ಬೆಂಗಳೂರು: ಬೆಂಗಳೂರಿನ ಪ್ರಖ್ಯಾತ ನೃತ್ಯ ಕಲಾವಿದೆ ಹಾಗೂ ವಿಜ್ಞಾನಿ ಡಾ|| ಶುಭಾರಾಣಿ ಬೋಳಾರ್ ಅವರ ಭರತ ನೃತ್ಯ ಸಂಗೀತಾ ಅಕಾಡೆಮಿ ಮತ್ತು ಮೈಸೂರಿನ ನಾಟ್ಯಾಚಾರ್ಯ ಪ್ರೊ| ಕೆ. ರಾಮಮೂರ್ತಿ ರಾವ್ ಅವರ ನೂಪುರ ಕಲಾವಿದರು ಸಾಂಸ್ಕೃತಿಕ ಟ್ರಸ್ಟ್ ಸಂಯುಕ್ತವಾಗಿ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಸಹಯೋಗದೊಂದಿಗೆ ಡಿಸೆಂಬರ್ 14 ಮತ್ತು 15 ರಂದು, 2024 ಎಂ.ಜಿ.ಎಂ. ಕಾಲೇಜಿನ ರವೀಂದ್ರ ಮಂಟಪದಲ್ಲಿ 2 ದಿನಗಳ ನೃತ್ಯ ಮತ್ತು ಪ್ರದರ್ಶನ ಕಲೆಗಳ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿವೆ.
ಡಿ. 14 ರ ಶನಿವಾರ ಬೆಳಿಗ್ಗೆ 10.00 ಗಂಟೆಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರು ಹಾಗೂ ಶ್ರೇಷ್ಠ ಮೃದಂಗ ವಿದ್ವಾಂಸರು ಆಗಿರುವ ವಿದ್ವಾನ್ ಆನೂರು ಅನಂತ ಕೃಷ್ಣ ಶರ್ಮ ರವರು ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಎಂ.ಜಿ.ಎಂ ಕಾಲೇಜಿನ ಪ್ರಾಶುಂಪಾಲರಾದ ಪ್ರೋಳಿ ಲಕ್ಷ್ಮೀ ನಾರಾಯಣ ಕಾರಂತರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ತಿನ ಅಧ್ಯಕ್ಷ ವಿದ್ವಾನ್ ಪ್ರವೀಣ್ ಯು.ಕೆ ಆಗಮಿಸಲಿದ್ದಾರೆ.
ಉದ್ಘಾಟನಾ ಸಮಾರಂಭದ ನಂತರ ವಿದ್ವಾನ್ ಆನೂರು ಅನಂತ ಕೃಷ್ಣ ಶರ್ಮ ಅವರು ಸಂಗೀತ ಮತ್ತು ನೃತ್ಯದಲ್ಲಿ ಮೃದಂಗದ ಪಾತ್ರ ಎಂಬ ವಿಷಯದ ಮೇಲೆ ಹಾಗೂ ಪ್ರೊ| ಕೆ. ರಾಮಮೂರ್ತಿ ರಾವ್ ಅವರು ಕಲಾವಿಮರ್ಶೆ ಎಂಬ ವಿಷಯದ ಮೇಲೆ ಹಾಗೂ ಡಾ. ಪದ್ದಿನಿ ಶ್ರೀಧರ್ ಅವರು ಸುಳಾದಿಗಳು ಹಾಗೂ ದಾಮೋದರ ಪಂಡಿತನ ಸಂಗೀತ ದರ್ಪಣದ್ ಬಗ್ಗೆ ಪ್ರಧಾನ ಭಾಷಣ ಮಾಡಲಿದ್ದಾರೆ. ಸಮ್ಮೇಳನದಲ್ಲಿ ಬೆಂಗಳೂರಿನ ಡಾ| ರಶ್ಮಿ ಪ್ರಸಾದ್, ಉಡುಪಿಯ ವಿದ್ವಾನ್ ರಾಮಕೃಷ್ಣ ಕೂಡಚ, ಬೆಂಗಳೂರಿನ ಕೌಸಲ್ಯ ನಿವಾಸ್, ಡಾ|| ನಂದನ ಕೃಷ್ಣ ಕುಮಾರ್, ಮಣಿಪಾಲದ ಡಾ| ಅನ್ನಪೂರ್ಣ ಆಚಾರ್ ಹಾಗು ಮಂಗಳೂರಿನ ವಿದುಷಿ ಶಾರದಾಮಣಿ ಶೇಖರ್ ಅವರು ವಿವಿಧ ವಿಷಯಗಳ ಬಗ್ಗೆ ಪ್ರಾತ್ಯಕ್ಷಿಕ ನೀಡಲಿದ್ದು ಸಂಜೆ ನೃತ್ಯಾನಿಕೇತನ ಕೊಡವೂರಿನ ವಿದ್ವಾನ್ ಸುಧೀರ್ ಕೊಡವೂರು ಹಾಗೂ ಮಾನಸಿ ಸುಧೀರ್ ನೇತೃತ್ವದಲ್ಲಿ ನೃತ್ಯ ಪ್ರದರ್ಶನ ನಡೆಯಲಿದೆ.
