ಪ್ರಕೃತಿ ಕೇಂದ್ರಿತ ಅಭಿವೃದ್ಧಿಯೆ ಮೂಲ ಗುರಿ: ಕೆ.ಎನ್. ಗೋವಿಂದಾಚಾರ್ಯ

Upayuktha
0


ಭಾರತೀಯ ಸಂಸ್ಕೃತಿ ಉತ್ಸವ ಪರಿವರ್ತನೆಗೆ ಮುನ್ನುಡಿ




ಕಲಬುರಗಿ: ಭಾರತ ವಿಕಾಸ ಸಂಗಮದ ಉದ್ದೇಶವು ಮಾನವ ಕೇಂದ್ರದ ಬೆಳವಣಿಗೆಯಲ್ಲ. ಪ್ರಕೃತಿ ಕೇಂದ್ರಿತ ವಿಕಾಸ ಮೂಲ ಗುರಿಯಾಗಿದೆ. ಅದಕ್ಕೆ ಭಾರತೀಯ ಸಂಸ್ಕೃತಿ ಉತ್ಸವವು ಚಿಂತನಾ ವೇದಿಕೆಯಾಗಲಿದೆ ಎಂದು ಭಾರತ ವಿಕಾಸ ಸಂಗಮದ ಸಂಸ್ಥಾಪಕರಾದ ಕೆ.ಎನ್ ಗೋವಿಂದಾಚಾರ್ಯ ಹೇಳಿದರು.



ಕಲಬುರ್ಗಿಯ ವಿಕಾಸ ಅಕಾಡೆಮಿ ಕೇಂದ್ರದಲ್ಲಿ ಡಿಸೆಂಬರ್ 14ರಂದು ಶನಿವಾರ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಅಭಿವೃದ್ಧಿಯ ಪರಿಭಾಷೆ ಬದಲಾಗಬೇಕಾಗಿದೆ ಜಗತ್ತಿನಲ್ಲಿ ಮಾನವ ಕೇಂದ್ರಿತ ವಿಕಸನಕ್ಕೆ ಹೆಜ್ಜೆ ಹಾಕುತ್ತಿರುವುದು ಅಪಾಯಕಾರಿ ಪ್ರಕೃತಿ ಕೇಂದ್ರಿತ ಬೆಳವಣಿಗೆಯಿಂದ ಮಾತ್ರ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಿದೆ. ಭಾರತೀಯ ಸಂಸ್ಕೃತಿ ಉತ್ಸವಗಳನ್ನು ನಡೆಸುವುದರ ಮೂಲಕ ಅಭಿವೃದ್ಧಿಪರ ಮತ್ತು ರಚನಾತ್ಮಕ ಕಾರ್ಯಕ್ರಮಗಳ ದೃಷ್ಟಿಕೋನವನ್ನು ಬಿತ್ತಿ ಕೃಷಿ, ಆರೋಗ್ಯ, ಶಿಕ್ಷಣ, ಪರಿಸರ, ನ್ಯಾಯ ಮುಂತಾದ ರಂಗಗಳ ಸಕಾರಾತ್ಮಕ ಬೆಳವಣಿಗೆಗೆ ಸಂವಾದ, ಒಪ್ಪಂದ ಮತ್ತು ಸಹಯೋಗದ ಪ್ರಕ್ರಿಯೆಯನ್ನು ಸಕ್ರಿಯಗೊಳಿಸಿ ಸಮಾಜದಲ್ಲಿ ಧನಾತ್ಮಕ ಬದಲಾವಣೆಯನ್ನು ತರಲು ಉದ್ದೇಶಿಸಲಾಗಿದೆ. ಅಭ್ಯುದಯ ಸುಸ್ಥಿರತೆ ಪ್ರಕೃತಿ ಪೂರಕ ಮತ್ತು ವಿಶ್ವಶಾಂತಿ ಈ ಪರಿಕಲ್ಪನೆ ಯೊಂದಿಗೆ ಭಾರತೀಯ ವಿಕಾಸ ಸಂಗಮವು ಉತ್ಸವಕ್ಕೆ ನೆಲೆಗಟ್ಟು ಒದಗಿಸಿ ಚರ್ಚೆ ಸಂವಾದಗಳ ಮೂಲಕ ಸಬಲೀಕರಣ ಮತ್ತು ಸುಸ್ಥಿರತೆಯನ್ನು ಹೊಂದಲು ಹೆಜ್ಜೆ ಹಾಕಲಾಗುತ್ತಿದೆ.



