲಿ  ತೊಡಗಿಸಿಕೊಂಡಿದಾರೆ. ಆ ಕಾರಣದಿಂದ ರಾಜ್ಯದಿಂದ ಹೊರತಾಗಿ ಹೊರ ರಾಜ್ಯ ಹೊರ ರಾಷ್ಟ್ರಗಳನ್ನು ( ಜಪಾನ್, ರಷ್ಯಾ, ಬೆಲ್ಜಿಯಂ, ಹಾಂಕಾಂಗ್, ಫ್ರಾನ್ಸ್ ಮುಂತಾದವು) ಕಾಣುವ ಅವಕಾಶ ದೊರೆತಂತಾಗಿದೆ. .


ಜೋಡಾಟದಲ್ಲಿ  ಭಾಗವತಿಕೆಯ ಅನುಭವ:-

ಜೋಡಾಟ ಎಂದರೆ ಸುಮಾರು ಹದಿನೈದು ವರ್ಷಗಳ ಹಿಂದೆ ಅದು ಆಟವೋ ಕಾಳಗವೋ ಯುದ್ಧವೋ ಎನ್ನುವ ರೀತಿಯಲ್ಲಿ ಸದ್ದು ಮಾಡುತ್ತಿತ್ತು. ಆ ಕಾಲದಲ್ಲೂ ತುಂಬಾ ಖುಷಿಪಟ್ಟಿದ್ದೆ. ಏಕೆಂದರೆ ಜೋಡಾಟಕ್ಕೆ ಭಾಗವತಿಕೆ ಮಾಡುವುದೆಂದರೆ ಬರೆ ಸ್ವರವಿದ್ದರೆ ಸಾಲದು, ಜೊತೆಗೆ ಮೇಳದ ಯಶಸ್ವಿಗೆ ಬೇಕಾಗಿ ಸೂಕ್ಷ್ಮ ವಿಚಾರಗಳನ್ನು ಗಮನಿಸಬೇಕಾದ ಹೊಣೆಗಾರಿಕೆ ಭಾಗವತನದ್ದಾಗಿರುತ್ತದೆ. 


ಮಾರಣಕಟ್ಟೆ ಕ್ಷೇತ್ರ ಮಹಾತ್ಮೆಯಲ್ಲಿ ಭಾಗವತಿಕೆಯನ್ನು ಜನರು ಯಾವ ರೀತಿಯಲ್ಲಿ ಸ್ವೀಕರಿಸಿದ್ದರು:-

ಮಾರಣಕಟ್ಟೆ ಕ್ಷೇತ್ರ ಮಹಾತ್ಮೆ ಅಥವಾ ಯಾವುದೇ ಪೌರಾಣಿಕ ಪ್ರಸಂಗಗಳಿದ್ದರೂ ಆ ಕಾಲಕ್ಕೆ ಇದ್ದ ಕೂಟ ಉತ್ತಮವಾಗಿತ್ತು. ಜನ ತುಂಬಾ ಮೆಚ್ಚಿಕೊಳ್ಳುತ್ತಿದ್ದರು. ಉತ್ತಮ ಹೊಂದಾಣಿಕೆ ಇತ್ತು ಎನ್ನಬಹುದು.


ಯಕ್ಷಗಾನದ ಇಂದಿನ ಸ್ಥಿತಿಗತಿ ಹಾಗೂ ಇಂದಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-

