ಆಳ್ವಾಸ್ ವಿರಾಸತ್ ಸಮಾಪನ: ಭಾಗವಹಿಸಿದ ಸರ್ವರಲ್ಲೂ ‘ಅದ್ಭುತ ಅತ್ಯದ್ಭುತ’ ಉದ್ಗಾರ

Upayuktha
0

 



ಮೂಡುಬಿದಿರೆ: 30ನೇ ಆಳ್ವಾಸ್ ವಿರಾಸತ್ 5 ದಿನಗಳ ಸಾಂಸ್ಕೃತಿಕ ಉತ್ಸವ ಹಾಗೂ 6 ದಿನವೂ ನಡೆದ ಮಹಾಮೇಳ ಲಕ್ಷಾಂತರ ಜನರ ಪಾಲ್ಗೊಳ್ಳುವಿಕೆಯ ಮೂಲಕ ಆಯೋಜಕರು ಹಾಗೂ ಸಾರ್ವಜನಿಕರಲ್ಲಿ ಸರ್ವ ಶ್ರೇಷ್ಠ ವಿರಾಸತ್ ಎಂಬ ಭಾವ ಮೂಡಿಸಿ ಸಮಾಪನವಾಯಿತು.

ವಿರಾಸತ್‌ನ ಮುಖ್ಯ ರೂವಾರಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಹರ್ಷ ವ್ಯಕ್ತಪಡಿಸಿ, ಈ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಕೃತಜ್ಞತೆ ವ್ಯಕ್ತಪಡಿಸಿದರು.


ಪ್ರತಿ ವರ್ಷದಂತೆ ಈ ವರ್ಷದ ವಿರಾಸತ್  ಕೂಡ ಸರ್ವ ಶ್ರೇಷ್ಠ ಸಾಂಸ್ಕೃತಿಕ ಉತ್ಸವವಾಗಿ ಮೂಡಿಬಂದಿದ್ದು, ದೇವರ ಹಾಗೂ ಪ್ರಕೃತಿಯ ಸಂಪೂರ್ಣ ಅನುಗ್ರಹ ಕಾರ್ಯಕ್ರಮ ಯಶಸ್ಸಿಗೆ ಕಾರಣ. ಈ ಉತ್ಸವ ಎಲ್ಲಾ ವರ್ಗದ ಜನರು - ಮಕ್ಕಳು, ಯುವಕ ಯುವತಿಯರು, ಪ್ರಬುದ್ಧರು, ವಯೋವೃದ್ಧರಾಧಿಯಾಗಿ ಸರ್ವರನ್ನು ಆಕರ್ಷಿಸಿ, ಪಾಲ್ಗೊಳ್ಳುವಂತೆ ಮಾಡಿದೆ. ಭಾಗವಹಿಸಿದ ಎಲ್ಲರೂ ಮುಕ್ತ ಕಂಠದಿಂದ ಶ್ಲಾಘಿಸಿದ್ದು, ಅದ್ಭುತ ಎಂಬ ಉದ್ಗಾರದ ಭಾವ ಮೂಡಿಸಿರುವುದು ಸಂಘಟಕರಾದ ನಮಗೆ ಸಂಪೂರ್ಣ ತೃಪ್ತಿ ನೀಡಿದೆ. ಈ ಕಾರ್ಯಕ್ರಮ ಯಾವುದೇ ಒಂದು ಸಮುದಾಯದ ಕಾರ್ಯಕ್ರಮವಾಗದೇ ಎಲ್ಲಾ ವರ್ಗಗಳ, ಎಲ್ಲಾ ಸಮುದಾಯದ ಜನರನ್ನು ಕಾರ್ಯಕ್ರಮದತ್ತ ಸೆಳೆದದ್ದು, ಇದರ ಇನ್ನೊಂದು ವಿಶೇಷತೆ. ಆರು ದಿನದ ಕಾರ್ಯಕ್ರಮದಲ್ಲಿ ಪ್ರತಿ ದಿನ ಸುಮಾರು ಒಂದು ಲಕ್ಷದಂತೆ ಜನ ಭಾಗವಹಿಸಿದರೆ, ಶನಿವಾರ ಹಾಗೂ ಭಾನುವಾರ ಜನಸ್ತೋಮ ಲಕ್ಷಕ್ಕೂ ಮೀರಿತ್ತು. ಒಟ್ಟು ಕಾರ್ಯಕ್ರಮ 4000ಕ್ಕೂ ಅಧಿಕ ಕಲಾವಿದರಿಗೆ ವೇದಿಕೆಯಾಗಿ, ಪ್ರತೀ ದಿನ ಸರಾಸರಿ 1500 ದಷ್ಟು ಕಲಾವಿದರು ತಮ್ಮ ಪ್ರತಿಭೆ ವ್ಯಕ್ತ ಪಡಿಸಲು ವೇದಿಕೆಯಾಗಿ ಮೂಡಿ ಬಂತು.



