ಸುರತ್ಕಲ್: ಮಳೆ ನೀರಿನ ಸಂರಕ್ಷಣೆ ಮತ್ತು ಮರುಬಳಕೆ ಇಂದಿನ ಅವಶ್ಯಕತೆಯಾಗಿದ್ದುಇದರ ಬಗ್ಗೆ ಸಾರ್ವಜನಿಕರಲ್ಲಿ ಸಾಕ್ಷರತೆ ಮೂಡಿ ಬರಬೇಕಾಗಿದೆ. ಅಂತರ್ಜಲ ಸಂಪನ್ಮೂಲವನ್ನು ಹೆಚ್ಚಿಸಲು ಮಳೆ ನೀರುಕೊಯ್ಲು ಯೋಜನೆಗಳನ್ನು ಸಂಸ್ಥೆಗಳು ರೂಪಿಸುತ್ತಿರುವುದು ಸ್ವಾಗತಾರ್ಹ ಎಂದು ದಕ್ಷಿಣ ಕನ್ನಡ ಜಿಲ್ಲಾ ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಕಲ್ಪಾವಿ ನುಡಿದರು.
ಅವರು ಸುರತ್ಕಲ್ ಹಿಂದು ವಿದ್ಯಾದಾಯಿನೀ ಸಂಘದ ವಿದ್ಯಾದಾಯಿನೀ ಸಂಕೀರ್ಣದಲ್ಲಿ ಸುರತ್ಕಲ್ ರೋಟರಿ ಕ್ಲಬ್ ನೇತೃತ್ವದಲ್ಲಿ ಮಂಗಳೂರು ಫರ್ಟಿಲೈಸರ್ ಆ್ಯಂಡ್ ಕೆಮಿಕಲ್ಸ್ ಲಿಮಿಟೆಡ್ ಪ್ರಾಯೋಜಕತ್ವದಲ್ಲಿ ರೂಪಿಸುತ್ತಿರುವ ಮಳೆ ನೀರುಕೊಯ್ಲು ಯೋಜನೆಯ ನಿರ್ಮಾಣದ ಸಂದರ್ಭದಲ್ಲಿ ಗೋವಿಂದದಾಸ ಪದವಿ ಪೂರ್ವ ಕಾಲೇಜು ಮತ್ತು ಗೋವಿಂದದಾಸ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಮಳೆ ನೀರುಕೊಯ್ಲು ಯೋಜನೆಯ ಪ್ರಾತ್ಯಕ್ಷತೆ ನೀಡಿ ಮಾತನಾಡಿದರು.
ಇಂದು ಪ್ರತಿಯೊಂದು ಗೃಹಗಳಲ್ಲಿಯೂ ಮಳೆ ನೀರುಕೊಯ್ಲು ಯೋಜನೆಯನ್ನು ರೂಪಿಸಬೇಕಾಗಿದ್ದು ದಕ್ಷಿಣಕನ್ನಡ ಜಿಲ್ಲಾ ನಿರ್ಮಿತಿಕೇಂದ್ರ ಮಾರ್ಗದರ್ಶನ ನೀಡಲು ಬದ್ಧವಾಗಿದೆ. ಸಾಮಾಜಿಕ, ಕೈಗಾರಿಕಾ ಹಾಗೂ ಶೈಕ್ಷಣಿಕ ಸಂಸ್ಥೆಗಳು ಜೊತೆಯಾಗಿ ಮಳೆ ನೀರುಕೊಯ್ಲು ಯೋಜನೆಯನ್ನು ಅಳವಡಿಸಿಕೊಳ್ಳುತ್ತಿರುವುದು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಅತ್ಯುಪಯುಕ್ತವಾದುದು ಎಂದರು.
ಹಿಂದು ವಿದ್ಯಾದಾಯಿನೀ ಸಂಘದ ಕಾರ್ಯದರ್ಶಿ ಶ್ರೀರಂಗ ಹೆಚ್, ಮತ್ತು ಜೊತೆ ಕಾರ್ಯದರ್ಶಿ ರಾಮಚಂದ್ರ ಎಮ್.ಜಿ. ಶುಭ ಹಾರೈಸಿದರು.
ಗೋವಿಂದದಾಸ ಪದವಿ ಪೂರ್ವ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ.ರಮೇಶ್ ಭಟ್ ಎಸ್.ಜಿ., ಪ್ರಾಂಶುಪಾಲೆ ಲಕ್ಷ್ಮೀ ಪಿ., ಉಪ ಪ್ರಾಂಶುಪಾಲೆ ಸುನೀತಾ ಕೆ. ಪ್ರಾಧ್ಯಾಪಕರಾದ ಚೇತನ ಬಿ.ಕೆ., ಮಂಜುನಾಥ ಶೇಷಾದ್ರಿ, ಸುರತ್ಕಲ್ ರೋಟರಿ ಕ್ಲಬ್‍ನ ಶ್ರೀಧರ ಟಿ.ಎನ್., ರೋಟರಿ ಜೋನಲ್ ಲೆಫ್ಟಿನೆಂಟ್ ಚಂದ್ರಕಾಂತ ಮರಾಠೆ, ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಪಿ., ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಪ್ರೊ. ಹರೀಶ ಆಚಾರ್ಯ ಪಿ., ಕಛೇರಿ ಅಧೀಕ್ಷಕ ವೆಂಕಪ್ಪ ಮೂಲ್ಯ, ದ.ಕ. ನಿರ್ಮಿತಿ ಕೇಂದ್ರದ ಅಧಿಕಾರಿ ವಿಜಯ ಶೆಣೈ ಮತ್ತಿತರರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