ಒಂದಷ್ಟು ಜನ ಆಗಾಗ ಆಡಿಕೊಳ್ಳುವುದು ಇತ್ತು, ಮಾಧ್ಯಮಗಳಿಂದ ಬೇರೆ ಬೇರೆ ಕಾರ್ಯಕ್ರಮಗಳಿಂದ ಈಗಿನ ವ್ಯವಸ್ಥೆಗಳಿಂದ ಯಕ್ಷಗಾನವೇ ಹೋಯಿತು ಎಂಬುದಾಗಿ. ಆದರೆ ಹಾಗಾಗಿಲ್ಲ. ಆಗುವುದು ಇಲ್ಲ. ಯಕ್ಷಗಾನ ಕಲೆ ಮೊದಲಿಗಿಂತಲೂ ಹೆಚ್ಚು ಜನರಿಗೆ ಆಕರ್ಷಿತವಾಗಿಯೇ ಸಾಗುತ್ತಿದೆ. ಕಾಲಾನುಗುಣವಾಗಿ ಸಾಗಬೇಕಾಗಿರುವುದು ನಿಜ. ಆದರೆ ಮಾಡುವುದು ಕಾಣುವುದು ಕೇಳುವುದು ಯಕ್ಷಗಾನವೆಂಬ ಅರಿವು ಕಲಾವಿದನಿಗೂ ಇರಬೇಕು  ಈ ನಿಟ್ಟಿನಲ್ಲಿ ಹರಕೆ ಆಟ ಆಡುವ ಮೇಳಗಳ ದೇವಸ್ಥಾನದವರು ಹೆಚ್ಚಿನ ಕಾಳಜಿ ವಹಿಸಬೇಕು.


ಯಕ್ಷಗಾನದ ಅಧ್ಯಯನ ಮತ್ತು ಅಧ್ಯಾಪನ ಇನ್ನು ಮಾಡಬೇಕು ಅದುವೇ ಮುಂದಿನ ಯೋಜನೆ ಎಂದು ಹೇಳುತ್ತಾರೆ ಉಮೇಶ ಸುವರ್ಣ ಗೋಪಾಡಿ.


ಸನ್ಮಾನ ಹಾಗೂ ಪ್ರಶಸ್ತಿಗಳು:-

♦️ 1996 ರಲ್ಲಿ ಗೋರ್ಪಾಡಿ ಫಿಶರಿಸ್ ಸ್ಕೂಲ್ ನಲ್ಲಿ ಸನ್ಮಾನ, ಅಭಿನಂದನಾ ಪತ್ರ ಸಮರ್ಪಣೆ.

♦️ 2000 ರಲ್ಲಿ ಯಕ್ಷಗಾನ ಬಳಗ ರವೀಂದ್ರ ಕಲಾಕ್ಷೇತ್ರ ಬೆಂಗಳೂರು ಇಲ್ಲಿ ಸನ್ಮಾನ.

♦️ 2002 ರಲ್ಲಿ ಬಂಟರ ಕಲೋತ್ಸವ ಮಂಗಳೂರು ಇಲ್ಲಿ ಸನ್ಮಾನ.

♦️ 2004 ರಲ್ಲಿ ಶಿರಿಯಾರ ಮಂಜು ನಾಯ್ಕ ಸಂಸ್ಕರಣಾ ಸಮಿತಿ ವತಿಯಿಂದ ಸನ್ಮಾನ.

♦️ ಮೊಗವೀರ ಕಲಾವಿದರ ಸಮಾವೇಶ ಉಡುಪಿ ಶ್ಯಾಮಿಲಿ ಸಭಾಂಗಣದಲ್ಲಿ ಸನ್ಮಾನ

♦️ ಮೊಗವೀರ ಯಕ್ಷೋತ್ಸವ ಕುಂದಾಪುರ ಇಲ್ಲಿ ಸನ್ಮಾನ.

♦️ 2007 ರಲ್ಲಿ ಕರ್ನಾಟಕ ಕರಾವಳಿ ಮೈತ್ರಿ ಸಂಘ ಹೈದರಾಬಾದ್ ಇವರಿಂದ ಪ್ರಶಸ್ತಿ.

♦️ 2009 ರಲ್ಲಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ನಿಂದ ಸನ್ಮಾನ.

♦️ 2011 ರಲ್ಲಿ ಚಿತ್ತೂರಲ್ಲಿ ಪೆರ್ಡೂರು - ನೀಲಾವರ ಮೇಳದ ಜೋಡಾಟದಲ್ಲಿ ಸನ್ಮಾನ.

