ಗೋವಿಂದದಾಸ ಕಾಲೇಜಿನಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟನೆ

Upayuktha
0


ಸುರತ್ಕಲ್‌: ಎಪ್ಪತ್ತೈದು ವರ್ಷತುಂಬಿದ ಭಾರತದ ಸಂವಿಧಾನವು ದೇಶದ ನಾಡಿಮಿಡಿತವಾಗಿ ಮುನ್ನಡೆಯುತ್ತಿದೆ. ಸಮಗ್ರ ಭಾರತದ ಸರ್ವೋನ್ನತಿಯ ಪ್ರತೀಕವಾದ ಭಾರತದ ಸಂವಿಧಾನವು ಪ್ರಜಾವರ್ಗದ ನೆಮ್ಮದಿಯ ಸಂಘಟಿತ ಬದುಕಿನ ಆಶಯದ ಭದ್ರನೆಲೆಯಾಗಿ ರೂಪುಗೊಂಡಿದೆ. ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ನಿಖರ ವ್ಯಾಖ್ಯಾನವನ್ನು ನೀಡಿದ ಭಾರತದ ಸಂವಿಧಾನವನ್ನು ವಿದ್ಯಾರ್ಥಿಗಳು ಅಭ್ಯಾಸಿಸಬೇಕು ಎಂದು ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾನಿಲಯ, ನವ ದೆಹಲಿ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ವಲೆರಿಯನ್‌ ರೋಡ್ರಿಗಾಸ್ ನುಡಿದರು. ಅವರು ಭಾರತದಲ್ಲಿ ಸಂವಿಧಾನ ಅಂಗೀಕರಿಸಿದ 75ನೇ ವರ್ಷಾಚರಣೆಯ ಅಂಗವಾಗಿ ಹಿಂದು ವಿದ್ಯಾದಾಯಿನೀ ಸಂಘ (ರಿ), ಸುರತ್ಕಲ್‌ನ ಆಡಳಿತಕ್ಕೊಳಪಟ್ಟ ಗೋವಿಂದದಾಸಕಾಲೇಜು, ಸುರತ್ಕಲ್‌ನ ಆಂತರಿಕ ಗುಣಮಟ್ಟ ಖಾತರಿ ಕೋಶ, ಮಾನವ ಹಕ್ಕುಗಳ ವೇದಿಕೆ, ಮಾನವಿಕ ವಿಭಾಗ, ಗ್ರಾಹಕ ಹಕ್ಕುಗಳು ಮತ್ತು ಮಹಿಳಾ ವೇದಿಕೆ ಮತ್ತು ಮಾನವ ಹಕ್ಕುಗಳ ಹೋರಾಟಗಾರ ಜಸ್ಟಿಸ್ ಸುರೇಶ್ ಹೊಸಬೆಟ್ಟು ದತ್ತಿನಿಧಿ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ‘ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯ’ ವಿಷಯದ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ತಮ್ಮ ದಿಕ್ಸೂಚಿ ಭಾಷಣದಲ್ಲಿ ನುಡಿದರು.


ಮುಖ್ಯ ಅತಿಥಿ ಹಿಂದು ವಿದ್ಯಾದಾಯಿನೀ ಸಂಘ (ರಿ), ಸುರತ್ಕಲ್‌ನ ಅಧ್ಯಕ್ಷ  ಹೆಚ್.ಜಯಚಂದ್ರ  ಹತ್ವಾರ್ ಮಾತನಾಡಿ ಜಸ್ಟಿಸ್ ಸುರೇಶ್ ಹೊಸಬೆಟ್ಟು ವಿದ್ಯಾದಾಯಿನೀ ಶಿಕ್ಷಣ ಸಂಸ್ಥೆಗಳ ಹಳೆ ವಿದ್ಯಾರ್ಥಿ ಹಾಗೂ ಕೊಡುಗೈದಾನಿಯಾಗಿದ್ದರು. ಮಾನವ ಹಕ್ಕುಗಳಿಗಾಗಿ ಅವರು ನಡೆಸಿದ ಹೋರಾಟಗಳು ಎಲ್ಲರಿಗೂ ಪ್ರೇರಣೆಯಾಗಿದೆ ಎಂದರು.


ಗೌರವ ಅತಿಥಿ ಕಾಲೇಜಿನ ಆಡಳಿತಾತ್ಮಕ ನಿರ್ದೆಶಕ ಪ್ರೊ.ಗೋಪಾಲ ಎಂ.ಗೋಖಲೆ ಶುಭ ಹಾರೈಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ.ಕೃಷ್ಣಮೂರ್ತಿ ಪಿ. ಎಪ್ಪತ್ತು ವರ್ಷಗಳ ಸಂವಿಧಾನಿಕ ಭಾರತದಲ್ಲಿ ಯುವ ಸಮುದಾಯಗಳಲ್ಲಿ  ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಸಂದರ್ಭದಲ್ಲಿ ಮಾನವ ಹಕ್ಕುಗಳು ಮತ್ತು ಸಾಂವಿಧಾನಿಕ ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸುವಲ್ಲಿಕಾರ್ಯ ಪ್ರವೃತ್ತರಾಗಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.