ಜಾತಿ ಧರ್ಮ ಮತ ಹಾಗೂ ರಾಜಕೀಯ ಹಿನ್ನಲೆ ಹಾಗೂ ಮೋಜಿನ ಕರ‍್ಯಕ್ರಮಗಳಿಗೆ ಜನ ಸೇರುವುದು ಮಾಮೂಲಿ. ಆದರೆ ಸಾಂಸ್ಕೃತಿಕ ಹಿನ್ನಲೆಯಲ್ಲಿ ಈ ಪರಿಯ ಜನ ಸೇರುವುದು, ಹರ್ಷ ವ್ಯಕ್ತಪಡಿಸುವುದು ವಿರಳಾತಿ ವಿರಳ. ಈ ಹಿನ್ನಲೆಯಲ್ಲಿ  ಸಂಘಟಕರಾದ ನಮಗೆ ಮುಂದಿನ ವರ್ಷದ ಕಾರ್ಯಕ್ರಮವನ್ನು ಇನ್ನೂ ಹೆಚ್ಚಿನ ನಿರೀಕ್ಷೆಯನ್ನು ಈಡೇರಿಸುವಂತೆ ಮಾಡಿದೆ ಎಂದು ಡಾ. ಆಳ್ವ ತಿಳಿಸಿದರು.  


