ನವೆಂಬರ್ 7 : ದ.ಕ ಜಿಲ್ಲೆಗೆ ಕನ್ನಡ ರಥ ಆಗಮನ

Chandrashekhara Kulamarva
0


ಮಂಗಳೂರು:
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯದಲ್ಲಿ ಡಿಸೆಂಬರ್ 20ರಿಂದ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಅರಿವು ಮೂಡಿಸುವ ದೃಷ್ಟಿಯಿಂದ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆ ರಾಜ್ಯಾದ್ಯಂತ ಸಂಚರಿಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ನವೆಂಬರ್ 7ರಂದು ಕನ್ನಡ ರಥ  ಆಗಮಿಸಲಿದೆ.


ರಥಯಾತ್ರೆಯ ವೇಳಾಪಟ್ಟಿ. :

ನವೆಂಬರ್ 7ರಂದು ಬೆಳಿಗ್ಗೆ 9.30 ಗಂಟೆಗೆ ಮೂಡಬಿದ್ರೆಯಲ್ಲಿ ಸ್ವಾಗತ, ಮಧ್ಯಾಹ್ನ 12 ಮಂಗಳೂರು ಪುರಭವನಕ್ಕೆ ಆಗಮನ, ಸಂಜೆ 3 ತೊಕ್ಕೊಟ್ಟು, ಉಳ್ಳಾಲಕ್ಕೆ ಆಗಮನ, ಸಂಜೆ 4:30 ಮಂಜೇಶ್ವರ ಗೋವಿಂದ ಪೈ ಸಂಶೋಧನ ಕೇಂದ್ರಕ್ಕೆ ಆಗಮನ, ಸಂಜೆ 5:30 ಮಂಜೇಶ್ವರದಿಂದ ಮಂಗಳೂರಿಗೆ ಪ್ರಯಾಣ, ಸಂಜೆ 6:30 ಮಂಗಳೂರು ಪ್ರವಾಸಿ ಮಂದಿರದಲ್ಲಿ ತಂಗಲಿದೆ.


ನವೆಂಬರ್ 8ರಂದು ಬೆಳಿಗ್ಗೆ 8.30 ಮಂಗಳೂರಿನಿಂದ ಬಂಟ್ವಾಳಕ್ಕೆ ಪ್ರಯಾಣ, ಬೆಳಿಗ್ಗೆ 10 ಬಂಟ್ವಾಳಕ್ಕೆ ಆಗಮನ, ಮಧ್ಯಾಹ್ನ 12 ಪುತ್ತೂರಿಗೆ ಆಗಮನ, ಸಂಜೆ 4 ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ತಂಗಲಿದೆ.


ನವೆಂಬರ್ 9ರಂದು ಬೆಳಿಗ್ಗೆ 8.30 ಗಂಟೆಗೆ ಬೆಳ್ತಂಗಡಿ, ಬೆಳಿಗ್ಗೆ 9:00 ಗಂಟೆಗೆ ಉಜಿರೆ, ಬೆಳಿಗ್ಗೆ 10:00 ಧರ್ಮಸ್ಥಳ, ಮಧ್ಯಾಹ್ನ 12 ಕಡಬ, ಸಂಜೆ 3:30ಸುಳ್ಯ ಪ್ರವಾಸಿ ಮಂದಿರದಲ್ಲಿ ತಂಗುವಿಕೆ. ನವೆಂಬರ್ 10ರಂದು ಬೆಳಿಗ್ಗೆ 8.30 ಗಂಟೆಗೆ ಸುಳ್ಯದಿಂದ ಮಡಿಕೇರಿಗೆ ನಿರ್ಗಮಿಸಲಿದೆ.



Post a Comment

0 Comments
Post a Comment (0)
To Top