ಕವನ: ನೀನೇ ನೀನಲ್ಲ..!

Upayuktha
0


    


ಭಾಷೆ ನಿನದಲ್ಲ ಲಿಪಿ ನಿನದಲ್ಲ

ಕೂಡಿಸಿ ಬರೆದ ಸೆಲೆಯಷ್ಟೆ ನಿನದು

ನಾನೇ ಮಿಗಿಲೆಂಬ ಮದವೇಕೋ.?


ಹೂವು ನಿನ್ನದಲ್ಲ ದಾರ ನಿನ್ನದಲ್ಲ

ಪೋಣಿಸುವ ಕಲೆಯಷ್ಟೆ ನಿನದು

ನಾನೇ ಹಾರವೆಂಬ ಜಂಭವೇಕೋ?


ಶೃಂಗ ನಿನದಲ್ಲ ಹಾದಿ ನಿನದಲ್ಲ

ಏರಿದಾ ನಡೆಯಷ್ಟೆ ನಿನದು

ನಾನೇ ಶಿಖರವೆಂಬ ಹುಂಬತನವೇಕೋ?


ಪಾಯ ನಿನದಲ್ಲ ಸೂರು ನಿನದಲ್ಲ

ನಡುವಿನ ಬದುಕಷ್ಟೆ ನಿನದು

ಸೌಧವೇ ನನದೆಂಬ ಮೌಢ್ಯವೇಕೋ?


ಭೂತ ನಿನದಲ್ಲ ಭವಿಷ್ಯ ನಿನದಲ್ಲ

ಈದಿನ ಈಕ್ಷಣವಷ್ಟೆ ನಿನದು

ನಾನೇ ಅಮರನೆಂಬ ಜಾಡ್ಯವೇಕೋ?


ಕಾಲ ನಿನದಲ್ಲ ಕಾಯ ನಿನದಲ್ಲ

ನಾಲ್ಕುದಿನದ ಉಸಿರಷ್ಟೆ ನಿನದು

ನಾನೇ ಸ್ಥಿರವೆಂಬ ಭ್ರಾಂತಿಯೇಕೋ?


ಬತ್ತಿ ನಿನದಲ್ಲ ತೈಲ ನಿನದಲ್ಲ

ಹೊತ್ತಿಸಿದ ಕಿಡಿಯಷ್ಟೆ ನಿನದು

ನಾನೇ ಬೆಳಕೆಂಬ ಭ್ರಮೆಯೇಕೋ?


ಆಚೆ ನೀನಿಲ್ಲ ಈಚೆಯೂ ನೀನಿಲ್ಲ

ನಿನ್ನೊಳಗಿನ ನೀನೇ ನೀನಲ್ಲ

ನಾನು ನನದೆಂಬ ಭುಕ್ತಿಯೇಕೋ?


- ಎ.ಎನ್.ರಮೇಶ್. ಗುಬ್ಬಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

Post a Comment

0 Comments
Post a Comment (0)
To Top