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ  ಪ್ರತಿ ಕಾರ್ಯಕ್ರಮದಲ್ಲೂ ಸ್ವಚ್ಛತೆಗೆ ಅತೀ ಹೆಚ್ಚಿನ ಒತ್ತು ನೀಡಲಾಗುತ್ತದೆ.  ಅಂತೆಯೇ ಈ ಭಾರಿಯ ವಿರಾಸತ್‌ನಲ್ಲೂ ಸ್ಚಚ್ಛತಾ ಸೇನಾನಿಗಳು ರಾತ್ರಿ ಹಗಲು ಪಾಳಿಯಲ್ಲಿ ಕೆಲಸ ನಿರ್ವಹಿಸಿದ್ದು, ಕಾರ್ಯಕ್ರಮ ಮುಗಿದ 15ರಂದೆ ಇಡೀ ಆಳ್ವಾಸ್ ಆವರಣವನ್ನು ಸ್ವಚ್ಚಗೊಳಿಸಲಾಗಿದ್ದು, ಆರು ದಿನದ ಕಾರ್ಯಕ್ರಮದಲ್ಲಿ  ಲಕ್ಷಾಂತರ ಜನ ಸೇರಿದ್ದ ಜಾಗವೆಂದು ಊಹಿಸಲಾಗದಷ್ಟು ಪರಿಸರವನ್ನು ಸ್ವಸ್ಥಿತಿಗೆ ತರಲಾಗಿದೆ. ಪ್ರತಿ ಬಾರಿಯಂತೆ ಈ ಬಾರಿಯ ವಿರಾಸತ್  ಸಾವಿರಾರು ಸಂದೇಶವನ್ನು ಜಗತ್ತಿಗೆ ನೀಡಿದ್ದು, ಪ್ರತಿಯೊಬ್ಬರ ಮುಖದಲ್ಲೂ ಆತ್ಮ ತೃಪ್ತಿಯ ಭಾವ ಮೂಡಿಸಿದೆ. ಕರ್ನಾಟಕ ರಾಜ್ಯಕ್ಕೆ ಶ್ರೇಷ್ಠವೆಂಬಂತೆ ನಡೆದ ಕಾರ್ಯಕ್ರಮ ಸಾರ್ವಜನಿಕರಿಗೆ ಸಂಪೂರ್ಣ ಉಚಿತವಾಗಿದ್ದು, ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರಲ್ಲೂ ವ್ಹಾವ್ ಎನ್ನುವಂತ ಉದ್ಗಾರ ಮೂಡಿಸಿದೆ.  ಇಲ್ಲಿವರೆಗೆ ನಡೆದೆ ಎಲ್ಲಾ ವಿರಾಸತ್‌ನಲ್ಲೂ ಪಾಲು ಪಡೆದ ಸಾವಿರಾರು ಜನರು 30ನೇ ಆಳ್ವಾಸ್ ವಿರಾಸತ್‌ನಲ್ಲೂ ಸಂತೋಷದಿಂದ ತಮ್ಮ ಮನೆಯ ಕಾರ್ಯಕ್ರಮದಂತೆ ಪಾಲ್ಗೊಂಡರು. ಇಷ್ಟು ದೊಡ್ಡ ಸಂಖ್ಯೆಯ ಜನಸಮೂಹ ಸೇರಿದರು ಯಾರೊಬ್ಬರಿಗೂ ಕಿಂಚಿತ್ತೂ ತೊಂದರೆಯಾಗದಂತೆ ಸಾಂಗವಾಗಿ ನಡೆದದ್ದು ಖುಷಿ ಕೊಟ್ಟಿದೆ ಎಂದು ಡಾ ಮೋಹನ್ ಆಳ್ವ ಹೇಳಿದರು.

ಈ ಬಾರಿ, ವಿರಾಸತ್‌ಗಾಗಿ  ವಿದ್ಯಾಗಿರಿ ಹಾಗೂ ಪುತ್ತಿಗೆ ಪ್ರವೇಶಿಸಲಿರುವ 8 ಮಾರ್ಗಗಳನ್ನು ಡಾಂಬರೀಕರಣ ಹಾಗೂ ಅಗಲೀಕರಣಗೊಳಿಸಿ, ಬರುವ ಪ್ರತಿಯೊಬ್ಬರಿಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.  ಸರಿಸುಮಾರು 2000ಕ್ಕೂ ಅಧಿಕ ಜನರು ವಿರಾಸತ್‌ಗಾಗಿ ದುಡಿದಿದ್ದು, ಎಲ್ಲವೂ ಸುಸೂತ್ರವಾಗಿ ನೆರೆವೇರಲು ಸಹಕರಿಸಿದ್ದಾರೆ.  ಇದರ ಜೊತೆಗೆ ನಡೆದ ಸ್ಕೌಟ್ಸ್ ಮತ್ತು ಗೈಡ್ಸ್ ರೋವರ್ಸ್ ಮತ್ತು ರೇಂಜರ್ಸ್ ರಾಜ್ಯ ಮಟ್ಟದ ಸಾಂಸ್ಕೃತಿಕ ಉತ್ಸವವು 1500 ವಿದ್ಯಾರ್ಥಿಗಳು ಪಾಲ್ಗೊಂಡು ಸ್ಕೌಟ್ಸ್‌ಗಳಲ್ಲಿ ಹೊಸ ಹುಮ್ಮಸ್ಸನ್ನು ಮೂಡಿಸಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top