ಉಡುಪಿ: ರಾಗ ಧನ ಉಡುಪಿ (ರಿ) ಸಂಸ್ಥೆಯ ರಾಗರತ್ನಮಾಲಿಕೆ-31, 'ಗೃಹಸಂಗೀತ'- 'ರಂಜನಿ ಸಂಸ್ಮರಣೆ' ಸಂಗೀತ ಕಛೇರಿಯು ನವೆಂಬರ್ 24, 2024 ಆದಿತ್ಯವಾರ, ಪರ್ಕಳದ ಕುಕ್ಕುದಕಟ್ಟೆಯ 'ಸರಿಗಮ ಭಾರತಿ' ವೇದಿಕೆಯಲ್ಲಿ ಸಂಜೆ 3:00 ರಿಂದ 6.00ರವರೆಗೆ ನಡೆಯಲಿದೆ. ವಿದ್ವಾನ್ ಹೆಮ್ಮಿಗೆ ಎಸ್. ಪ್ರಶಾಂತ್ ಅವರಿಂದ ಹಾಡುಗಾರಿಕೆ. ಇವರಿಗೆ ವಿದುಷಿ ಶ್ರೀಮತಿ ಚಾರುಲತಾ ರಾಮಾನುಜಂ ಅವರು ವಯೊಲಿನ್ ಹಾಗೂ ಸುನಾದಕೃಷ್ಣ ಅಮೈ ಮೃದಂಗದಲ್ಲಿ ಸಹಕರಿಸಲಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ತಿಳಿಸಿರುತ್ತಾರೆ.
ಸಂಪರ್ಕ 99641 40601.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