ಪುತ್ತೂರು: ಕರ್ನಾಟಕ ಈಜು ಸಂಸ್ಥೆ ಆಯೋಜನೆಯಲ್ಲಿ ಡಿ13, 14ರಂದು ಬೆಂಗಳೂರು ಕೆನ್ಸಿಂಗ್ಟನ್ ಸ್ವಿಮ್ಮಿಂಗ್ ಪೂಲ್ ಹಲಸೂರುನಲ್ಲಿ ನಡೆದ 'ಕರ್ನಾಟಕ ರಾಜ್ಯ ಡೈವಿಂಗ್ ಚಾಂಪಿಯನ್ ಶಿಪ್ 2024' ಡೈವಿಂಗ್ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ನಂದನ್ ನಾಯ್ಕ ಇವರು ಹೈ ಬೋರ್ಡ್ ವಿಭಾಗದಲ್ಲಿ ಒಂದು ಬೆಳ್ಳಿ ಹಾಗೂ ಒಂದು ಮೀಟರ್ ಮತ್ತು ಮೂರು ಮೀಟರ್ ಸ್ಟ್ರಿಂಗ್ ಬೋರ್ಡ್ ವಿಭಾಗದಲ್ಲಿ ಎರಡು ಕಂಚಿನ ಪದಕ ಗೆದ್ದು, ಜನವರಿಯಲ್ಲಿ ಚೆನ್ನೈನಲ್ಲಿ ನಡೆಯುವ ಸೌತ್ ಜೋನ್ ಚಾಂಪಿಯನ್ ಶಿಪ್ ಗೆ ಆಯ್ಕೆಯಾಗಿರುತ್ತಾರೆ.
ನಂದನ್ ನಾಯ್ಕ್ ಇವರು ನರಿಮೊಗರು ನಿವಾಸಿ ರವಿ ಸಂಪತ್ ನಾಯ್ಕ ಹಾಗೂ ಕ್ಷಮಿತಾ ಆರ್ ನಾಯ್ಕ ದಂಪತಿಗಳ ಪುತ್ರನಾಗಿದ್ದಾರೆ. ಇವರಿಗೆ ಪಾರ್ಥ ವಾರಣಾಸಿ, ವಿಕಾಸ್ ಹಾಗೂ ವೆಂಕಟೇಶ್ ತರಬೇತಿ ನೀಡಿರುತ್ತಾರೆ. ಕಾಲೇಜಿನ ಪ್ರಾಂಶುಪಾಲ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ಅಭಿನಂದಿಸಿದರು. ದೈಹಿಕ ಶಿಕ್ಷಕ ನಿರ್ದೇಶಕ ಡಾ. ಏಲಿಯಾಸ್ ಪಿಂಟೋ ಹಾಗೂ ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