ವಿಶ್ವ ಚೆಸ್ ಗ್ರ್ಯಾಂಡ್ ಮಾಸ್ಟರ್ ಗುಕೇಶ್ ಹೆಸರಿಗೆ ಅನ್ವರ್ಥವಾದ ಸಾಧನೆ

Upayuktha
0


ಇಂದು ವಿಶ್ವದೆಲ್ಲೆಡೆ ಒಂದೇ ಮಾತು ಒಂದೇ ಸುದ್ದಿ ಭಾರತದ ಡಿ. ಗುಕೇಶ್ ವಿಶ್ವ ಚೆಸ್ ಚಾಂಪಿಯನ್. ವಿಶ್ವದ ಹದಿನೆಂಟನೇ ಚೆಸ್ ಪಂದ್ಯಾವಳಿಯಲ್ಲಿ ಹದಿನೆಂಟನೇ ವರುಷದ ಹುಡುಗ ಗುಕೇಶ್ ವಿಶ್ವ ಚೆಸ್ ಚಾಂಪಿಯನ್ ಪಟ್ಟವನ್ನು ತನ್ನಮೂಡಿಗೇರಿಸಿಕೊಂಡಿದ್ದು ಇನ್ನೊಂದು ವಿಶ್ವ ದಾಖಲೆ.


ಗುಕೇಶ್ ಅನ್ನುವ ಹೆಸರೇ ಅಪರೂಪದ ನಾಮ. ಈ ಅಪರೂಪದ ಹೆಸರಿಗ್ಗೊಂದು ಅನ್ವಥ೯ವಾದ ಹೆಸರು ದಾಖಲಿಸಿದ ಕೀರ್ತಿ ತಮಿಳುನಾಡಿನ ಗುಕೇಶ್ ರಿಗೆ ಸಲ್ಲುತ್ತದೆ. ಇದೊಂದು ಈ ಹೆಸರಿನ ಗುಣಾತ್ಮಕ ವಿಶೇಷತೆಯೂ ಹೌದು.


ಗುಕೇಶ್ ಅನ್ನುವ ನಾಮದ ಫಲವೊ ಜಾತಕದ ಫಲವೊ ಗೊತ್ತಿಲ್ಲ. ಅಂತೂ ಈ ಸಾಧನೆ ಹಿಂದೆ "ಗುಕೇಶ್" ಅನ್ನುವ ನಾಮದ ಫಲ ಎದ್ದು ಕಾಣುತ್ತದೆ. ಈ ಸಾಧಕ ವ್ಯಕ್ತಿತ್ವದ ಗುಕೇಶ್ ಹೆಸರಿನಲ್ಲಿ ಸದ್ಗುಣಿ ಅನ್ನುವ ಅಥ೯ವೂ ಇದೆ. ಪೂಣ್ಯ ಅನ್ನುವ ಅಥ೯ವೂ ಬಿಂಬಿತವಾಗುತ್ತದೆ. ಈ ಹೆಸರಿನಲ್ಲಿ ಅಡುಗಿರುವ ಇನ್ನೊಂದು ಕಾರ್ಯಶೀಲತೆ ಅಂದರೆ ತನ್ನ ಕೆಲಸದಲ್ಲಿ ಅಪಾರವಾದ ವಿಶ್ವಾಸ ನಂಬಿಕೆ ಇಟ್ಟವ ಅನ್ನುವ ವಿಶೇಷತೆಯ ಗುಣವೂ ಅಡಗಿದೆ. ಗುಕೇಶ್ ಹೆಸರಿನಲ್ಲಿ  ಗ್ರಹಿಸುವ ಸಾಮರ್ಥ್ಯದಲ್ಲಿ ಇವರನ್ನು ಮೀರಿಸುವವರು ಇಲ್ಲ ಅನ್ನುವ ಅಥ೯ವೂ ಅಡಗಿದೆ. ಮಾತ್ರವಲ್ಲ ಗುಕೇಶ್ ಅನ್ನುವ ಹೆಸರಿನಲ್ಲಿ ಸೃಜನಶೀಲತೆಯೂ ಅಡಗಿದೆ. ಇಷ್ಟೆಲ್ಲಾ ನಾಮ ವಿಶೇಷತೆ ಹೊಂದಿರುವ ಹೆಸರಿನ ಗುಕೇಶ್ ಚೆಸ್ ಆಟದಲ್ಲಿ ವಿಶ್ವವೇ ನಿಬ್ಬೆರಗುವ ಸಾಧನೆ ಮಾಡಿದ ಪ್ರತಿ ಕ್ಷಣ ನೇೂಡುವಾಗ ಗುಕೇಶ್ ಅನ್ನುವ ಹೆಸರೇ ಚೆಸ್ ಆಟಕ್ಕೆ ಅನ್ವರ್ಥವಾಗಿ ಹುಟ್ಟಿಕೊಂಡ ಹೆಸರು ಅನ್ನಿಸುವಂತಿದೆ. ಒಬ್ಬ ಚೆಸ್ ಆಟಗಾರನಿಗೆ ಇರ ಬೇಕಾದ ಎಲ್ಲಾ ಗುಣ ಲಕ್ಷಣಗಳು ಈ ಹೆಸರಿನಲ್ಲಿ ಬಿಂಬಿತವಾಗಿದೆ.


