ಶತದಿನೋತ್ಸವದತ್ತ 'ಪಯಣ್‌' ಕೊಂಕಣಿ ಸಿನೆಮಾ

Upayuktha
0


ಮಂಗಳೂರು: ಬಿಡುಗಡೆಗೊಂಡ ದಿನದಿಂದಲೇ ಜನಮನ ಗೆದ್ದ, ಸಂಗೀತ್‌ ಘರ್‌' ಬ್ಯಾನರ್‌ನಡಿಯಲ್ಲಿ ಯೊಡ್ಲಿಂಗ್‌ ಕಿಂಗ್‌ ಮೆಲ್ವಿನ್‌ ಪೆರಿಸ್‌ ಮತ್ತು ನೀಟ ಪೆರಿಸ್‌ ನಿರ್ಮಿಸಿರುವ "ಪಯಣ್‌' ಕೊಂಕಣಿ ಚಲನಚಿತ್ರವು ನೂರನೇ ದಿನದತ್ತ ದಾಪುಗಾಲು ಹಾಕುತ್ತಿದೆ. ಸೀಮಿತ ಮಾರುಕಟ್ಟೆಯಿಂದಾಗಿ ಕೊಂಕಣಿಯಲ್ಲಿ ಸಿನಿಮಾ ತಯಾರಿಸುವುದು ಮತ್ತು ಚದುರಿ ಹೋಗಿರುವ ಕೊಂಕಣಿ ಜನರಿಗೆ ಅದನ್ನು ತಲುಪಿಸುವುದು ಬಲುದೊಡ್ಡ ಪ್ರಯಾಸದ ಕೆಲಸ. ಆದರೆ "ಪಯಣ್‌' ಸಿನಿಮಾ ತಂಡವು 'ಪಯಣ್‌' ಸಿನಿಮಾ ನೂರು ದಿನಗಳ ಪ್ರದರ್ಶನವನ್ನು ಕಾಣುವಂತೆ ನಿರಂತರ ಶ್ರಮವಹಿಸಿ ದುಡಿದಿದೆ. ಕೋಟ್ಯಾಂತರ ಬಜೆಟಿನ ಚಿತ್ರಗಳು ಸೋಲುತ್ತಿರುವಾಗ, ಸೀಮಿತ ಮಾರುಕಟ್ಟೆಯಿರುವ ಕೊಂಕಣಿ ಸಮಾಜದ ಸಿನಿಮಾವೊಂದು ನೂರು ದಿನಗಳ ಪ್ರದರ್ಶನವನ್ನು ಕಾಣುವುದು ನಿಜಕ್ಕೂ ದಾಖಲೆಯೇ ಸರಿ. ಕಳೆದ ವರ್ಷ ತೆರೆಕಂಡ "ಅಸ್ಮಿತಾಯ್‌' ಕೊಂಕಣಿ ಚಲನಚಿತ್ರದ ಬಳಿಕ ನೂರು ದಿನಗಳ ಪ್ರದರ್ಶನ ಕಂಡ ದ್ವಿತೀಯ ಚಿತ್ರವಾಗಿ 'ಪಯಣ್‌' ಇತಿಹಾಸ ಸೃಷ್ಠಿಸಿದೆ.


"ಪಯಣ್‌' ಜೀವನದ ನಿಜವಾದ ಸಾಮರಸ್ಯಕ್ಕೆ ಸಂಗೀತ ಕಲೆಯ ನಿಪುಣತೆಗಿಂತಲೂ ಹೆಚ್ಚಿನದ್ದು ಬೇಕು ಎಂಬುದನ್ನು ಅನುಭವಿಸಿ ಜೀರ್ಣಿಸಿಕೊಳ್ಳುವ ಸಂಗೀತಗಾರನ ಜೀವನಗಾಥೆ. ನಾಯಕ ಸಂಗೀತ ಉದ್ಯಮದ ಸವಾಲುಗಳನ್ನು ಎದುರಿಸಿ ಮುನ್ನಡೆಯುವಾಗ - ವೈಯಕ್ತಿಕ ಪೈಶಾಚಿಕತೆಯನ್ನು ಎದುರಿಸುವುದರೊಂದಿಗೆ ವಂಚನೆ ಮತ್ತು ಕಸುಬಿನ ಅನಿರೀಕ್ಷಿತ ಜಾಲಗಳನ್ನು ಎದುರಿಸುತ್ತಾನೆ. ಸಂಗೀತ ಕ್ಷೇತ್ರದಲ್ಲಿ ಪಡಿಯಚ್ಚನ್ನು ಒತ್ತಿ, ತನ್ನ ಹಿಂದೆ ಪರಂಪರೆಯೊಂದನ್ನು ಬಿಟ್ಟು ಹೋಗುವ ಬಯಕೆಯಿಂದ ಪ್ರೇರೇಪಿಸಲ್ಪಟ್ಟ ಅವ ತನ್ನ ಸಂಗೀತ ಜೀವನದಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ಕೇಂದ್ರಬಿಂದುವಾಗಿಸಿದ ಕಥೆಯೇ ಪಯಣ್‌.


