ಉಡುಪಿ: ತೋಟಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ ಹೆಚ್ಚಿಸಲು ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಜೇನುತುಪ್ಪಕ್ಕೆ ತೋಟಗಾರಿಕೆ ಇಲಾಖೆಯು ಬ್ರ‍್ಯಾಂಡ್ ಹೆಸರು ಅಭಿವೃದ್ಧಿಪಡಿಸಿ, TRADE MARK REGISTRY ಯಿಂದ ಅಧಿಕೃತವಾಗಿ ಅನುಮೋದನೆ ಪಡೆಯಲಾಗಿದ್ದು, ಅದರಂತೆ ಕನ್ನಡದಲ್ಲಿ ಝೇಂಕಾರ ಮತ್ತು ಆಂಗ್ಲ ಭಾಷೆಯಲ್ಲಿ Jhenkara ಎಂಬ ನಾಮಾಂಕಿತದೊಂದಿಗೆ ಜೇನುತುಪ್ಪ ಉತ್ಪಾದಕರು ಮತ್ತು ಸಂಗ್ರಾಹಕರು ಷರತ್ತು ಮತ್ತು ನಿಬಂಧನೆಗಳೊಂದಿಗೆ ಸದರಿ ಬ್ರ‍್ಯಾಂಡ್ ಹೆಸರು ಮತ್ತು ಲೋಗೋವನ್ನು ಬಳಸಿಕೊಂಡು ಜೇನುತುಪ್ಪ ಮಾರಾಟ ಮಾಡಲು ಅವಕಾಶವಿದ್ದು, ತೋಟಗಾರಿಕೆ ಇಲಾಖೆಯು ಈ ಬ್ರ‍್ಯಾಂಡ್ ಮಾಲೀಕತ್ವವನ್ನು ಹೊಂದಿರುತ್ತದೆ.
ತೋಟಗಾರಿಕೆ ಇಲಾಖೆಯ ಮಾಲೀಕತ್ವದ ಜೇನುತುಪ್ಪದ ಬ್ರ‍್ಯಾಂಡ್‌ನಲ್ಲಿ ಜೇನುತುಪ್ಪ ಮಾರಾಟ ಮಾಡಲು ಇಚ್ಛಿಸುವ ಜೇನುತುಪ್ಪದ ಉತ್ಪಾದಕರು ಹಾಗೂ ಸಂಗ್ರಾಹಕರು ರೂ.2500 ಗಳ ನೊಂದಣಿ ಶುಲ್ಕವನ್ನು ಖಜಾನೆ-2 ರಲ್ಲಿ ಲೆಕ್ಕ ಶೀರ್ಷಿಕೆಯಲ್ಲಿ (0401-00-800-2-01) ಪಾವತಿಸಿ, ತೋಟಗಾರಿಕೆ ಉಪನಿರ್ದೇಶಕರಿಗೆ ಪಾವತಿಸಿದ ಚಲನ್ ನೀಡಿ ಬ್ರ‍್ಯಾಂಡ್‌ನಲ್ಲಿ ಮಾರಾಟ ಮಾಡುವ ಬಗ್ಗೆ ಅನುಮತಿ ಪಡೆಯಬಹುದಾಗಿದೆ.
ಜೇನು ಉತ್ಪಾದಕರು ಹಾಗೂ ಸಂಗ್ರಾಹಕರು FSSAI ಹಾಗೂ AGMARK ಸಂಸ್ಥೆಗಳ ವತಿಯಿಂದ ನೋಂದಣಿ ಹಾಗೂ ಅನುಮೋದನೆ ಪಡೆದು ಈ ಬ್ರ‍್ಯಾಂಡ್‌ನಲ್ಲಿ ಮಾರಾಟ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ತೋಟಗಾರಿಕೆ ಉಪನಿರ್ದೇಶಕರ ಕಛೇರಿ ಹಾಗೂ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರ ಕಛೇರಿ ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