ನಿಟ್ಟೆಯಲ್ಲಿ ಮಹಿಳಾ ಎಐ ಹ್ಯಾಕಥಾನ್ ಓರಿಯಂಟೇಶನ್

Upayuktha
0
ಡೆವ್ ರೆವ್ ಕಂಪೆನಿ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮ




ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನ.೧೮ ರಿಂದ ವಿದ್ಯಾರ್ಥಿನಿಯರಿಗಾಗಿ ಡೆವ್ ರೆವ್ ಹಾಗೂ ಜಿಆರ್-ಎಐ-ಸಿಇ ಕಂಪೆನಿ ಆಯೋಜಿಸಿದ 2 ವಾರಗಳ ಮಹಿಳಾ ಎಐ ಹ್ಯಾಕಥಾನ್ ಈವೆಂಟ್ ನ ಓರಿಯಂಟೇಶನ್ ಮತ್ತು ಇಂಡಕ್ಷನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ನಿಟ್ಟೆ ತಾಂತ್ರಿಕ ಕಾಲೇಜು, ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಎಂಜಿನಿಯರಿಂಗ್ ಮತ್ತು ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. 


ಡೆವ್ ರೆವ್ ನ 12 ಮಂದಿ ನುರಿತ ತರಬೇತುದಾರರ ತಂಡವು ನಿಟ್ಟೆ ಕ್ಯಾಂಪಸ್ ಗೆ ಬಂದು ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ಓರಿಯಂಟ್ ಮಾಡುವ ಮೂಲಕ ಮತ್ತು ಭಾಗವಹಿಸುವವರಿಗೆ ಪ್ರಾಬ್ಲೆಮ್ ಸ್ಟೇಟ್ಮೆಂಟ್ ನೀಡುವ ಮೂಲಕ ಹ್ಯಾಕಥಾನ್ ಗೆ ಚಾಲನೆ ನೀಡಿದರು.


ಹ್ಯಾಕಥಾನ್ ನ ವಿಜೇತರನ್ನು ಡಿಸೆಂಬರ್ ನಲ್ಲಿ ಘೋಷಿಸಲಾಗುವುದು ಮತ್ತು ವಿಜೇತರು ಆಕರ್ಷಕ ನಗದು ಬಹುಮಾನಗಳನ್ನು ಮತ್ತು ಡೆವ್ ರೆವ್ ಅವರೊಂದಿಗೆ ಇಂಟರ್ನ್ ಶಿಪ್ ಗೆ ಅವಕಾಶವನ್ನು ಪಡೆಯುತ್ತಾರೆ. ಕೌನ್ಸೆಲಿಂಗ್, ವೆಲ್ಫೇರ್, ಟ್ರೈನಿಂಗ್ ಮತ್ತು ಪ್ಲೇಸ್ಮೆಂಟ್ ವಿಭಾಗದ ಮುಖ್ಯಸ್ಥ ಭರತ್ ಜಿ ಕುಮಾರ್ ಅವರು ಡೆವ್ ರೆವ್ ತಂಡವನ್ನು ಸ್ಪರ್ಧಿಗಳಿಗೆ ಪರಿಚಯಿಸಿದರು ಸ್ವಾಗತಿಸಿದರು. ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಲುಂಕರ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಹ್ಯಾಕರ್ ಅರ್ತ್ ಕ್ಲಬ್ ಕಾರ್ಯಕ್ರಮವನ್ನು ಆಯೋಜಿಸಿತ್ತು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top