♦️ 2015 ರಲ್ಲಿ ಗೋರ್ಪಾಡಿ ಫ್ರೆಂಡ್ಸ್ ನಿಂದ ಹುಟ್ಟೂರ ಸನ್ಮಾನ.

♦️ 2018 ರಲ್ಲಿ ಬೆಂಗಳೂರು ಯಕ್ಷಮಿತ್ರ ಬಳಗದಿಂದ 'ಕರಾವಳಿ ರತ್ನ ಪ್ರಶಸ್ತಿ'.

♦️ 2018 ರಲ್ಲಿ ಕುಂಡೇಲು ಲಕ್ಷ್ಮೀಂದ್ರನಗರ ಮಣಿಪಾಲ ಇವರಿಂದ ಗಾನ ಸಾಮ್ರಾಟ ಪ್ರಶಸ್ತಿ

♦️ 2022 ರಲ್ಲಿ ಶ್ರೀ ಸಿಗಂದೂರು ಮೇಳ ಮತ್ತು ಶ್ರೀ ಶನೇಶ್ವರ ಮೇಳ ಆಜ್ರಿ ಮೇಳಗಳ ಕೂಡಾಟ ಇಲ್ಲಿ ನೀಡಿದ ಸನ್ಮಾನ ಪತ್ರ.

♦️ 2023 ರಲ್ಲಿ ಮಿತ್ರ ಸಂಗಮ (ರಿ.) ಬೀಜಾಡಿ - ಗೋಪಾಡಿಯ 'ರಜತಪಥ' ಸಂಭ್ರಮ ದಲ್ಲಿ ಹುಟ್ಟೂರ ಸನ್ಮಾನ.

♦️ 2024 ರಲ್ಲಿ ರಂಗಸ್ಥಳ ಸಾಂಸ್ಕೃತಿಕ ಸೇವಾ ಮತ್ತು ಸಂಶೋಧನಾ ಟ್ರಸ್ಟ್ (ರಿ.) ಉಡುಪಿ ಗೌರವಿಸಿ ನೀಡಿದ ಎಂ.ಎಂ. ಹೆಗ್ಡೆ ಸಂಸ್ಮರಣಾ ಪ್ರಶಸ್ತಿ.


ತಿಟ್ಟು ಮಟ್ಟುಗಳ ಪರಿಭೇದವಿಲ್ಲದೆ ಎಲ್ಲಾ ರೀತಿಯ ಯಕ್ಷಗಾನ ಕಾರ್ಯಕ್ರಮಗಳನ್ನು ನೋಡುವುದು, ಬೇಕಾಗಿರುವುದನ್ನು ಸ್ವೀಕರಿಸುವುದು ಇವರ ಹವ್ಯಾಸಗಳು.


09.04.2000ರಂದು ಉಮೇಶ ಸುವರ್ಣ ಗೋಪಾಡಿ ಅವರು ರೇವತಿ ಅವರನ್ನು ಮದುವೆಯಾಗಿ ಮಕ್ಕಳಾದ ಮಗಳು ನಾದಶ್ರೀ, ಮಗ ಮೋದನ ಜೊತೆಗೆ ಸುಖಿ ಸಂಸಾರ ನಡೆಸುತ್ತಿದ್ದಾರೆ.


ತಂದೆ, ತಾಯಿ ಪತ್ನಿಯ ಪ್ರೋತ್ಸಾಹ, ಗುರು-ಹಿರಿಯ ಕಲಾವಿದರ ಮಾರ್ಗದರ್ಶನ ಸಹಕಾರ ಹಾಗೂ ಪ್ರೋತ್ಸಾಹವು ನನ್ನನ್ನು ಈ ಕ್ಷೇತ್ರದಲ್ಲಿ ಸತತವಾಗಿ ತೊಡಗಿಸಿಕೊಳ್ಳಲು ನೆರವಾಗಿದೆ ಎಂದು ಹೇಳುತ್ತಾರೆ ಉಮೇಶ ಸುವರ್ಣ ಗೋಪಾಡಿ.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


- ಶ್ರವಣ್ ಕಾರಂತ್ ಕೆ



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top