ಶತದಿನೋತ್ಸವ ಸಂಭ್ರಮವು ಡಿಸೆಂಬರ್‌ 29ರಂದು ಸಂಜೆ 4.00 ಗಂಟೆಗೆ ಸರಿಯಾಗಿ ಬಿಜೈನಲ್ಲಿರುವ ಭಾರತ್‌ ಸಿನೆಮಾದಲ್ಲಿ ನಡೆಯಲಿದೆ. ಈ ಸಮಾರಂಭಕ್ಕೆ ವಿಧಾನ ಪರಿಷತ್‌ ಶಾಸಕ ಐವನ್‌ ಡಿಸೋಜಾರವರು ಮುಖ್ಯ ಅಥಿತಿಯಾಗಿ ಆಗಮಿಸಲಿರುವರು. ಸಂತ ಅಲೋಶಿಯಸ್‌ ಸಮೂಹ ವಿದ್ಯಾ ಸಂಸ್ಥೆಗಳ ರೆಕ್ಟರ್‌ ವಂ| ಮೆಲ್ವಿನ್‌ ಜೋಸೆಫ್‌ ಪಿಂಟೊ ಮತ್ತು ಅನಿವಾಸಿ ಉಧ್ಯಮಿ  ಜೇಮ್ಸ್‌ ಡಿ'ಸೋಜಾ ದುಬಾಯ್‌ ಇವರುಗಳು ಗೌರವ ಅಥಿತಿಗಳಾಗಿರುವರು. 


ಪಯಣ್‌ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ನಿರ್ದೇಶಕ ಜೊಯೆಲ್‌ ಪಿರೇರಾ ಬರೆದಿದ್ದು, ರೋಶನ್‌ ಡಿ'ಸೋಜಾ ಆಂಜೆಲೊರ್‌ ಸಂಗೀತ ನಿರ್ದೇಶನ ನೀಡಿದ್ದಾರೆ. ಪುತ್ತೂರಿನ ಯುವ ಪ್ರತಿಭೆ ಬ್ರಾಯನ್‌ ಸಿಕ್ಟೇರಾ ನಾಯಕನಾಗಿ ಹಾಗೂ ಜಾಸ್ಮಿನ್‌ ಡಿ'ಸೋಜಾ, ಕೇಟ್‌ ಪಿರೇರಾ ಮತ್ತು ಶೈನಾ ಡಿ'ಸೋಜ ನಾಯಕಿಯರಾಗಿ ನಟಿಸಿದ್ದಾರೆ. ನಟರಾದ ರೈನಲ್‌ ಸಿಕ್ವೇರಾ, ಲೆಸ್ಲಿ ರೇಗೊ, ಜೆರಿ ರಸ್ಕಿನ್ನಾ, ವಾಲ್ಟರ್‌ ನಂದಳಿಕೆ, ಜೀವನ್‌ ವಾಸ್‌, ಜೊಸ್ಸಿ ರೇಗೊ, ಆಲ್ವಿನ್‌ ದಾಂತಿ, ಆಲ್ಬರ್ಟ್‌ ಪೆರಿಸ್‌, ಅರುಣ್‌ ನೊರೊನ್ಹಾ, ಡೆನ್ವರ್‌ ಪೆರಿಸ್‌, ಡೆನ್ವರ್‌ ಡಿ'ಸೋಜಾ, ಮೆಲಿಶಾ ಪಿಂಟೊ ಮುಖ್ಯ ಭೂಮಿಕೆಯಲ್ಲಿದ್ದಾರೆ.


ಸಾಹಿತ್ಯ ಮತ್ತು ರಾಗ ಸಂಯೋಜನ್‌ ಮೆಲ್ವಿನ್‌ ಪೆರಿಸ್‌, ಛಾಯಾಗ್ರಹಣ ವಿ. ರಾಮಾಂಜನೇಯ ಮತ್ತು ಸಂಕಲನ ಮೆವಿನ್‌ ಜೊಯೆಲ್‌ ಪಿಂಟೊ, ಶಿರ್ತಾಡಿ ಇವರದ್ದು.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top