ಯಾವುದೇ ಕ್ರೀಡೆಯಲ್ಲಿ ವಿಶೇಷ ಸಾಧನೆ ಗಳಿಸ ಬೇಕಾದರೆ ಮೊದಲಾಗಿ ಸದ್ಗುಣಿಯಾಗಿರಬೇಕು; ತಾನು ಮಾಡುವ ಕಾರ್ಯದಲ್ಲಿ ಅಚ್ಚಲವಾದ ವಿಶ್ವಾಸ ನಂಬಿಕೆ ಬೆಳೆಸಿಕೊಂಡಿರ ಬೇಕು; ಚೆಸ್ ನಂತಹ ಆಟದಲ್ಲಿ ಗೆಲ್ಲಬೇಕಾದರೆ ತೀಕ್ಷ್ಣವಾದ ಗ್ರಹಿಕ ಸಾಮರ್ಥ್ಯವೂ ಬಹುಮುಖ್ಯವಾದ ಗುಣ. ಚೆಸ್ ಆಟ ಒಂದು ರೀತಿಯಲ್ಲಿ ಸೃಜನಾತ್ಮಕವಾದ ಆಟವೂ ಹೌದು. ಈ ಎಲ್ಲಾ ಗುಣ ಲಕ್ಷಣಗಳು ನಮ್ಮ ಗುಕೇಶ್‌ ವ್ಯಕ್ತಿತ್ವದಲ್ಲಿ ಪಡಿಮೂಡಿ ಬಂದ ಕಾರಣದಿಂದಾಗಿ ಈ ಜಗ ಮೆಚ್ಚುವ ಸಾಧನೆ ಹದಿನೆಂಟರ ಹರೆಯದ ಹುಡುಗನಿಂದ ಸಾಧ್ಯವಾಯಿತು ಅನ್ನಿಸುತ್ತದೆ.


ಆಟ ಮುಗಿಸಿ ವಿಜಯ ಮಾಲೆ ಮೂಡಿಗೆರಿಸುವ ಕೊನೆಯ ಕ್ಷಣದಲ್ಲಿ ನಿಗ೯ಮಿಸುವ ಸಂದರ್ಭದಲ್ಲಿ ತಾನು ಬಳಸಿದ ಕಪ್ಪು ಬಣ್ಣದ ಚೆಸ್ ಕ್ವಾಯಿನ್‌ಗಳನ್ನು ಸರಿಯಾಗಿ ಜೇೂಡಿಸಿ ಹೇೂಗಿದ್ದು ಮಾತ್ರವಲ್ಲ ತನ್ನ ಎದುರಾಳಿ ಸೇೂತು ಬೇಸರದಿಂದ ಹೇೂಗುವಾಗ ತಾನು ಬಳಸಿದ ಬಿಳಿಯ ಚೆಸ್ ಕ್ವಾಯಿನ್ಸ್ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ಮತ್ತೆ ಈತನೇ ಸರಿಯಾಗಿ ಜೇೂಡಿಸಿ ಇಟ್ಟು ಹೇೂಗುವಾಗ ಗುಕೇಶ್ ಚೆಸ್ ಬೇೂಡಿ೯ಗೆ ನಮಸ್ಕರಿಸಿ; ವಿಜಯದ ಆನಂದ ಭಾಷ್ಪವನ್ನು ಭಾವನಾತ್ಮಕವಾಗಿ ದೇವರ ಮುಂದಿಟ್ಟು ನಿಗ೯ಮಿಸಿದ ದೃಶ್ಯ ನಿಜಕ್ಕೂ ಹೃದಯ ಮಿಡಿಯುವಂತಿತ್ತು. ಅಂತೂ ನಮ್ಮೆಲ್ಲರ ಹೆಮ್ಮೆಯ ವಿಶ್ವ ಚೆಸ್ ಸಾಧಕ ಗುಕೇಶ್‌ ನಡೆ ನುಡಿ ಶಿಸ್ತು ವಿಶ್ವಾಸ ನಮ್ಮೆಲ್ಲ ಯುವ ಪೀಳಿಗೆಗೆ ಪ್ರೇರಣಾ ಶಕ್ತಿಯಾಗಲಿ ಅನ್ನುವುದು ನಮ್ಮೆಲ್ಲರ ಆಶಯವೂ ಹೌದು.


-ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top