ಮಂಗಳೂರಿನ ಆಟೋಗಳ ಸಮಸ್ಯೆಗೆ ತಮಿಳುನಾಡು ಮಾದರಿ ಅನ್ವಯಿಸಲಿ: ಶಾಸಕ ಕಾಮತ್

Upayuktha
0


ಬೆಳಗಾವಿ: ಮಂಗಳೂರು ನಗರದಲ್ಲಿ ಪರ್ಮಿಟ್ ಆಟೋ ರಿಕ್ಷಾ ಹಾಗೂ ಬ್ಯಾಟರಿ ಚಾಲಿತ ರಿಕ್ಷಾಗಳ ನಡುವಿನ ಗೊಂದಲಕ್ಕೆ ತಮಿಳುನಾಡು ಮಾದರಿ ಸೂತ್ರವನ್ನು ಅನುಸರಿಸುವಂತೆ ಶಾಸಕ ವೇದವ್ಯಾಸ್ ಕಾಮತ್ ರವರು ಬೆಳಗಾವಿಯ ಅಧಿವೇಶನದಲ್ಲಿ ಸದನದ ಗಮನ ಸೆಳೆದರು. 


ನಗರ ಭಾಗದಲ್ಲಿ ಆಟೋಗಳ ನಡುವಿನ ಗೊಂದಲವು ವಿಪರೀತ ಹಂತಕ್ಕೆ ಹೋಗಿದ್ದು ಹಲವು ಪ್ರತಿಭಟನೆಗಳಿಂದ ಪೊಲೀಸ್ ಇಲಾಖೆ, ಆರ್.ಟಿ.ಓ, ಜಿಲ್ಲಾಡಳಿತ ಹಾಗೂ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗುತ್ತಿದೆ. ಈ ಎಲ್ಲಾ ಗೊಂದಲಗಳಿಗೆ ಪರಿಹಾರ ಸೂತ್ರವಾಗಿ ಈ ಹಿಂದೆ ಸ್ವತಃ ರಿಕ್ಷಾ ಚಾಲಕ-ಮಾಲಕ ಎಸೋಸಿಯೇಷನ್‌ಗಳೇ "ತಮಿಳುನಾಡು ಮಾದರಿ"ಗೆ ಬೇಡಿಕೆಯಿಟ್ಟಿದ್ದವು. ಅವರ ಬೇಡಿಕೆಯನುಸಾರ ರಾಜ್ಯ ಸರ್ಕಾರ ಮುಂದಡಿಯಿಟ್ಟರೆ ನಗರ ಭಾಗದಲ್ಲಿ ದಿನನಿತ್ಯ ದುಡಿದು ತಮ್ಮ ಕುಟುಂಬಗಳನ್ನು ಸಲಹುತ್ತಿರುವ ಪ್ರತಿಯೊಬ್ಬ ಶ್ರಮ ಜೀವಿ ರಿಕ್ಷಾ ಚಾಲಕರಿಗೂ ನ್ಯಾಯ ಸಿಗುವ ಭರವಸೆ ಇದೆ. 


ಈ ನಿಟ್ಟಿನಲ್ಲಿ ರಾಜ್ಯ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿಯವರು ತಮಿಳುನಾಡು ಮಾದರಿಯ ವರದಿಯನ್ನು ತರಿಸಿಕೊಂಡು ಕೂಡಲೇ ರಾಜ್ಯಕ್ಕೂ ಅನ್ವಯಿಸುವಂತೆ ಶಾಸಕರು ವಿಶೇಷ ಮನವಿ ಮಾಡಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top