ಅಮರೀಶ ವಿ ನಾರಾಯಣ ಅವರಿಗೆ ಡಾಕ್ಟರೇಟ್ ಪದವಿ (ಪಿಎಚ್.ಡಿ.)

Upayuktha
0

 



ಮಣಿಪಾಲ: ತಾಂತ್ರಿಕ ಮಹಾವಿದ್ಯಾಲಯದ [MIT] ಸಂಶೋಧನ ವಿದ್ಯಾರ್ಥಿ  ಅಮರೀಶ ವಿ ನಾರಾಯಣ ಅವರು ಬರೆದು ಮಂಡಿಸಿದ  "ಶರಾವತಿ ನದಿಯ ಭೂವೈಜ್ಞಾನಿಕ ಮತ್ತು ರಾಸಾಯನಿಕ ಗುಣಲಕ್ಷಣಗಳ ಅಧ್ಯಯನ” ಎಂಬ ಶೀರ್ಷಿಕೆಯ ಡಾಕ್ಟರೇಟ್ ಮಹಾಪ್ರಬಂಧಕ್ಕೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ [MAHE] ಸಂಸ್ಥೆಯು, ಪಿಎಚ್.ಡಿ. ಪದವಿಯನ್ನು ನೀಡಿದೆ.

 

ಇವರ ಸಂಶೋಧನೆಯು ಕರ್ನಾಟಕ ರಾಜ್ಯದಲ್ಲಿ ಹರಿಯುವ ಶರಾವತಿ ನದಿಯ  ಜಲೀಯ-ಗುಣಮಟ್ಟ ಮತ್ತು ಆ ನದಿಯು ಸಾಗರಕ್ಕೆ ಸಾಗಿಸುತ್ತಿರವ ರಾಸಾಯನಿಕಗಳ  ಪ್ರಮಾಣಗಳ ಬಗ್ಗೆ ಸಂಶೋಧನಾತ್ಮಕ ಪ್ರಬಂಧವಾಗಿದ್ದು, ಕೇಂದ್ರ ಹಾಗು ರಾಜ್ಯ ಸರಕಾರದ ಪರಿಸರ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ  ಹಾಗೂ ಸಂಶೋಧನಾಸಕ್ತರಿಗೆ ಉಪಕಾರಿ  ಆಗಬಲ್ಲುದು.  ಈ ಸಂಶೋಧನೆಯ ಫಲಿತಾಂಶಗಳನ್ನು ಬರೆದು ಸಿದ್ದಪಡಿಸಿದ ಪ್ರಬಂಧಗಳು, ಪ್ರಪಂಚದ ಪ್ರತಿಷ್ಠಿತ ಸಂಶೋಧನಾ ನಿಯತಕಾಲಿಕಗಳಲ್ಲಿ ಪ್ರಕಟವಾಗಿದೆ. 


ಈ ಸಂಶೋಧನೆಯನ್ನು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ [MAHE] ಕೊಡ ಮಾಡುವ ಡಾ. ಟಿ. ಎಂ. ಎ. ಪೈ ಶಿಷ್ಯವೇತನದ ಸಹಾಯದಿಂದ ಹಾಗು ಭಾರತ ಸರ್ಕಾರದ ಭೂ ವಿಜ್ಞಾನ ಸಚಿವಾಲಯದ ಸಹಾಯದಿಂದ ಮಾಡಲಾಗಿದೆ. 


ಇವರು ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಭೂ ವಿಜ್ಞಾನದ ನಿವೃತ್ತ  ಪ್ರಾಧ್ಯಾಪಕರದ ಡಾ. ಹೆಚ್. ಎನ್. ಉದಯಶಂಕರ್ ಅವರ ಮಾರ್ಗದರ್ಶನದಲ್ಲಿ ಹಾಗೂ ಅದೇ ವಿಭಾಗದ ಪ್ರಾಧ್ಯಾಪಕ ಡಾ. ಕೆ. ಬಾಲಕೃಷ್ಣ ಅವರ ಸಹಮಾರ್ಗದರ್ಶನದಲ್ಲಿ ಸಂಶೋಧನಾ ಕಾರ್ಯವನ್ನು ಕೈಗೊಂಡಿದ್ದರು.


ಮೂಲತ ಕಾಸರಗೋಡಿನವರಾದ  ಶ್ರೀಯುತ ಅಮರೀಶ ನಾರಾಯಣ್ ಅವರು  ಸಿ ನಾರಾಯಣನ್ ಮತ್ತು  ಪಿ ಆರ್ ವಿಜಯಮ್ಮ ದಂಪತಿಗಳ ಪುತ್ರ, ಹಾಗು ಡಾ. ಕೆ ಅಮೃತ ಅವರ ಪತಿಯಾಗಿರುತ್ತಾರೆ. ಪ್ರಸ್ತುತ  ಇವರು ಎಂ.ಐ.ಟಿಯಲ್ಲಿ ಡಾಕ್ಟರೇಟ್ ನಂತರದ ಸಂಶೋಧಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top