ಕೊಂಕಣಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಆಹ್ವಾನ ಬಿಡುಗಡೆ

Upayuktha
0


ಗೋವಾ: ಕೊಂಕಣಿ ಭಾಷಾ ಮಂಡಳ್ ಕರ್ನಾಟಕವು ತನ್ನ ಸ್ಥಾಪನಾ ದಿನದ ಪ್ರಯುಕ್ತ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಜೊತೆಯಲ್ಲಿ ಜ.4 ಒಂದು ದಿನದ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಆಯೋಜನೆ ಮಾಡಿದ್ದು ಕರ್ನಾಟಕ ಮತ್ತು ಗೋವಾದ ವಿವಿಧ ಕೊಂಕಣಿಯ ಮಾತೃಭಾಷೆ ಇರುವ  ಮುನ್ನೂರು ಕೊಂಕಣಿ ವಿದ್ಯಾರ್ಥಿಗಳು ಭಾಗವಹಿಸಲು ನೊಂದಣಿ ಮಾಡಿದ್ದಾರೆ.


ಈ ಸಮ್ಮೇಳನದ ಅಹ್ವಾನ ಬಿಡುಗಡೆ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ ಇದರ ಕುಲಪತಿ ಡಾ ಪಾ ಪ್ರವೀಣ್ ಮಾರ್ಟಿಸ್ ಮಾಡಿದರು.


ಗೋವಾ ಕೊಂಕಣಿ ಅಕಾಡೆಮಿಯ ಅಧ್ಯಕ್ಷರಾದ  ವಸಂತ್ ಭಾಗ್ವತ್ ಸಾವಂತ್ ಮುಖ್ಯ ಅಥಿತಿ ಆಗಿ ಮತ್ತು ಕಾರ್ಯದರ್ಶಿ ಪರಾಗ್ ನಗರ್‌ಸೇಕರ್ ಭಾಗವಹಿಸುವರು.


ಅಲೋಶಿಯಸ್ ಕಾಲೇಜಿನ ರಿಜಿಸ್ಟ್ರಾರ್ ಡಾಕ್ಟರೇಟ್ ರೊನಾಳ್ಡ್ ನಜ್ರೆತ್, ಎಸ್ ಎಲ್ ಶೇಟ್ ಜ್ಯುವೆಲ್ಲರಿ ಹಂಪನ್‌ಕಟ್ಟ ಇದರ ಮಾಲಕ ಪ್ರಶಾಂತ ಶೇಟ್, ಕೆನರಾ ಬ್ಯಾಂಕ್  ಸರ್ಕಲ್ ಆಪೀಸ್ ಜನರಲ್ ಮೆನೆಜರ್ ಸುದಾಕರ್ ಕೊತಾರಿ ಇರುವರು.


ಸಮಾರೋಪರಲ್ಲಿ ಉಪ ಕುಲಪತಿ  ಫಾ ಮೆಲ್ವಿನ್ ಡಿಕೂನಾ ಅಧ್ಯಕ್ಷ ಹಾಗೂ ಸಮಾರೋಪ ಭಾಷಣವನ್ನು ಸಂತ ಅಲೋಶಿಯಸ್ ಕಾಲೇಜಿನ ರಿಜಿಸ್ಟ್ರಾರ್ ಡಾ ಆಲ್ವಿನ್ ಡೆಸಾ ಮಾಡುವರು. ಇದೇ ವೇಳೆ ಕಾಲೇಜಿನಲ್ಲಿ ‌ಕೊಂಕಣಿ ವಿಭಾಗ ಮೂವತ್ತು ವರ್ಷಗಳ ಮೊದಲು ಆರಂಭ ಮಾಡಿದ ಪ್ರಾಂಶುಪಾಲ ಫಾ ಪ್ರಶಾಂತ ‌ಮಾಡ್ತ ಅವರಿಗೆ ಸನ್ಮಾನ ಮಾಡಲಾಗುವುದು. ಕೆಬಿಎಮ್‌ಕೆ ಅಧ್ಯಕ್ಷ ಕೆ ವಸಂತ ರಾವ್‌ ಕಾರ್ಯದರ್ಶಿ ರೇಮಂಡ್ ಡಿಕೂನಾ ತಾಕೊಡೆ ಜೊತೆಯಲ್ಲಿ ಇರುವರು.


ಕಾರ್ಯಕ್ರಮ ಸಂಯೋಜನೆ ಕೆಬಿಎಮ್‌ಕೆ ಅಧ್ಯಕ್ಷ ಕೆ ವಸಂತ ರಾವ್ ಹಾಗೂ ಅಲೋಶಿಯಸ್ ಕಾಲೇಜಿನ ಕೊಂಕಣಿ ವಿಭಾಗದ ಜೊತೆಯಲ್ಲಿ ಮಾಡಲಾಗುವುದು.


ಇಡೀ ಕಾರ್ಯಕ್ರಮದ ಸಂಯೋಜಕರಾದ  ಕೆಬಿಎಮ್‌ಕೆ  ಕಾರ್ಯದರ್ಶಿ ರೇಮಂಡ್ ಡಿಕೂನಾ ಸ್ವಾಗತಿಸಿ ಕೊಂಕಣಿ ವಿಭಾಗ ಮುಖ್ಯಸ್ಥೆ  ಪ್ಲೊರಾ ಕಾಸ್ತೆಲಿನೊ ವಂದಿಸಿದರು. ಸಂಯೋಜಕಿ ಡಾ ಸೆವ್ರಿನ್ ಪಿಂಟೊ ನಿರೂಪಿಸಿದರು. ಮಿಚೆಲ್ ಅನಿಶಾ ಫೆರ್ನಾಂಡಿಸ್ ಸಾಂಸ್ಕೃತಿಕ ಕಾರ್ಯದರ್ಶಿ, ಕೊಂಕಣಿ ಸಂಘ ಜನಿತಾ ರೇಗೊ, ನೋಂದಣಿ ಸಮಿತಿ ಡೆನಿತಾ ಡಿ'ಕುನ್ಹಾ, ಪ್ರೇಯರ್ ಇಂಚಾರ್ಜ್ ಸೇಜಲ್ ಪ್ರೀಮಾ ಅಲ್ವಾರೆಸ್, ಬೆಂಗಾವಲು ಸಮಿತಿ ಫ್ರಾಂಕ್ಲಿನ್ ಕ್ರಿಸ್ಟನ್ ಕ್ಯಾಸ್ಟೆಲಿನೊ ಕೊಂಕಣಿ ಸಂಘದ ವಿದ್ಯಾರ್ಥಿಗಳು ಹಾಜರಿದ್ದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top