ಅನ್ನಪೂರ್ಣ ತುಕಾರಾಮ್ ಪರ ಮುಖ್ಯಮಂತ್ರಿ ಸಿದ್ದರಾಮಯ್ಯ ಭರ್ಜರಿ ಪ್ರಚಾರ

Chandrashekhara Kulamarva
0

ಮೂರೂ ಉಪಚುನಾವಣೆಯಲ್ಲೂ ನಾವೇ ಗೆಲ್ಲುತ್ತೇವೆ



ಸಂಡೂರು: ಈಗ ಉಪಚುನಾವಣೆ ನಡೆಯುತ್ತಿರುವ ಮೂರೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಜಯಭೇರಿ ಬಾರಿಸುತ್ತಾರೆ. ನಾನು ಮೂರೂ ಕ್ಷೇತ್ರಗಳಲ್ಲಿ ಓಡಾಡಿ ಬಂದಿದ್ದೇನೆ. ನನಗೆ ಆತ್ಮವಿಶ್ವಾಸ ಇದೆ.  ಮೂರೂ ಉಪ ಚುನಾವಣೆಯಲ್ಲೂ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದರು.  ಸಂಡೂರು ವಿಧಾನಸಭಾ ಕ್ಷೇತ್ರದ ಕೃಷ್ಣಾನಗರ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.   


ಕೃಷ್ಣಾನಗರ ಒಂದರಲ್ಲೇ ಕಾಂಗ್ರೆಸ್ಸಿಗೆ ನಾಲ್ಕು ಸಾವಿರ ಮತಗಳು ಲೀಡ್ ಬರಬೇಕು. ಇದು ಸಂತೋಷ್ ಲಾಡ್ ಅವರ ಊರು. ಲಾಡ್ ಅವರ ಮನೆಯೂ ಇಲ್ಲೇ ಇದೆ. ಸಂಡೂರು ಕಾಂಗ್ರೆಸ್ಸಿನ ಭದ್ರ ಕೋಟೆ. ಆದ್ದರಿಂದ ಕಾಂಗ್ರೆಸ್‌ ಗೆಲುವು ಸಾಧಿಸಬೇಕು ಎಂದರು. 


ತುಕಾರಾಮ್ ಅವರ ಜೊತೆ ಈಗ ಅನ್ನಪೂರ್ಣಮ್ಮ ಅವರನ್ನೂ ಗೆಲ್ಲಿಸಿಕೊಂಡರೆ ಸಂಡೂರಿನ ಅಭಿವೃದ್ಧಿಯ ವೇಗ ಹೆಚ್ಚಲಿದೆ ಎಂದು ವಿವರಿಸಿದರು.  ಮುಖ್ಯಮಂತ್ರಿಗಳು ಅನ್ನಪೂರ್ಣ ಅವರ ಪರವಾಗಿ ಸುಶೀಲನಗರದಲ್ಲಿಯೂ ಮತಯಾಚನೆ ಮಾಡಿದರು.


Post a Comment

0 Comments
Post a Comment (0)
To Top