ಮೂಡುಬಿದಿರೆ: ‘ಸವ್ಯಸಾಚಿ' ಅಂತರ್ ಕಾಲೇಜು ಕಾಮರ್ಸ್ ಫೆಸ್ಟ್

Upayuktha
0


ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ವಾಣಿಜ್ಯ ವಿಭಾಗವು ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ 'ಸವ್ಯಸಾಚಿ' ಅಂತರ್ ಕಾಲೇಜು ಕಾಮರ್ಸ್ ಫೆಸ್ಟ್‌ನ ಶನಿವಾರ ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಉದ್ಘಾಟಿಸಿದರು. 


ವಿಭಾಗದ ಹಿರಿಯ ವಿದ್ಯಾರ್ಥಿ, ಲೆಕ್ಕ ಪರಿಶೋಧಕ ಅನ್ವೇಶ್ ಶೆಟ್ಟಿ ಮುಖ್ಯ ಅತಿಥಿಯ ನೆಲೆಯಲ್ಲಿ ಮಾತನಾಡಿ, ಕಾಲೇಜು ಫೆಸ್ಟಗಳು  ವಿದ್ಯಾರ್ಥಿಗಳಿಗೆ ತಮ್ಮ ದಿನನಿತ್ಯದ ದಿನಚರಿಯಿಂದ ಹೊರಬಂದು ಸಂತೋಷದ ಕ್ಷಣಗಳನ್ನು ಕಳೆಯಲು ಸಹಕಾರಿಯಾಗಿವೆ. ಆದರೆ ಈ ಹಂತದಲ್ಲಿ ಲಭಿಸುವ ಕಲಿಕೆ ಮಾತ್ರ ಬದುಕಿಗೆ ಸಹಕಾರಿ ಎಂದರು.   


ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್ ಕಾಲೇಜಿನ ಪ್ರಾಚರ‍್ಯ ಡಾ ಕುರಿಯನ್, ತಮ್ಮ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಲು ಈ ಅವಕಾಶಗಳನ್ನು (ಫೆಸ್ಟ್) ಬಳಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.  ಇಲ್ಲಿ ಕಲಿತ ಪಾಠ ಭವಿಷ್ಯಕ್ಕೆ ಸ್ಪಷ್ಟ ಮಾರ್ಗದರ್ಶನವನ್ನು ನೀಡಬಲ್ಲದು. ‘ನೀವು ಏನು ಮಾಡುತ್ತೀರಿ ಎಂಬುದು ಮುಖ್ಯ ಅಲ್ಲ, ಬದಲಿಗೆ ನೀವು ಮಾಡುವ ಕೆಲಸವನ್ನು ಹೇಗೆ ಮಾಡುತ್ತೀರಿ ಎಂಬುದರ ಮೇಲೆ ಯಶಸ್ಸು ನಿರ್ಧಾರವಾಗುತ್ತದೆ ಎಂದರು. 


ಸಮಾರೋಪ ಸಮಾರಂಭದಲ್ಲಿ ಸಾಮಾಜಿಕ ಮಾಧ್ಯಮ ಪ್ರಭಾವಿ ಮಂಜುನಾಥ ಕಾಮತ್ ಮಾತನಾಡಿ, ಸಾಮಾಜಿಕ ಮಾಧ್ಯಮಗಳ ವೇದಿಕೆಗಳನ್ನು ಸದ್ವಿನಿಯೋಗ ಮಾಡಿಕೊಳ್ಳುವ ಕುರಿತು ತಿಳಿಸಿದರು.


'ಸವ್ಯಸಾಚಿ' ಪದವಿಪೂರ್ವ ಕಾಲೇಜುಗಳ ವಾಣಿಜ್ಯ ಫೆಸ್ಟ್ನಲ್ಲಿ ಕಾರ್ಕಳದ ಕ್ರೈಸ್ತ್ ಕಿಂಗ್ ಪದವಿಪೂರ್ವ ಕಾಲೇಜು ಸಮಗ್ರ ಚಾಂಪಿಯನ್ಸ್  ಆಗಿ ಹೊರಹೊಮ್ಮಿದರೆ, ರನ್ನರ್ಸ್  ಆಪ್ ಸ್ಥಾನವನ್ನು ಮೂಡುಬಿದಿರೆಯ ಎಕ್ಸಲೆಂ ಟ್ ಕಾಲೇಜು ಪಡೆಯಿತು. ವಿವಿಧ ಸ್ಪರ್ಧೆಗಳಲ್ಲಿ 13 ಕಾಲೇಜುಗಳಿಂದ 202 ವಿದ್ಯಾರ್ಥಿಗಳು ಪಾಲ್ಗೊಂಡರು.  


ಕಾಲೇಜಿನ ಮುಖ್ಯ ದಾಖಲಾತಿ ನಿರ್ವಹಣಾಧಿಕಾರಿ ಡಾ.ವಿನಾಯಕ ಭಟ್ ಗಾಳಿಮನೆ,  ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶರ್ಮಿಳಾ ಕುಂದರ್, ಫೆಸ್ಟ್ ಸಂಯೋಜಕ ರಮಾನಂದ ನಾಯಕ್ ಮತ್ತು ಪೂಜಾ ಕೋಟ್ಯಾನ್ ಇದ್ದರು.  


ಶ್ರದ್ಧಾ ಮೀರಾ ಹಾಗೂ ಜೋತ್ಸ್‌ನ ಕಾರ್ಯಕ್ರಮ ನಿರೂಪಿಸಿ, ಮುಷ್ಕನ್ ಹಾಗೂ ಸ್ನೇಹಾ ಸ್ವಾಗತಿಸಿದರು. ಶ್ರೀಮಾ ಹಾಗೂ ಪ್ರಿಷಲ್ ವಂದಿಸಿ, ದ್ವಿತಿ ಪೂಜಾರಿ ಅತಿಥಿಗಳನ್ನು ಪರಿಚಯಿಸಿದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top