2ನೇ ದಿನ ಬೆಳಿಗ್ಗೆ ಯಕ್ಷಗಾನ ಮತ್ತು ಭರತ ನಾಟ್ಯದ ಸಾಮ್ಯತೆ ಹಾಗೂ ವೈಷಮ್ಯದ ಬಗ್ಗೆ ವಿದುಷಿ ಸುಮಂಗಲ ರತ್ನಾಕರ ರಾವ್ ಅವರು ಪ್ರಧಾನ ಭಾಷಣ ಮಾಡಲಿದ್ದಾರೆ. ನಂತರ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಕಲೆಗಳನ್ನು ಹೆಚ್ಚು ಜನಪ್ರಿಯತೆ ಗಳಿಸುವ ಬಗ್ಗೆ ವಿದುಷಿ ಸುಮಂಗಲ ರತ್ನಾಕರ ರಾವ್ ನೇತೃತ್ವದಲ್ಲಿ ಸಮೂಹ ಚರ್ಚೆ ನಡೆಯಲಿದ್ದು ನೃತ್ಯ ಗುರುಗಳಾದ ಚಂದ್ರಶೇಖರ್ ನಾವಡ, ವಿದ್ಯಾಶ್ರೀ ರಾಧಾಕೃಷ್ಣ, ದೀಪಕ್ ಕುಮಾರ್, ಸುಧೀರ್ ಕೊಡವೂರು ಭಾಗವಹಿಸಲಿದ್ದಾರೆ. ಇದೇ ದಿನ ವಿದ್ವಾನ್ ಶ್ರೀರಾಮ್ ಭಟ್, ವಿದುಷಿ ವೀಣಾ ಸಾಮಗ, ಡಾ| ಶುಭಾರಾಣಿ ಬೋಳಾರ್, ಖುಷ್ಬೂ ಜಾಧವ್ ಮತ್ತು ಪ್ರೊ| ಕೆ. ರಾಮಮೂರ್ತಿ ರಾವ್ ವಿವಿಧ ವಿಷಯಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಿದ್ದಾರೆ.
ಸಂಜೆ 5.00 ಗಂಟೆಗೆ ನಗರ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಮಾಜಿ ಕುಲ ಸಚಿವ ಪ್ರೊ| ಶಿವರಾಮ್ ರವರ ಅಧ್ಯಕ್ಷತೆಯಲ್ಲಿ, ಉಡುಪಿಯ ರಂಜಿನಿ ಮೆಮೋರಿಯಲ್ ಟ್ರಸ್ಟ್‌ನ ಅಧ್ಯಕ್ಷ ಪ್ರೊ. ಅರವಿಂದ ಹೆಬ್ಬಾರ್ ಸಮಾರೋಪ ಭಾಷಣ ಮಾಡಲಿದ್ದು ವೈಕುಂಠ ಬಾಳಿಗೆ ಕಾಲೇಜಿನ ನಿರ್ದೇಶಕಿ ಡಾ| ಕೆ. ನಿರ್ಮಲಾ ಕುಮಾರಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಮಾರೋಪ ಸಮಾರಂಭದ ನಂತರ ಬೆಂಗಳೂರಿನ ಕೌಸಲ್ಯ ನಿವಾಸ್ ತಂಡದವರಿಂದ "ಹನುಮಾನ್ ಚಾಲೀಸ" ಮತ್ತು ಡಾ| ಶುಭಾರಾಣಿ ಬೋಳಾರ್ ರವರ ಶಿಷ್ಯರಿಂದ "ಮೋಕ್ಷ" ಎಂಬ ನೃತ್ಯ ರೂಪಕದ ಪ್ರದರ್ಶನವಿದೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಪತ್ರಿಕಾ ಪ್ರಕಟಣೆ ಕೋರಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