ಪರಿಸರ ಮೇಲಿನ ದೌರ್ಜನ್ಯದಿಂದಾಗಿ 15000 ನದಿಗಳಿದ್ದ ಭಾರತ ಇವತ್ತು ಏಳುವರೆ ಸಾವಿರ ನದಿಗಳನ್ನು ಹೊಂದಿದೆ. ಶೇಕಡ 33 ರಷ್ಟು ಕಾಡು ಪ್ರದೇಶ ಹೊಂದಿರುವಎಲ್ಲಿ ಕೇವಲ ಶೇಕಡ 15ರಷ್ಟು ಮಾತ್ರ ಇದೆ ಕಾಡು ಮರ ನದಿ, ಜಲ, ಜಮೀನು ಎಲ್ಲವೂ ಅಶುದ್ಧಗೊಂಡು ಆಹಾರ ಗಾಡಿ ಆರೋಗ್ಯ ಮಲಿನವಾಗುತ್ತಿದೆ. ಇಂಥ ಗಂಭೀರವಾದ ಪ್ರಸಕ್ತ ಸ್ಥಿತಿಯಲ್ಲಿ ಇಸ್ರೇಲ್ ರಷ್ಯಾ ಹ ಯುದ್ಧಭೀತಿಯಿಂದ ಜಗತ್ತು ತಲ್ಲಣಗೊಂಡಿದೆ. ಇವುಗಳಿಗೆಲ್ಲ ಜನರ ಮನೋಧರ್ಮವನ್ನು ಬದುಕಿನ ಶೈಲಿಯನ್ನ ಬದಲಾಯಿಸಿಕೊಳ್ಳುವ ಪ್ರಕೃತಿ ಕೇಂದ್ರಿತ ಬದುಕನ್ನು ಮಾಡುವ ಬಗ್ಗೆ ಜಾಗೃತಿಯನ್ನ ಮೂಡಿಸಲು ಕೂಲಂಕಶವಾದ ಚರ್ಚೆಯನ್ನ ಕೈಗೊಳ್ಳಲು ರಾಜಕೀಯ ಜಾತಿ ಮತ್ತು ಏಕ ಸ್ವಾಮ್ಯತ್ವವನ್ನು ಬದಿಗಿಟ್ಟು ಸಹಭಾಗಿತ್ವದ ಬೆಳವಣಿಗೆಯನ್ನು ಪ್ರಕೃತಿ ಕೇಂದ್ರದ ದೃಷ್ಟಿಕೋನದಿಂದ ನೋಡುವ ಭಾಗವಾಗಿ ಮೆಗಾ ಉತ್ಸವಗಳನ್ನು ಆಯೋಜಿಸಲಾಗುತ್ತಿದೆ ಎಂದರು. 



ಗ್ರಾಮಾಭ್ಯುದಯ ಮತ್ತು ಸುಸ್ಥಿರ ಕೃಷಿಯನ್ನು ಪ್ರೋತ್ಸಾಹಿಸಲು ಮತ್ತು ಆತ್ಮಹತ್ಯೆಯನ್ನು ತಡೆಯಲು ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸಿ ಯಾವುದೇ ಹವಾಮಾನವನ್ನು ಎದುರಿಸಿ ಕೃಷಿಕ ತನ್ನ ಕೃಷಿ ಚಟುವಟಿಕೆಯನ್ನು ನಡೆಸಿ ಆರ್ಥಿಕ ಹೆಜ್ಜೆ ಹಾಕಲು ಜನಕೇಂದ್ರಿತವಾದ ಮಾರ್ಗದರ್ಶನವನ್ನು ನೀಡಲು ಉತ್ಸವ ಸಹಕಾರಿಯಾಗಲಿದೆ. ಸರಕಾರಗಳು ಜನರ ಆಶಯಗಳಿಗೆ ಸ್ಪಂದಿಸುವುದು ಬಹಳ ಮುಖ್ಯ. ಆ ನೆಲೆಯಲ್ಲಿ ಸೇಡಂನಲ್ಲಿ ಜನವರಿ 29 ರಿಂದ ಆರಂಭಗೊಳ್ಳುವ ಏಳನೇ ಭಾರತೀಯ ಸಂಸ್ಕೃತಿ ಉತ್ಸವವು ಲಕ್ಷಾಂತರ ಜನರ ಪಾಲ್ಗೊಳ್ಳುವಿಕೆಯಿಂದ ನಡೆಯಲಿದೆ.


