ಪ್ರಾತಿನಿಧಿಕ ಚಿತ್ರ
ಕಾರ್ಕಳ: ಕಾರ್ಕಳದ ಪ್ರತಿಷ್ಠಿತ ವಿದ್ಯಾಸಂಸ್ಥೆ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದ ಉಡುಪಿ ವಿಭಾಗದ ಪುರುಷರ ಕಬಡ್ಡಿ ಪಂದ್ಯಾಟವು ಡಿಸೆಂಬರ್ 4ರಂದು ಆಯೋಜನೆಗೊಳ್ಳಲಿದೆ. ಉಡುಪಿ ವಿಭಾಗದ ಸುಮಾರು 30 ಪ್ರಥಮ ದರ್ಜೆ ಕಾಲೇಜುಗಳು ಈಗಾಗಲೇ ತಮ್ಮ ತಂಡಗಳನ್ನು ನೋಂದಾಯಿಸಿರುತ್ತವೆ.
ಸುಮಾರು 350 ಕ್ರೀಡಾಪಟುಗಳು, 60 ಮಂದಿ ತಂಡದ ತರಬೇತುದಾರರು, ವ್ಯವಸ್ಥಾಪಕರು, ಕ್ರೀಡಾಧಿಕಾರಿಗಳು ಪಾಲ್ಗೊಳ್ಳುವ ಈ ಕ್ರೀಡಾಕೂಟದ ಯಶಸ್ಸಿಗಾಗಿ ಕ್ರೀಡಾಪ್ರೇಮಿಗಳು, ಕ್ರೀಡಾ ಪೋಷಕರು, ದಾನಿಗಳು, ಕಾಲೇಜು ಅಭಿವೃದ್ಧಿ ಸಮಿತಿ, ಕಾಲೇಜಿನ ಹಳೆವಿದ್ಯಾರ್ಥಿ ಸಂಘ, ಶಿಕ್ಷಕ-ರಕ್ಷಕ ಸಂಘ, ಕಾಲೇಜಿನ ಸಿಬ್ಬಂದಿ ವೃಂದ ಹಾಗೂ ವಿದ್ಯಾರ್ಥಿಗಳು ಶ್ರಮಿಸುತ್ತಿದ್ದಾರೆ.
ಬೆಳಗ್ಗೆ 9.30ಕ್ಕೆ ಸ್ಥಳೀಯ ಶಾಸಕ ಸುನಿಲ್ ಕುಮಾರ್ ಅವರು ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ. ಸಂಜೆ 6.30ಕ್ಕೆ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭವು ನಡೆಯಲಿದೆ. ಈ ಪಂದ್ಯಾಟವು ಖಂಡಿತವಾಗಿ ಕಾರ್ಕಳ ಪರಿಸರದ ಕಬಡ್ಡಿ ಪ್ರೇಮಿಗಳಿಗೆ ಸಂತೋಷವನ್ನುಂಟು ಮಾಡಲಿದೆ ಹಾಗೂ ಆಟಗಾರರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅತ್ಯುತ್ತಮ ವೇದಿಕೆಯಾಗಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ್ ರೈ. ಕೆ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