ಕಾರ್ಯಕ್ರಮ ಸಂಯೋಜಕಿ ಡಾ.ಆಶಾಲತಾ ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಆಂತರಿಕ ಗುಣಮಟ್ಟ ಖಾತರಿಕೋಶದ ಸಂಯೋಜಕ ಪ್ರೊ. ಹರೀಶಆಚಾರ್ಯ ಪಿ. ಸ್ವಾಗತಿಸಿದರು.  ಉಪನ್ಯಾಸಕ ಡಾ.ಸಂತೋಷ್ ಆಳ್ವ ಕಾರ್ಯಕ್ರಮ ನಿರೂಪಿಸಿದರು. ಗ್ರಾಹಕ ವೇದಿಕೆಯ ಸಂಯೋಜಕಿ ದಯಾ ಸುವರ್ಣ ವಂದಿಸಿದರು.


ಭಾರತದ ಸಂವಿಧಾನ ಪೀಠಿಕೆಯನ್ನು ಪಠಿಸಿ ಪ್ರತಿಜ್ಞೆಯನ್ನು ಸ್ವೀಕರಿಸಲಾಯಿತು.


ಪ್ರಥಮ ಗೋಷ್ಠಿಯಲ್ಲಿ ಭಾರತದ ಮಂಗಳಮುಖಿಯರ ಹಕ್ಕುಗಳು- ವಿಶೇಷ ಉಲ್ಲೇಖದೊಂದಿಗೆ ಮಾನವ ಹಕ್ಕುಗಳು ಮತ್ತು ಲಿಂಗತ್ವ ನ್ಯಾಯದಕುರಿತು ಸ್ವತಂತ್ರ ಸಂಶೋಧಕಿ ಡಾ.ರೇಷ್ಮಾ ಉಲ್ಲಾಳ್ ಪ್ರಬಂಧ ಮಂಡನೆಮಾಡಿದರು. ಮಂಗಳಮುಖಿ ಸಾಮಾಜಿಕ ಕಾರ್ಯಕರ್ತೆ ಡಾ.ಅರುಂಧತಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಉಪನ್ಯಾಸಕಿ ಡಾ.ಸುಧಾಯು. ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.


ದ್ವಿತೀಯ ಗೋಷ್ಠಿಯಲ್ಲಿ ವಿದ್ಯಾರ್ಥಿನಿಯರಾದ ಸ್ಮಿತಾ ಸಿ. ಮತ್ತು ಜುವೇರಿಯಾ ನಾಸಿರ ಭಾರತದಲ್ಲಿ ಮಕ್ಕಳ ಹಕ್ಕುಗಳು ಮತ್ತು ಸವಾಲುಗಳ ಕುರಿತು, ಹಿತಾ ಉಮೇಶ್ ಭಾರತದಲ್ಲಿ ಮಹಿಳೆಯರ ಹಕ್ಕುಗಳು : ಸಮಸ್ಯೆಗಳು ಮತ್ತು ಸಾಧ್ಯತೆಗಳ ಕುರಿತು, ಸುಶ್ಮಿತಾ ಬ್ರಹ್ಮಶ್ರೀ ನಾರಾಯಣಗುರು ಮತ್ತು ಸಾಮಾಜಿನ ನ್ಯಾಯದ ಕುರಿತು, ವರ್ಷಿತಾ ಎಸ್. ಮಾನವ ಹಕ್ಕುಗಳು ಮತ್ತು ಪರಿಸರದ ಕುರಿತು ಪ್ರಬಂಧಗಳನ್ನು ಮಂಡಿಸಿದರು. ಶಮಾ ಫರ್ಹಾನ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.


ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸೌಮ್ಯ ಪ್ರವೀಣ್ ಕೆ.,  ಗೋವಿಂದದಾಸ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಲಕ್ಷ್ಮೀ ಪಿ, ಮಹಿಳಾ ವೇದಿಕೆಯ ಸಂಯೋಜಕಿ ಶ್ರೀದೇವಿ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಅಕ್ಷತಾ ವಿ. ಮತ್ತು ಡಾ. ಭಾಗ್ಯಲಕ್ಷ್ಮೀ ಎಂ., ಸ್ಟಾಫ್ ಅಸೋಸಿಯೇನ್‌ನ ಕಾರ್ಯದರ್ಶಿ ಗೀತಾ ಕೆ., ಇತಿಹಾಸ ಉಪನ್ಯಾಸಕಿ ಡಾ. ವಿಜಯಲಕ್ಷ್ಮೀ, ಗೋವಿಂದದಾಸ ಕಾಲೇಜು ಅಲುಮ್ನಿ ಅಸೋಸಿಯೇಶನ್‌ನ ಸದಸ್ಯೆ ಗೀತಾ ಸುರತ್ಕಲ್, ಗೋವಿಂದದಾಸ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿಯರಾದ ಶುಭ, ಲೀಲಾವತಿ, ಶೈಲಜಾ ಉಪಸ್ಥಿತರಿದ್ದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
To Top