ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕದಿಂದ ವಿಶ್ವ ದಿವ್ಯಾಂಗ ದಿನಾಚರಣೆ

Upayuktha
0




ಮಂಗಳೂರು: ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕದಿಂದ ಪುತ್ತೂರಿನ ಬೀರಮಲೆ ಬೆಟ್ಟದಲ್ಲಿರುವ ಪ್ರಜ್ಞಾ ಆಶ್ರಮದ ದಿವ್ಯಾಂಗ ಮಕ್ಕಳ ಭೇಟಿಯೊಂದಿಗೆ ಇಂದು (ಡಿ.28) ವಿಶ್ವ ದಿವ್ಯಾಂಗ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು.


ಇಂದಿನ ಕಾರ್ಯಕ್ರಮದಲ್ಲಿ ಜಿಲ್ಲಾ ಘಟಕವು ದಾನಿಗಳಿಂದ ಕೊಡಲ್ಪಟ್ಟ ವಿದ್ಯುತ್ ಚಾಲಿತ ಕುಡಿಯುವ ನೀರಿನ ಶುದ್ಧೀಕರಣ ಯಂತ್ರವನ್ನು ಆಶ್ರಮಕ್ಕೆ ಹಸ್ತಾಂತರಿಸಲಾಯಿತು. ದಿವ್ಯಾಂಗ ಮಕ್ಕಳಿಗೆ ಒಂದು ದಿನದ ಉಪಹಾರ ಮತ್ತು ಭೋಜನದ ವ್ಯವಸ್ಥೆಯನ್ನು ಮಾಡಲಾಯಿತು. ಈ ಆಶ್ರಮವನ್ನು ನಡೆಸುತ್ತಿರುವಂತಹ ಅಣ್ಣಪ್ಪ ದಂಪತಿಗಳಿಗೆ ಸಕ್ಷಮ ಜಿಲ್ಲಾ ಘಟಕದಿಂದ ದಿವ್ಯಾಂಗರಿಗೋಸ್ಕರ ಮಾಡುತ್ತಿರುವ ಶ್ರೇಷ್ಠ ಕಾರ್ಯಕ್ಕೆ ಅಭಿನಂದನೆಗಳನ್ನು ಸಲ್ಲಿಸಲಾಯಿತು. ಜಿಲ್ಲಾ ತಂಡದ ಸದಸ್ಯರು ದಿವ್ಯಾಂಗ ಮಕ್ಕಳೊಂದಿಗೆ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಶ್ವ ದಿವ್ಯಾಂಗ ದಿನವನ್ನು ಅತ್ಯಂತ ವಿಶೇಷವಾಗಿ ಆಚರಿಸಿದರು.


ವಿಶ್ವ ದಿವ್ಯಾಂಗ ದಿನದ ಪ್ರಯುಕ್ತವಾಗಿ ಡಿಸೆಂಬರ್ ತಿಂಗಳಲ್ಲಿ ಪ್ರಮುಖವಾಗಿ 1) ಉಚಿತ ನೇತೃ ತಪಾಸಣಾ ಶಿಬಿರ ಹಾಗೂ ನೇತ್ರದಾನ ಸಂಕಲ್ಪ ನೊಂದಣಿ ಕಾರ್ಯಕ್ರಮ, 2) ದಿವ್ಯಾಂಗರಾದ ಕರ್ನಾಟಿಕ್ ಸಂಗೀತದ ಮಹಾನ್ ವಿದ್ಮಾನ್ ಎಸ್ ಆರ್ ಕೃಷ್ಣಮೂರ್ತಿ ಅವರಿಗೆ ಸನ್ಮಾನ, ಹಾಗೂ 3)ದಿವ್ಯಾಂಗರ ಆಶ್ರಮಕ್ಕೆ ಭೇಟಿ ನೀರಿನ ಶುದ್ಧೀಕರಣ ಘಟಕ ಹಸ್ತಾಂತರ ವಿಶೇಷ ಮಕ್ಕಳೊಂದಿಗೆ ವಿವಿಧ ಚಟುವಟಿಕೆಗಳನ್ನು ಮಾಡುವುದರೊಂದಿಗೆ ಮೂರು ಕಾರ್ಯಕ್ರಮಗಳನ್ನು ಕೈಗೊಳ್ಳಲಾಯಿತು.


ಇಂದಿನ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ್ ಭಟ್ ಕಾಕುಂಚೆ, ಕಾರ್ಯದರ್ಶಿ ಹರೀಶ್ ಪ್ರಭು, ಸಹ ಕಾರ್ಯದರ್ಶಿ ಭಾಸ್ಕರ್ ಹೊಸಮನೆ ಮಹಿಳಾ ತಂಡದ ಸದಸ್ಯರಾದ ಶ್ರೀಮತಿ ಗೀತಾ ಲಕ್ಷ್ಮೀಶ್ ಉಪಸ್ಥಿತರಿದ್ದರು. ಸಕ್ಷಮ ಜಿಲ್ಲಾ ಮಹಿಳಾ ತಂಡದ ಸದಸ್ಯರಾದ ಶ್ರೀಮತಿ ಗೀತಾ ಲಕ್ಷ್ಮೀಶ್ ದಂಪತಿಗಳು ಇಂದು ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಇದೇ ಆಶ್ರಮದಲ್ಲಿ ಆಚರಿಸುವುದರ ಮೂಲಕ ದಿವ್ಯಾಂಗ ಮಕ್ಕಳಿಗೆ ವಿಶೇಷ ಪ್ರೀತಿಯನ್ನು ತೋರಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top