ನಾಳೆ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದಲ್ಲಿ ಕ್ರಿಸ್ಮಸ್ ಹಬ್ಬ

Upayuktha
0


ಮಂಗಳೂರು: ಅಖಿಲ ಭಾರತೀಯ ಕೊಂಕಣಿ ಚಾರೊಳಿ ಸಾಹಿತ್ಯ ಪರಿಷದ್ ವತಿಯಿಂದ ಸಂತ ಅಲೋಶಿಯಸ್  ಪರಿಗಣಿತ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಡಿಸೆಂಬರ್ 14ರಂದು ಕ್ರಿಸ್ಮಸ್ ಹಬ್ಬ 


ಅಖಿಲ ಭಾರತೀಯ ಕೊಂಕಣಿ ಚಾರೊಳಿ ಸಾಹಿತ್ಯ ಪರಿಷದ್ ವತಿಯಿಂದ ಸಂತ ಅಲೋಶಿಯಸ್  ಪರಿಗಣಿತ ವಿಶ್ವವಿದ್ಯಾನಿಲಯದ  ಸಹಯೋಗದಲ್ಲಿ  ಕಾಲೇಜು ಆವರಣದಲ್ಲಿ ಶನಿವಾರ ಡಿಸೆಂಬರ್ 14ರಂದು  ಮಧ್ಯಾಹ್ನ 2 ಗಂಟೆಗೆ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಸಿಹಿತಿಂಡಿಗಳ ದಿನವನ್ನು ಆಚರಿಸಲಾಗುತ್ತದೆ ಎಂದು ಅಧ್ಯಕ್ಷ ರೇಮಂಡ್ ಡಿಕೂನಾ ತಾಕೊಡೆ ತಿಳಿಸಿದ್ದಾರೆ.


ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿ ರೆವರೆಂಡ್ ಫಾದರ್ ಡಾಕ್ಟರೇಟ್ ಪ್ರವೀಣ ಮಾರ್ಟಿಸ್ ಅವರು ಸಮಾನ ಮನಸ್ಕ  ಹಲವಾರು ಸಂಘಟನೆಗಳ ಜೊತೆಯಲ್ಲಿ ಕೇಕ್ ಕತ್ತರಿಸಿ ಕ್ರಿಸ್ಮಸ್ ಸಂದೇಶ ನೀಡುವರು .


ಸಂತ ಅಲೋಶಿಯಸ್ ಕಾಲೇಜು ವಿದ್ಯಾರ್ಥಿಗಳು ಯೇಸುವಿನ ಜನನ, ಸಾಂತಕ್ಲೊಸ್, ಕೇರಲ್ಸ್, ಸಾಧರಪಡಿಸುವರು.


ಕ್ರಿಸ್ಮಸ್ ಸಿಹಿತಿಂಡಿ ಕುಸ್ವಾರ್ ಎಲ್ಲಾ ಉಪಸ್ಥಿತರಿಗೆ ಹಂಚಿಕೆ ಮಾಡಿ ಸ್ನೇಹ, ಬಂದುತ್ವ, ಸಹನೆ ಸಿಹಿ ಕೂಟ ಆಚರಣೆ ಮಾಡುವರು.


ಜೊತೆಯಲ್ಲಿ  ಭಾರತೀಯ 20 ಭಾಷೆಗಳಲ್ಲಿ ಕ್ರಿಸ್ಮಸ್ ಬಗ್ಗೆ ಚಾರೊಳಿಯನ್ನು ವಿದ್ಯಾರ್ಥಿಗಳು ಸಾಧಾರಪಡಿಸುವರು.


ಬಹು ಭಾಷಾ ಕವಿಗೋಷ್ಟಿಯೂ ನಡೆಯುವುದು ಎಂದು ತಿಳಿಸಿದ್ದಾರೆ.



   ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top