ಆರೋಗ್ಯಧಾರ ಉಚಿತ ಆರೋಗ್ಯ ತಪಾಸಣಾ ಶಿಬಿರ

Upayuktha
0


ಉಡುಪಿ: ಬಾಂಧವ್ಯ ಫೌಂಡೇಶನ್ ಎಸ್.ಡಿ.ಎಂ ನ್ಯಾಚುರೋಪತಿ ಕಾಲೇಜು ಧಮ೯ಸ್ಥಳ ವೈದ್ಯರ ಸಹಯೋಗದಲ್ಲಿ ಬೀಡಿನಗುಡ್ಡೆ ಕಾರ್ಮಿಕರ ಕಾಲನಿಯಲ್ಲಿ ಆರೋಗ್ಯಧಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ಡಿ.22 ಆದಿತ್ಯವಾರ ಅಂಗನವಾಡಿ ವಠಾರದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ನವ್ಯ ಚೇತನ ಶಿಕ್ಷಣ, ಸಂಶೋಧನಾ ಮತ್ತು ಕಲ್ಯಾಣ  ಟ್ರಸ್ಟ್ ಅಧ್ಯಕ್ಷ ಡಾಕ್ಟರ್ ಶಿವಾನಂದ ನಾಯಕ್ ಉದ್ಘಾಟಿಸಿದರು. ಬಹಳಷ್ಟು ಜನ ಕಾರ್ಮಿಕರು ಕೆಲಸದ ಒತ್ತಡದಲ್ಲಿ ತಮ್ಮ ಆರೋಗ್ಯದ ಕಡೆ ಗಮನ ಹರಿಸುತ್ತಿಲ್ಲ. ಈ ರೀತಿ ಶಿಬಿರಗಳಿಂದ ಅವರ ಆರೋಗ್ಯ ತಪಾಸಣೆ ಮಾಡಲು ಅನುಕೂಲವಾಗುತ್ತದೆ. ಆರೋಗ್ಯ ವೇ ಮಹಾಭಾಗ್ಯ ಎಂಬಂತೆ ನಾವೆಲ್ಲರೂ ಕೂಡ ನಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಬೇಕು ಎಂದರು.


ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಅಧ್ಯಕ್ಷ ಸುಂದರ ಪೂಜಾರಿ ಮೂಡುಕುಕ್ಕುಡೆ ಶುಭ ಹಾರೈಸಿದರು. ಬಾಂಧವ್ಯ ಫೌಂಡೇಶನ್‌ನ ದಿನೇಶ್ ಪ್ರಸ್ತಾವನೆಗೈದರು. ವೇದಿಕೆಯಲ್ಲಿ ಎಸ್‌ಡಿಎಂ ನ್ಯಾಚುರೋಪತಿ ಕಾಲೇಜು ಉಜಿರೆ ಧರ್ಮಸ್ಥಳದ ಡಾ. ಲಾವಣ್ಯ, ಡಾ. ಸಹನಾ, ಡಾ. ಅಮ್ಮoಜೆ ಅರುಂಧತಿ ನಾಯಕ್, ಜಯಂಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು, ರಾಜ ಶಂಕರ್, ಶ್ರೀನಾಥ್ ಕೋಟ, ರಾಘವೇಂದ್ರ ಕರ್ವಾಲು, ಪ್ರವೀಣ್ ಪೂಜಾರಿ, ಉಷಾ ಬಸವರಾಜ್ ಕುಲಾಲ್, ಸ್ವೀಕೃತಿ, ಸಂಜನಾ ಪೂಜಾರಿ, ಜಯ ಪೂಜಾರಿ ಮುಂತಾದವರಿದ್ದರು.


ನವ್ಯ ಚೇತನ ಶಿಕ್ಷಣ, ಸಂಶೋಧನಾ ಮತ್ತು ಕಲ್ಯಾಣ ಟ್ರಸ್ಟ್, ಶಿವಾನಿ ಡಯಾಗ್ನೋಸ್ಟಿಕ್ ಸೆಂಟರ್, ಜಯಂಟ್ಸ್ ಗ್ರೂಪ್ ಸಹಕರಿಸಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top