ಕೃಷಿ ಶಿಕ್ಷಣ ಆರೋಗ್ಯ ಮಹಿಳಾ ಸಬಲೀಕರಣ ಉದ್ಯಮಶೀಲತೆ ಯುವಜನತೆ ಪರಿಸರ ಸಂಸ್ಕೃತಿ ಮತ್ತು ಸಾಮಾಜಿಕ ಸೇವೆಯ ಮೇಲೆ ವಿಶೇಷ ಗಮನವನ್ನು ಹರಿಸಲಿದ್ದು ಪ್ರಕೃತಿ ಕೇಂದ್ರಿತ ಅಭಿವೃದ್ಧಿ ಮತ್ತು ಸುಸ್ಥಿರ ಮಾದರಿಗೆ ಕಾರಣವಾಗುವ ಎಲ್ಲಾ ಅಂಶಗಳನ್ನು ಈ ಉತ್ಸವದ ಮೂಲಕ ಸಾರಲಾಗುತ್ತದೆ ರಾಷ್ಟ್ರದ ನಾಗರಿಕರನ್ನು ಪ್ರಕೃತಿ ಕೇಂದ್ರಿತ ಅಭಿವೃದ್ಧಿಯ ಉದಾತ ದೃಷ್ಟಿಗೆ ಸಮರ್ಪಿಸಿಕೊಳ್ಳಲು ಉತ್ಸವವು ಪ್ರೇರೇಪಡೆ ನೀಡುವುದಲ್ಲದೆ ಭಾರತೀಯ ನೀತಿ ಮತ್ತು ಜಾಗತಿಕ ದೃಷ್ಟಿಕೋನ ಎರಡನ್ನು ಹೊಂದಲಾಗಿದೆ. ಸ್ಥಳೀಯವಾಗಿ ಸ್ಪಂದಿಸಿ ಜಾಗತಿಕವಾಗಿ ಆಲೋಚಿಸುವ ದೊಡ್ಡ ಮಟ್ಟದ ಕೆಲಸವನ್ನು ವಿಕಾಸ ಸಂಗಮ ಕಳೆದ 20 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವುದರಿಂದ ಆರ್ಥಿಕ ಕೃಷಿ ವಲಯಗಳ ನಿರ್ಮಾಣ ಸೃಷ್ಟಿಗೊಂಡಿದೆ. ಇದರಿಂದಾಗಿ ಸುಸ್ಥಿರತೆಯೊಂದಿಗೆ ಆರ್ಥಿಕ ಬೆಳವಣಿಗೆಯನ್ನು ಕೂಡ ಸಾಧಿಸಲಾಗುತ್ತಿದೆ ಎಂದು ಅವರು ಹೇಳಿದರು.



ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಭಾರತೀಯ ಸಂಸ್ಕೃತಿ ಉತ್ಸವದ ಪ್ರಧಾನ ಸಂಯೋಜಕ ಬಸವರಾಜ ಪಾಟೀಲ್ ಸೇಡಂ ಉತ್ಸವದ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು. ಮಾಧ್ಯಮ ವಿಭಾಗದ ಪ್ರಭಾಕರ ಜೋಶಿ ಸ್ವಾಗತಿಸಿದರು. ಮಾಧ್ಯಮ ವಿಭಾಗದ ಡಾ. ಸದಾನಂದ ಪೆರ್ಲ, ಹಾಗೂ ಉತ್ಸವ ಸಮಿತಿಯ ಪದಾಧಿಕಾರಿಗಳಾದ ಮಾರ್ಥಂಡ ಶಾಸ್ತ್ರಿ ಮಹಾದೇವಯ್ಯ ಕರದಳ್ಳಿ ಶೈಲಜಾ ಶೆಳ್ಳಗಿ ಮತ್ತಿತರರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top